ವಿಡಿಯೋ: ಐದು ಎಸೆತ, ಐದು ಸಿಕ್ಸರ್, ಐಪಿಎಲ್ ಗೆ ಧೋನಿ ಭರ್ಜರಿ ಸಿದ್ಧತೆ

ಐಸಿಸಿ ಏಕದಿನ ವಿಶ್ವಕಪ್ ಬಳಿಕ ಕ್ರಿಕೆಟ್ ನಿಂದ ದೂರ ಉಳಿದಿದ್ದ ಮಿಸ್ಟರ್ ಕೂಲ್ ಧೋನಿ ಇದೀಗ ಮೈಕೊಡವಿ ಎದ್ದು ನಿಂತಿದ್ದು, ಐಪಿಎಲ್ 2020ಕ್ಕೆ ಭರ್ಜರಿ ಸಿದ್ಧತೆ ನಡೆಸಿದ್ದಾರೆ.
ಧೋನಿ ಸಿಕ್ಸರ್
ಧೋನಿ ಸಿಕ್ಸರ್

ಚೆನ್ನೈ: ಐಸಿಸಿ ಏಕದಿನ ವಿಶ್ವಕಪ್ ಬಳಿಕ ಕ್ರಿಕೆಟ್ ನಿಂದ ದೂರ ಉಳಿದಿದ್ದ ಮಿಸ್ಟರ್ ಕೂಲ್ ಧೋನಿ ಇದೀಗ ಮೈಕೊಡವಿ ಎದ್ದು ನಿಂತಿದ್ದು, ಐಪಿಎಲ್ 2020ಕ್ಕೆ ಭರ್ಜರಿ ಸಿದ್ಧತೆ ನಡೆಸಿದ್ದಾರೆ.

ಇದೇ ಮಾರ್ಚ್ 29ರಿಂದ ಆರಂಭವಾಗಲಿರುವ ಐಪಿಎಲ್ 2020 ಟೂರ್ನಿಗೆ ಧೋನಿ ಭರ್ಜರಿ ತಾಲೀಮು ಆರಂಭಿಸಿದ್ದು, ಅಭ್ಯಾಸ ಮಾಡುವಾಗಲೇ ಧೋನಿ ಐದು ಎಸೆತಕ್ಕೆ ಐದು ಸಿಕ್ಸರ್ ಸಿಡಿಸಿ ತಾವು ಐಪಿಎಲ್ ಗೆ ಸಿದ್ದ ಎಂಬ ಸಂದೇಶ ರವಾನಿಸಿದ್ದಾರೆ. 

ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯ ಟ್ವೆಂಟಿ-20 ಟೂರ್ನಿಗಾಗಿ ಪೂರ್ವ ಸಿದ್ಧತೆಯನ್ನು ಆರಂಭಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಅಭ್ಯಾಸದ ಅವಧಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಚೆನ್ನೈನ ಎಂ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಅಭ್ಯಾಸದ ಅವಧಿಯ ವೇಳೆಯಲ್ಲಿ ಧೋನಿ ತಾವು ಎದುರಿಸಿದ ಎಲ್ಲ ಐದು ಎಸೆತಗಳನ್ನು ಸಿಕ್ಸರ್‌ಗಟ್ಟಿದರು. ಧೋನಿ ಅವರ ಈ ಬ್ಯಾಟಿಂಗ್ ನೋಡಿದರೆ ದೀರ್ಘ ಸಮಯದಿಂದ ಸ್ಪರ್ಧಾತ್ಮಕ ಕ್ರಿಕೆಟ್ ಕ್ಷೇತ್ರದಿಂದ ದೂರವುಳಿದಿದ್ದ ಅದೇ ಧೋನಿಯೇ ಇದು ಎಂಬ ಶಂಕೆ ಮೂಡುತ್ತದೆ. 

ಈ ಮೂಲಕ ಟೀಮ್ ಇಂಡಿಯಾಗೆ ಕಮ್‌ಬ್ಯಾಕ್ ಮಾಡುವುದಕ್ಕೆ ಸಂಬಂಧಿಸಿದಂತೆ ಆಯ್ಕೆ ಸಮಿತಿಗೆ ಸ್ಪಷ್ಟ ಸೂಚನೆಯನ್ನು ರವಾನಿಸಿದ್ದಾರೆ. 2019ರ ಜುಲೈ ನಂತರ ಇದೇ ಮೊದಲ ಬಾರಿ ಮುಂಬರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲು ಧೋನಿ ಸಜ್ಜಾಗಿದ್ದಾರೆ.  ನೆಟ್‌ ಅಭ್ಯಾಸದ ವೇಳೆ ಸತತ ಐದು ಸಿಕ್ಸರ್‌ ಬಾರಿಸುವ ಮೂಲಕ ಎಲ್ಲರನ್ನು ಆಕರ್ಷಿಸಿರುವ ವಿಕೆಟ್‌ ಕೀಪರ್‌ ಧೋನಿ, ತಮ್ಮಲ್ಲಿನ ಸಾಮರ್ಥ್ಯ ಇನ್ನೂ ಕುಂದಿಲ್ಲಎಂಬುದುನ್ನು ಎದುರಾಳಿ ತಂಡಗಳಿಗೆ ರವಾನಿಸಿದ್ದಾರೆ. 

ಮಾ.29ರಂದು ಹಾಲಿ ಚಾಂಪಿಯನ್ ಮುಂಬಯಿ ಇಂಡಿಯನ್ಸ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ನಡುವಿನ ಪಂದ್ಯದೊಂದಿಗೆ ಐಪಿಎಲ್‌ಗೆ ಚಾಲನೆ ಸಿಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com