ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಬಿಸಿಸಿಐ ಮಾಸ್ಟರ್ ಪ್ಲಾನ್

ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ(ಬಿಸಿಸಿಐ) ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ನಿರ್ಧರಿಸಿದ್ದು, ಇನ್ನು ಮುಂದೆ ಹಿರಿಯ ಹಾಗೂ ಜೂನಿಯರ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥರಿಗೆ ಮಾತ್ರ ಐಶಾರಾಮಿ ಪ್ರಯಾಣಕ್ಕೆ ಅವಕಾಶ ನೀಡಲಿದೆ.
ಸೌರವ್ ಗಂಗೂಲಿ-ಜಯ್ ಶಾ
ಸೌರವ್ ಗಂಗೂಲಿ-ಜಯ್ ಶಾ

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ(ಬಿಸಿಸಿಐ) ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ನಿರ್ಧರಿಸಿದ್ದು, ಇನ್ನು ಮುಂದೆ ಹಿರಿಯ ಹಾಗೂ ಜೂನಿಯರ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥರಿಗೆ ಮಾತ್ರ ಐಶಾರಾಮಿ ಪ್ರಯಾಣಕ್ಕೆ ಅವಕಾಶ ನೀಡಲಿದೆ. 

ಇನ್ನು ಬಿಸಿಸಿಐ ಜನರಲ್ ಮ್ಯಾನೇಜರ್ ಸಹ ಸಾಮಾನ್ಯರಂತೆ ಆರ್ಥಿಕ ವರ್ಗದಲ್ಲಿ ಪ್ರಯಾಣಿಸಲಿದ್ದಾರೆ. ಏಳು ಗಂಟೆಗಳಿಗಿಂತ ಹೆಚ್ಚಿಗೆ ವಿಮಾನದಲ್ಲಿ ಪ್ರಯಾಣಿಸುವ, ಎಲ್ಲಾ ಆಯ್ಕೆದಾರರಿಗೆ ವ್ಯಾಪಾರ ವರ್ಗದ ಆಸನಗಳನ್ನು ನೀಡಲಾಗುವುದು ಮತ್ತು ಏಳು ಗಂಟೆಗಳ ಕಡಿಮೆ ಅವಧಿಯ ಪ್ರಯಾಣದಲ್ಲಿ ಈ ಸೌಲಭ್ಯ ಬೇರೆಯವರಿಗೆ ಲಭ್ಯವಿಲ್ಲ. 

ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ ಸುನಿಲ್ ಜೋಶಿ ಹಾಗೂ ಆಶೀಶ್ ಕಪೂರ್ ಅವರು ಮಾತ್ರ ಬಿಸಿನೆಸ್ ಕ್ಲಾಸ್ ಮಾತ್ರ ಪ್ರಯಾಣ ಬೆಳೆಸಲಿದ್ದಾರೆ. 
 
2013ರಿಂದ ಈ ವರೆಗೆ ಆಯ್ಕೆ ಸಮಿತಿಯ ಮುಖ್ಯಸ್ಥರು ಹಾಗೂ ಸದಸ್ಯರು ಐಶಾರಾಮಿ ಆಸನಗಳಲ್ಲಿ ಪ್ರಯಾಣಿಸುತ್ತಿದ್ದರು. ದೇಶದಲ್ಲಿ ಪ್ರಯಾಣ ಬೆಳೆಸುವ ವೇಳೆ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್ ಶಾ ಬಿಸಿಸಿಐ ಖಜಾನೆಯ ಭಾರವನ್ನು ಉಳಿಸುವ ಯೋಜನೆಗೆ ಕೈ ಜೋಡಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com