ಟಿ20ಯಲ್ಲಿ ದ್ವಿಶತಕ ಸಿಡಿಸಬಲ್ಲ ಏಕೈಕ ಆಟಗಾರ ರೋಹಿತ್ ಶರ್ಮಾ ಮಾತ್ರ: ಆಸಿಸ್ ಆಟಗಾರ ಬ್ರಾಡ್ ಹಾಗ್

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ದ್ವಿಶತಕ ಸಿಡಿಸಬಲ್ಲ ಏಕೈಕ ಆಟಗಾರ ಎಂದರೆ ಅದು ಭಾರತದ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಮಾತ್ರ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಬ್ರಾಡ್ ಹಾಗ್ ಹೇಳಿದ್ದಾರೆ.
ರೋಹಿತ್ ಶರ್ಮಾ ಮತ್ತು ಬ್ರಾಡ್ ಹಾಗ್ (ಸಂಗ್ರಹ ಚಿತ್ರ)
ರೋಹಿತ್ ಶರ್ಮಾ ಮತ್ತು ಬ್ರಾಡ್ ಹಾಗ್ (ಸಂಗ್ರಹ ಚಿತ್ರ)

ನವದೆಹಲಿ: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ದ್ವಿಶತಕ ಸಿಡಿಸಬಲ್ಲ ಏಕೈಕ ಆಟಗಾರ ಎಂದರೆ ಅದು ಭಾರತದ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಮಾತ್ರ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಬ್ರಾಡ್ ಹಾಗ್ ಹೇಳಿದ್ದಾರೆ.

ಈ ಕುರಿತಂತೆ ಟ್ವಿಟರ್ ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಬ್ರಾಡ್ ಹಾಗ್, ಪ್ರಸಕ್ತ ಕ್ರಿಕೆಟಿಗರ ಪೈಕಿ ಭಾರತ ಕ್ರಿಕೆಟ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ ಅವರು ಟಿ20 ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಇದುವರೆಗೆ ಯಾವೊಬ್ಬ ಬ್ಯಾಟ್ಸ್‌ಮನ್‌ ಕೂಡ ದ್ವಿಶತಕ ಸಿಡಿಸಿಲ್ಲ. ಹಾಗಾಗಿ ಟ್ವಿಟರ್‌ನಲ್ಲಿ ಶಿವಂ ಜೈಸ್ವಾಲ್‌ ಎನ್ನುವವರು, ‘ಬ್ರಾಡ್‌ ಹಾಗ್‌, ನಿಮ್ಮ ಪ್ರಕಾರ ಟಿ20 ಕ್ರಿಕೆಟ್‌ನಲ್ಲಿ ಮೊದಲ ದ್ವಿಶತಕ ಸಿಡಿಸಬಲ್ಲ ಆಟಗಾರ ಯಾರಾಗಬಲ್ಲರು?’ ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಹಾಗ್‌, ‘ಸದ್ಯಕ್ಕೆ ರೋಹಿತ್‌ ಶರ್ಮಾ ಅವರಿಗೆ ಮಾತ್ರವೇ ಆ ಸಾಮರ್ಥ್ಯವಿದೆ ಎಂದು ಅಂದುಕೊಂಡಿದ್ದೇನೆ. ಉತ್ತಮ ಸ್ಟ್ರೈಕ್‌ರೇಟ್‌, ಒಳ್ಳೆಯ ಟೈಮಿಂಗ್‌, ಕ್ರೀಡಾಂಗಣದ ಎಲ್ಲ ಮೂಲೆಗಳಿಗೂ ಸಿಕ್ಸರ್ ಎತ್ತುವಂತಹ ಶಾಟ್‌ಗಳನ್ನು ಪ್ರಯೋಗಿಸಬಲ್ಲರು’ ಎಂದು ಹೇಳಿದ್ದಾರೆ.

ಇನ್ನು ಭಾರತದ ರೋಹಿತ್‌ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ ಮೂರು ಬಾರಿ ದ್ವಿಶತಕ ಸಿಡಿಸಿದ್ದಾರೆ. ಟಿ20ಯಲ್ಲಿ ಹೆಚ್ಚು (4) ಶತಕ ಸಿಡಿಸಿದ ದಾಖಲೆಯನ್ನೂ ಹೊಂದಿದ್ದಾರೆ. ಇದುವರೆಗೆ ಒಟ್ಟು 108 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿರುವ ಅವರು, 2,773 ರನ್ ಗಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com