ಕಾಮೆಂಟರಿ ಪ್ಯಾನೆಲ್‍ನಿಂದ ತಮ್ಮ ಹೆಸರು ಕೈಬಿಟ್ಟ ಬಿಸಿಸಿಐ, ಮಂಜ್ರೇಕರ್ ಹೇಳಿದ್ದೇನು?

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐ ಇತ್ತೀಚೆಗೆ ತನ್ನ ಕಾಮೆಂಟರಿ ಪ್ಯಾನೆಲ್‍ನಿಂದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅವರ ಹೆಸರನ್ನು ಕೈ ಬಿಟ್ಟಿತ್ತು, ಇದೀಗ ಬಿಸಿಸಿಐನ ಈ ನಡೆ ಕುರಿತು ಸಂಜಯ್ ಮಂಜ್ರೇಕರ್ ಪ್ರತಿಕ್ರಿಯೆ ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐ ಇತ್ತೀಚೆಗೆ ತನ್ನ ಕಾಮೆಂಟರಿ ಪ್ಯಾನೆಲ್‍ನಿಂದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅವರ ಹೆಸರನ್ನು ಕೈ ಬಿಟ್ಟಿತ್ತು, ಇದೀಗ ಬಿಸಿಸಿಐನ ಈ ನಡೆ ಕುರಿತು ಸಂಜಯ್ ಮಂಜ್ರೇಕರ್ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಸಂಜಯ್ ಮಂಜ್ರೇಕರ್, ವೀಕ್ಷಕ ವಿವರಣೆ ಹುದ್ದೆ ನನಗೆ ಸಿಕ್ಕಿದ್ದನ್ನು ದೊಡ್ಡ ಜವಾಬ್ದಾರಿ ಎಂದು ಪರಿಗಣಿಸುತ್ತೇನೆ. ಅದು ಒಂದು ಅರ್ಹತೆಯಲ್ಲ. ನನ್ನನ್ನು ಮತ್ತೆ ಆಯ್ಕೆ ಮಾಡುವುದು ಬಿಡುವುದು ಬಿಸಿಸಿಐಗೆ ಬಿಟ್ಟ ವಿಚಾರ. ಅದನ್ನು ನಾನು ಯಾವಗಲೂ ಗೌರವಿಸುತ್ತೇನೆ. ಬಹುಶಃ ನನ್ನ ಹಿಂದಿನ ಕೆಲಸ ಬಿಸಿಸಿಐ ಅವರಿಗೆ ಇಷ್ಟವಾಗಿಲ್ಲ ಅನ್ನಿಸುತ್ತದೆ. ವೃತ್ತಿಪರನಾಗಿ ಈ ವಿಚಾರವನ್ನು ಸ್ವೀಕರಿಸುತ್ತೇನೆ ಎಂದು ಹೇಳಿದ್ದಾರೆ.

ಈ ಹಿಂದೆ ಬಿಸಿಸಿಐ ಅಧ್ಯಕ್ಷರಾಗುವುದಕ್ಕೂ ಮೊದಲು ಸೌರವ್ ಗಂಗೂಲಿ ಮಂಜ್ರೇಕರ್ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. 2019ರ ಜೂನ್ 9 ರಂದು ಹೆಸರು ಪ್ರಸ್ತಾಪಿಸದೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದ ಸೌರವ್ ಗಂಗೂಲಿ, ಟ್ವಿಟ್ಟರ್ ನಲ್ಲಿ ಅವರು ಮಾಡಿದ ಕಾಮೆಂಟ್, ಬ್ಯಾಟಿಂಗ್ ಅರ್ಥಹೀನ. ಅವರಿಗೆ ಆಲೋಚನೆಗಳ ಕೊರತೆಯಂತಿದೆ. ಅವರು ಕೇವಲ ನಕಾರಾತ್ಮಕ ರೀತಿಯಲ್ಲಿ ಗಮನ ಸೆಳೆಯುವವರಾಗಿರಬಹುದು ಎಂದು ಬರೆದುಕೊಂಡಿದ್ದರು.

ಇನ್ನು ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಲ್‍ರೌಂಡರ್ ರವೀಂದ್ರ ಜಡೇಜಾ ಹಾಗೂ ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೇಜರ್ ನಡುವೆ ವಾಕ್ ಯುದ್ಧ ನಡೆದಿತ್ತು. ಅಂದು ಜಡೇಜಾರಂತಹ `ಬಿಟ್ಸ್ ಅಂಡ್ ಪೀಸಸ್’ ಆಟಗಾರನಿಗೆ ನಾನು ಅಭಿಮಾನಿಯಲ್ಲ. ಜಡೇಜಾ ಟೆಸ್ಟ್ ಏಕದಿನ ಮಾದರಿ ಸಿಮೀತ ಓವರ್ ಗಳ ಕ್ರಿಕೆಟ್‍ಗೆ ಫಿಟ್ ಅಲ್ಲ. ಆತ ಟೆಸ್ಟ್ ಕ್ರಿಕೆಟ್ ಮಾತ್ರ ಅಗತ್ಯ ಎಂದು ವ್ಯಾಖ್ಯಾನಿಸಿದ್ದರು.

ಮಂಜ್ರೇಕರ್ ಅವರ ಈ ಕಾಮೆಂಟ್‍ಗಳಿಗೆ ತಿರುಗೇಟು ನೀಡಿದ್ದ ಜಡೇಜಾ, ತನ್ನ ಸ್ಥಾನ ಯಾವುದು ಎಂದು ತಿಳಿದುಕೊಂಡು ಮಾತನಾಡಿ. ನಿಮಗಿಂತ ಹೆಚ್ಚು ಪಂದ್ಯಗಳನ್ನು ದೇಶದ ಪರ ಆಡಿದ್ದೇನೆ ಎಂದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com