ಜಡೇಜಾರನ್ನು ಟೀಕಿಸಿದ್ದ ಸಂಜಯ್ ಮಾಂಜ್ರೇಕರ್ ಗೆ ಬಿಸಿಸಿಐನಿಂದ ಗೇಟ್ ಪಾಸ್!

ಅತ್ಯುತ್ತಮ ವಿಶ್ಲೇಷಣಾಕಾರರಾಗಿ ಗುರುತಿಸಿಕೊಂಡಿದ್ದ ಸಂಜಯ್ ಮಾಂಜ್ರೇಕರ್ ರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ದಿಢೀರ್ ಅಂತ ತಂಡದಿಂದ ಕೈಬಿಟ್ಟಿರುವುದು ಅಚ್ಚರಿ ಮೂಡಿಸಿದೆ. 
ಜಡೇಜಾ-ಸಂಜಯ್ ಮಾಂಜ್ರೇಕರ್
ಜಡೇಜಾ-ಸಂಜಯ್ ಮಾಂಜ್ರೇಕರ್

ಅತ್ಯುತ್ತಮ ವಿಶ್ಲೇಷಣಾಕಾರರಾಗಿ ಗುರುತಿಸಿಕೊಂಡಿದ್ದ ಸಂಜಯ್ ಮಾಂಜ್ರೇಕರ್ ರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ದಿಢೀರ್ ಅಂತ ತಂಡದಿಂದ ಕೈಬಿಟ್ಟಿರುವುದು ಅಚ್ಚರಿ ಮೂಡಿಸಿದೆ. 

ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯನ್ನು ರದ್ದು ಮಾಡಿದ ಬೆನ್ನಲ್ಲೇ ಬಿಸಿಸಿಐ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. 

ಧರ್ಮಶಾಲಾಯದಲ್ಲಿ ಟೀಂ ಇಂಡಿಯಾ ಮತ್ತು ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯ ಮಳೆಯಿಂದ ರದ್ದಾಗಿತ್ತು. ಇನ್ನು ಪಂದ್ಯದ ವೇಳೆ ಬಿಸಿಸಿಐ ಪ್ಯಾನಲ್ ವಿಶ್ಲೇಷಣಾಕಾರರಾದ ಸುನೀಲ್ ಗವಾಸ್ಕರ್, ಎಲ್ ಶಿವರಾಮಕೃಷ್ಣನ್ ಹಾಗೂ ಮುರಳಿ ಕಾರ್ತಿಕ್ ಹಾಜರಿದ್ದರು. ಆದರೆ ಸಂಜಯ್ ಮಾಂಜ್ರೇಕರ್ ಗೈರಾಗಿದ್ದರು. 

ಇದೇ ವೇಳೆ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ವಿಶ್ಲೇಷಣಾಕಾರರ ಕೂಟದಿಂದಲೂ ಮಾಂಜ್ರೇಕರ್ ಅವರನ್ನು ಕೈಬಿಡಲು ಬಿಸಿಸಿಐ ನಿರ್ಧರಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಸದಾ ವಿವಾದಗಳಿಂದ ಸುದ್ದಿಯಾಗುತ್ತಿದ್ದ ಸಂಜಯ್ ಮಾಂಜ್ರೇಕರ್ ಅವರು ಏಕದಿನ ವಿಶ್ವಕಪ್ ಟೂರ್ನಿಯ ಸಂದರ್ಭದಲ್ಲಿ ಭಾರತದ ಆಲ್ರೌಂಡರ್ ರವೀಂದ್ರ ಜಡೇಜಾರನ್ನು ಟೀಕಿಸಿ ಟ್ರೋಲ್ ಗೆ ಗುರಿಯಾಗಿದ್ದರು. ಇದೇ ಅಲ್ಲದೆ ಕಾಮೆಂಟೇಟರ್ ಹರ್ಷ ಭೋಗ್ಲೆ ಅವರನ್ನು ಟೀಕಿಸಿ ವಿವಾದಕ್ಕೀಡಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com