ಆಸಿಸ್ ನಾಯಕ ಆ್ಯರೋನ್ ಫಿಂಚ್
ಆಸಿಸ್ ನಾಯಕ ಆ್ಯರೋನ್ ಫಿಂಚ್

ಭಾರತದ ಭುವಿ ಮತ್ತು ಬುಮ್ರಾ ಕನಸಿನಲ್ಲೂ ಕಾಡುತ್ತಿದ್ದರು: ಆಸಿಸ್ ನಾಯಕ ಆ್ಯರೋನ್ ಫಿಂಚ್

ಭಾರತ ಕ್ರಿಕೆಟ್ ತಂಡದ ವೇಗಿಗಳಾದ ಜಸ್ ಪ್ರೀತ್ ಬುಮ್ರಾ ಹಾಗೂ ಭುವನೇಶ್ವರ್ ಕುಮಾರ್ ಕನಸಿನಲ್ಲೂ ನನ್ನನ್ನು ಕಾಡುತ್ತಿದ್ದರು ಎಂದು ಆಸ್ಟ್ರೇಲಿಯಾ ಏಕದಿನ ಮತ್ತು ಟಿ20 ಕ್ರಿಕೆಟ್‌ ತಂಡದ ನಾಯಕ ಆ್ಯರನ್‌ ಫಿಂಚ್‌ ಹೇಳಿದ್ದಾರೆ.

ನವದೆಹಲಿ: ಭಾರತ ಕ್ರಿಕೆಟ್ ತಂಡದ ವೇಗಿಗಳಾದ ಜಸ್ ಪ್ರೀತ್ ಬುಮ್ರಾ ಹಾಗೂ ಭುವನೇಶ್ವರ್ ಕುಮಾರ್ ಕನಸಿನಲ್ಲೂ ನನ್ನನ್ನು ಕಾಡುತ್ತಿದ್ದರು ಎಂದು ಆಸ್ಟ್ರೇಲಿಯಾ ಏಕದಿನ ಮತ್ತು ಟಿ20 ಕ್ರಿಕೆಟ್‌ ತಂಡದ ನಾಯಕ ಆ್ಯರನ್‌ ಫಿಂಚ್‌ ಹೇಳಿದ್ದಾರೆ.

ಭಾರತ ಕ್ರಿಕೆಟ್‌ ತಂಡವು 4 ಟೆಸ್ಟ್‌, 3 ಏಕದಿನ ಹಾಗೂ 3 ಟಿ20 ಪಂದ್ಯಗಳಲ್ಲಿ ಆಡಲು 2018ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಫಿಂಚ್‌ ಈ ವೇಳೆ ಮೂರೂ ಮಾದರಿಯಲ್ಲಿ ರನ್‌ ಗಳಿಸಲು ಪರದಾಡಿದ್ದರು. 3 ಟೆಸ್ಟ್‌ ಪಂದ್ಯಗಳ 6 ಇನಿಂಗ್ಸ್‌ಗಳಿಂದ ಕೇವಲ 97 ರನ್ ಗಳಿಸಿದ್ದ ಅವರು, ಮೂರು ಏಕದಿನ ಪಂದ್ಯಗಳಿಂದ ಕೇವಲ 26ರನ್‌ ಮತ್ತು ಮೂರು ಟಿ20 ಇನಿಂಗ್ಸ್‌ಗಳಿಂದ 55 ರನ್ ಗಳಿಸಿದ್ದರು.

