ಕೋವಿಡ್ -19: ಜುಲೈ-ಸೆಪ್ಟೆಂಬರ್ ನಲ್ಲಿ ಐಪಿಎಲ್ -13 ನಡೆಸಲು ಬಿಸಿಸಿಐ ಚಿಂತನೆ

ಕೊರೋನಾ ವೈರಸ್ ಭೀತಿಯಿಂದಾಗಿ ರದ್ದಾಗುವ ಭೀತಿಯಲ್ಲಿರುವ ಐಪಿಎಲ್ 2020 ಟೂರ್ನಿಯನ್ನು ಜುಲೈ-ಸೆಪ್ಟೆಂಬರ್ ತಿಂಗಳಿಗೆ ಮುಂದೂಡಿಕೆ ಮಾಡುವ ಸಾಧ್ಯತೆ ಇದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದಹೆಲಿ: ಕೊರೋನಾ ವೈರಸ್ ಭೀತಿಯಿಂದಾಗಿ ರದ್ದಾಗುವ ಭೀತಿಯಲ್ಲಿರುವ ಐಪಿಎಲ್ 2020 ಟೂರ್ನಿಯನ್ನು ಜುಲೈ-ಸೆಪ್ಟೆಂಬರ್ ತಿಂಗಳಿಗೆ ಮುಂದೂಡಿಕೆ ಮಾಡುವ ಸಾಧ್ಯತೆ ಇದೆ.

ಕೋವಿಡ್-19ನಿಂದಾಗಿ ಪ್ರತಿಷ್ಠಿತ ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) ಈಗಾಗಲೇ ನಡೆಯುವ ಬಗ್ಗೆ ಎಲ್ಲರಲ್ಲಿಯೂ ಅನುಮಾನ ಮೂಡಿದೆ. ಬರುವ ತಿಂಗಳಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಬಾರದಿದ್ದರೆ ದೇಶದಲ್ಲಿ 13ನೇ ಆವೃತ್ತಿ ಐಪಿಎಲ್ ನಡೆಸುವುದರ ಬಗ್ಗೆ ಬಿಸಿಸಿಐ ಸಾಧಕ-ಬಾಧಕಗಳ ಬಗ್ಗೆ ನಿರಂತರವಾಗಿ ಚರ್ಚೆ ನಡೆಸುತ್ತಿದೆ. ಇದರ ಭಾಗವಾಗಿ ಜುಲೈ - ಸೆಪ್ಟೆಂಬರ್ ನಲ್ಲಿ ಟೂರ್ನಿ ನಡೆಸುವ ಕುರಿತಂತೆಯೂ ಬಿಸಿಸಿಐ ಹಾಗೂ ಐಪಿಎಲ್ ಆಡಳಿತ ಮಂಡಳಿ ಯೋಚಿಸುತ್ತಿದೆ.

ಮಾರ್ಚ್ 14ರಂದು ಬಿಸಿಸಿಐ ಅಧಿಕಾರಿಗಳು ಮತ್ತು ಐಪಿಎಲ್ ಆಡಳಿತ ಮಂಡಳಿ ಗೊಂದಲಕ್ಕೀಡಾಗಿರುವ ಐಪಿಎಲ್ ಆಯೋಜನೆ ಕುರಿತು ವಿಸ್ತೃತ ಚರ್ಚೆ ನಡೆಸಿದರಾದರೂ ಯಾವುದೇ ಒಮ್ಮತ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಇದು ಪ್ಲಾನ್ ಬಿಯಂತೆ ಕಂಡು ಬಂದಿದೆ. ಆದರೆ ಎ ಪ್ಲಾನ್ ನಲ್ಲಿ ಇದನ್ನು ಜಾರಿಗೊಳಿಸಲಾಗದು ಎನ್ನಲಾಗಿದೆ.

2020ನೇ ವರ್ಷ ಫ್ಯೂಚರ್ ಟೂರ್ ಪ್ರೋಗ್ರಾಂ (ಎಫ್ ಟಿಪಿ) ಕ್ರಿಕೆಟ್ ವಾರ್ಷಿಕ ವೇಳಾಪಟ್ಟಿ ಅನ್ವಯ ಜುಲೈ ಮತ್ತು ಸೆಪ್ಟೆಂಬರ್ ನಡುವೆ ಯುನೈಟೆಡ್ ಅರಬ್ ಎಮಿರೇಟ್ಸ್ ಆತಿಥ್ಯದಲ್ಲಿ ಏಷ್ಯಾ ಕಪ್ ಟಿ20 ನಡೆಯಲಿದೆ. ಈ ಅಧಿಯಲ್ಲಿ ಕಡಿಮೆ ಟೂರ್ನಿಗಳು ಇರುವ ಕಾರಣ 13ನೇ ಐಪಿಎಲ್ ಟೂರ್ನಿಯನ್ನು ಆಯೋಜಿಸಲು ಬಿಸಿಸಿಐ ಚಿಂತಿಸುತ್ತಿದೆ ಎನ್ನಲಾಗಿದೆ. ಆದರೆ ಫ್ರಾಂಚೈಸಿಗಳು, ಆಟಗಾರರು ಇದಕ್ಕೆ ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com