ಗಲ್ಲಿ ಕ್ರಿಕೆಟ್: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಫೀಲ್ಡರ್ಸ್‌ಗಳೇ ಬಾಲ್ ಬಾಯ್‌ಗಳು, ವಿಡಿಯೋ ವೈರಲ್!
ಮಹಾಮಾರಿ ಕೊರೋನಾ ವೈರಸ್ ಭೀತಿಯಿಂದಾಗಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ನಡುವಿನ ಏಕದಿನ ಪಂದ್ಯದಲ್ಲಿ ಪ್ರೇಕ್ಷಕರ ಕೊರತೆ ಎದುರಾಗಿತ್ತು. ಖಾಲಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದಂತೆ ಭಾಸವಾಯಿತು.
Published: 14th March 2020 04:43 PM | Last Updated: 14th March 2020 04:43 PM | A+A A-

ಸಂಗ್ರಹ ಚಿತ್ರ
ಸಿಡ್ನಿ: ಮಹಾಮಾರಿ ಕೊರೋನಾ ವೈರಸ್ ಭೀತಿಯಿಂದಾಗಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ನಡುವಿನ ಏಕದಿನ ಪಂದ್ಯದಲ್ಲಿ ಪ್ರೇಕ್ಷಕರ ಕೊರತೆ ಎದುರಾಗಿತ್ತು. ಖಾಲಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದಂತೆ ಭಾಸವಾಯಿತು. ಈ ವೇಳೆ ಸಿಕ್ಸರ್ ಹೊಡೆದರೆ ಫೀಲ್ಡರ್ಸ್‌ಗಳೇ ಬಾಲ್ ಬಾಯ್‌ಗಳಾಗಿ ಚೆಂಡನ್ನು ಹುಡುಕುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಸಿಡ್ನಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಆಸ್ಟ್ರೇಲಿಯಾ 71 ರನ್ ಗಳಿಂದ ಜಯಗಳಿಸಿತ್ತು. ಕೊರೋನಾ ವೈರಸ್ ಎಫೆಕ್ಟ್ ನಿಂದಾಗಿ ಇಂದು ಕ್ರೀಡಾಂಗಣ ಖಾಲಿ ಹೊಡೆಯುತ್ತಿತ್ತು. ಹೀಗಾಗಿ ಸಿಕ್ಸರ್ ಹೊಡೆದರೆ ಫೀಲ್ಡರ್ ಗಳೇ ಚೆಂಡನ್ನು ಹುಡುಕಿ ತರಬೇಕಿತ್ತು.
International + gully cricket#ausvsnz pic.twitter.com/gm9gJ5vdEv
— Navdeep Kumar (@_Oyegabbar) March 13, 2020
ಪ್ರೇಕ್ಷಕರ ಕೊರತೆ ಹಿನ್ನಲೆಯಲ್ಲಿ ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯನ್ನು ರದ್ದುಪಡಿಸಲಾಗಿದೆ. ಸರಣಿ ರದ್ದಾಗಿದ್ದರಿಂದ ನ್ಯೂಜಿಲ್ಯಾಂಡ್ ಸಹ ಸ್ವದೇಶಕ್ಕೆ ಮರಳಿದೆ.
New Zealand bowler Lockie Ferguson had to go inside the stands to get the ball in a game against Australia in Sydney.
— Aayush Sharma (@AayuJourno) March 13, 2020
The 1st ODI is being played behind closed doors due to #Coronavirus. #AUSvNZ #AUSvsNZ pic.twitter.com/85mZdIuf4d