ಆಸೀಸ್ ವೇಗಿ ಕೇನ್ ರಿಚರ್ಡ್ ಸನ್ ಗೆ ಕೊರೋನಾ ವೈರಸ್ ಸೋಂಕು ಭೀತಿ! 

ಇಡೀ ವಿಶ್ವವೇ ಪ್ರಸ್ತುತ ಕೊರೊನಾ ವೈರಸ್‌ ಭೀತಿಯಲ್ಲಿ ಮುಳುಗಿದೆ. ಈ ಮಹಾಮಾರಿ ವೈರಸ್‌ ಜಾಗತಿಕ ಕ್ರೀಡಾಚಟುವಟಿಕೆಗಳ ಮೇಲೆ ಗಂಭೀರ ಪ್ರಭಾವ ಬೀರಿದೆ
ಕೇನ್ ರಿಚರ್ಡ್ ಸನ್
ಕೇನ್ ರಿಚರ್ಡ್ ಸನ್

ಸಿಡ್ನಿ: ಇಡೀ ವಿಶ್ವವೇ ಪ್ರಸ್ತುತ ಕೊರೊನಾ ವೈರಸ್‌ ಭೀತಿಯಲ್ಲಿ ಮುಳುಗಿದೆ. ಈ ಮಹಾಮಾರಿ ವೈರಸ್‌ ಜಾಗತಿಕ ಕ್ರೀಡಾಚಟುವಟಿಕೆಗಳ ಮೇಲೆ ಗಂಭೀರ ಪ್ರಭಾವ ಬೀರಿದೆ

ಮಾರ್ಚ್‌ 29 ರಿಂದ ಆರಂಭವಾಗುವ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ರಾಯಲ್‌ ಚಾಂಲೆಂಜರ್ಸ್ ಬೆಂಗಳೂರು ಪರ ಆಡಬೇಕಿರುವ ಆಸ್ಟ್ರೇಲಿಯಾದ ಕೇನ್ ರಿಚರ್ಡ್‌ಸನ್‌ಗೆ ಕೊರೊನಾ ವೈರಸ್‌ ಸೋಂಕು ತಗುಲಿರುವ ಕುರಿತು ಅನುಮಾನ ವ್ಯಕ್ತವಾಗಿದೆ.

ಇದರ ಪರಿಣಾಮ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಿಂದ ಕೇನ್ ರಿಚರ್ಡ್ಸನ್ ಹೊರಗುಳಿದಿದ್ದಾರೆ. ಕೇನ್ ರಿಚರ್ಡ್ಸನ್‌ಗೆ ಗಂಟಲು ನೋವು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಪಂದ್ಯದಿಂದ ಹೊರ ನಡೆದಿದ್ದಾರೆ.

ಕೇನ್ ರಿಚರ್ಡ್‌ಸನ್‌ ಆಸ್ಟ್ರೇಲಿಯಾ ಏಕದಿನ ತಂಡದೊಂದಿಗೆ ದಕ್ಷಿಣ ಆಫ್ರಿಕಾದಿಂದ ಇತ್ತೀಚಿಗಷ್ಟೇ ಮರಳಿದ್ದರು. ಅಲ್ಲದೆ ಗಂಟಲು ನೋವಿನ ಬಗ್ಗೆ ವೈದ್ಯಕೀಯ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಇದರಂತೆ ಕೋವಿಡ್ 19 ಸೋಂಕು ತಗುಲಿದೆಯೇ ಎಂಬುದನ್ನು ಪರೀಕ್ಷೆ ಮಾಡಲಾಗುತ್ತಿದೆ

29ರ ಹರೆಯದ ಕೇನ್ ರಿಚರ್ಡ್‌ಸನ್ ಆರೋಗ್ಯ ಸ್ಥಿರವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಕೊರೊನಾ ವೈರಸ್ ಸೋಂಕು ತಗುಲಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಇದರಿಂದಾಗಿ ಮೊದಲ ಏಕದಿನ ಪಂದ್ಯದಲ್ಲಿ ಆಡದಂತೆ ಸೂಚಿಸಲಾಗಿದೆ

"ನಮ್ಮ ವೈದ್ಯಕೀಯ ಸಿಬ್ಬಂದಿಯು ಇದನ್ನು ಗಂಟಲಿನ ಸೋಂಕು ಆಗಿ ಪರಿಗಣಿಸುತ್ತಿದ್ದಾರೆ. ಆದರೆ ಆಸ್ಟ್ರೇಲಿಯಾ ಸರಕಾರದ ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದೇವೆ. ಹಾಗಾಗಿ ಕೇನ್ ರಿಚರ್ಡ್ಸನ್ ಅವರನ್ನು ತಂಡದ ಇತರೆ ಸದಸ್ಯರಿಂದ ದೂರವಿಸಲಾಗಿದೆ. ಕಳೆದ 14 ದಿನಗಳಲ್ಲಿ ಅಂತಾರಾಷ್ಟ್ರೀಯ ಪ್ರಯಾಣದಿಂದ ಹಿಂತಿರುಗಿರುವ ಹಿನ್ನೆಲೆಯಲ್ಲಿ ಕೋವಿಡ್ 19 ಸೋಂಕಿಗೆ ಸಂಬಂಧಿಸಿದಂತೆ ಸೂಕ್ತ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ" ಎಂದು ಕ್ರಿಕೆಟ್ ಆಸ್ಟ್ರೇಲಿಯಾ ವಕ್ತಾರರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com