2018ರ ಭಾರತ ತಂಡದ ಆಸಿಸ್ ಪ್ರವಾಸದ ಕುರಿತು ಮೆಲುಕು ಹಾಕಿರುವ ಫಿಂಚ್, ಭಾರತ ಕ್ರಿಕೆಟ್‌ ತಂಡದ ವೇಗಿಗಳಾದ ಜಸ್‌ಪ್ರೀತ್‌ ಬೂಮ್ರಾ ಮತ್ತು ಭುವನೇಶ್ವರ್‌ ಕುಮಾರ್‌ ಅವರು ತಮ್ಮನ್ನು ದುಸ್ವಪ್ನವಾಗಿ ಕಾಡಿದ್ದರು. ಭುವನೇಶ್ವರ್‌ ಇನ್‌ಸ್ವಿಂಗ್‌ ಬೌಲಿಂಗ್‌ ಮೂಲಕ ನನ್ನನ್ನು ಸಾಕಷ್ಟು ಸಲ ಔಟ್‌ ಮಾಡಿದ್ದರು. ಇದನ್ನು ನೆನದು ಬೆವರಿ ಸಾಕಷ್ಟು ಸಲ ಹಾಸಿಗೆಯಿಂದ ಎದ್ದು ಕೂತಿದ್ದೆ. ಭುವಿ ಮಾತ್ರವಲ್ಲದೆ ಜಸ್ ಪ್ರೀತ್ ಬೂಮ್ರಾ ಕೂಡ ತಮ್ಮನ್ನು ಕಾಡಿದ್ದರು ಎಂದು ಫಿಂಚ್ ಹೇಳಿದ್ದಾರೆ. 

ರಾತ್ರಿ ವೇಳೆ ಎದ್ದು ಕುಳಿತು ನಾನು ಔಟಾದ ರೀತಿಯ ಬಗ್ಗೆ ಸಾಕಷ್ಟು ಸಲ ಯೋಚಿಸಿದ್ದೇನೆ. ನಾಳೆ ಮತ್ತೆ ಬೂಮ್ರಾ ಎಸೆತಗಳನ್ನು ಎದುರಿಸಬೇಕಿದೆಯಲ್ಲಾ ಎಂದು ಚಿಂತಿಸಿದ್ದೇನೆ. ಆತ ನನ್ನ ವಿಕೆಟ್‌ ಪಡೆಯುತ್ತಿದ್ದುದು ಗೇಲಿ ಮಾಡುತ್ತಿದ್ದಂತೆ ತೋರುತ್ತಿತ್ತು ಎಂದು ಫಿಂಚ್ ಹೇಳಿಕೊಂಡಿದ್ದಾರೆ.

ನಾಲ್ಕು ಪಂದ್ಯಗಳ ಬಾರ್ಡರ್–ಗವಾಸ್ಕರ್‌ ಟೆಸ್ಟ್‌ ಸರಣಿಯನ್ನು 2–1 ಅಂತರದಿಂದ ಗೆದ್ದು ಬೀಗಿದ್ದ ವಿರಾಟ್‌ ಕೊಹ್ಲಿ ಪಡೆ, ಅದೇ ಮೊದಲ ಸಲ ಆಸಿಸ್‌ ನೆಲದಲ್ಲಿ ಟೆಸ್ಟ್‌ ಸರಣಿ ಜಯಿಸಿದ ಭಾರತ ತಂಡ ಎಂಬ ದಾಖಲೆ ಬರೆದಿತ್ತು. ಈ ಟೂರ್ನಿಯಲ್ಲಿ ಒಟ್ಟು 21 ವಿಕೆಟ್‌ ಪಡೆದಿದ್ದ ಬೂಮ್ರಾ ಅತಿಹೆಚ್ಚು ವಿಕೆಟ್ ಪಡೆದ ಬೌಲರ್‌ ಎನಿಸಿದ್ದರು. ಟಿ20ಯಲ್ಲಿ 1–1ರ ಸಮಬಲ ಸಾಧಿಸಿದ್ದ ವಿರಾಟ್‌ ಪಡೆ, ಏಕದಿನ ಸರಣಿಯನ್ನು 2–1 ಅಂತರದಿಂದ ಗೆದ್ದುಕೊಂಡಿತ್ತು.  ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದ ಭುವನೇಶ್ವರ್‌, ತಲಾ ಮೂರು ಏಕದಿನ ಮತ್ತು ಟಿ20 ಇನಿಂಗ್ಸ್‌ಗಳಿಂದ ಒಟ್ಟು 4 ಬಾರಿ ಫಿಂಚ್‌ ವಿಕೆಟ್‌ ಪಡೆದಿದ್ದರು.

Related Stories

No stories found.

Advertisement

X
Kannada Prabha
www.kannadaprabha.com