ಮಂಕಿಗೇಟ್ ಪ್ರಕರಣ ನನ್ನ ನಾಯಕತ್ವದಲ್ಲಿ ಘಟಿಸಿದ ಅತ್ಯಂತ ಕೆಟ್ಟ ಸನ್ನಿವೇಶ: ಪಾಂಟಿಂಗ್ ಕೊರಗು

12 ವರ್ಷಗಳ ಹಿಂದೆ ನಡೆದಿದ್ದ ಹಾಗೂ ಕ್ರಿಕೆಟ್ ಜಗತ್ತನ್ನು ತಲ್ಲಣಗೊಳಿಸಿದ್ದ 'ಮಂಕಿಗೇಟ್' ಪ್ರಕರಣ ಕುರಿತು ಆಸ್ಟ್ರೇಲಿಯಾ ತಂಡ ಮಾಜಿ ನಾಯಕ ರಿಕಿ ಪಾಂಟಿಂಗ್ ಸ್ಮರಿಸಿದ್ದು, ತಮ್ಮ ನಾಯಕತ್ವದಲ್ಲಿ ಘಟಿಸಿದ ಅತ್ಯಂತ ಕೆಟ್ಟ ಸನ್ನಿವೇಶ ಇದಾಗಿದೆ ಎಂದಿದ್ದಾರೆ.
ಮಂಕಿಗೇಟ್ ಪ್ರಕರಣ ನನ್ನ ನಾಯಕತ್ವದಲ್ಲಿ ಘಟಿಸಿದ ಅತ್ಯಂತ ಕೆಟ್ಟ ಸನ್ನಿವೇಶ: ಪಾಂಟಿಂಗ್ ಕೊರಗು
ಮಂಕಿಗೇಟ್ ಪ್ರಕರಣ ನನ್ನ ನಾಯಕತ್ವದಲ್ಲಿ ಘಟಿಸಿದ ಅತ್ಯಂತ ಕೆಟ್ಟ ಸನ್ನಿವೇಶ: ಪಾಂಟಿಂಗ್ ಕೊರಗು

ಮೆಲ್ಬೋರ್ನ್: 12 ವರ್ಷಗಳ ಹಿಂದೆ ನಡೆದಿದ್ದ ಹಾಗೂ ಕ್ರಿಕೆಟ್ ಜಗತ್ತನ್ನು ತಲ್ಲಣಗೊಳಿಸಿದ್ದ 'ಮಂಕಿಗೇಟ್' ಪ್ರಕರಣ ಕುರಿತು ಆಸ್ಟ್ರೇಲಿಯ ತಂಡ ಮಾಜಿ ನಾಯಕ ರಿಕಿ ಪಾಂಟಿಂಗ್ ಸ್ಮರಿಸಿದ್ದು, ತಮ್ಮ ನಾಯಕತ್ವದಲ್ಲಿ ಘಟಿಸಿದ ಅತ್ಯಂತ ಕೆಟ್ಟ ಸನ್ನಿವೇಶ ಇದಾಗಿದೆ ಎಂದಿದ್ದಾರೆ.

2007-08ನೇ ಸಾಲಿನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಜನವರಿ 2ರಿಂದ 6ರ ವರೆಗೆ ಸಿಡ್ನಿಯಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ಭಾರತೀಯ ಆಫ್ ಸಿನ್ನರ್ ಹರ್ಭಜನ್ ಸಿಂಗ್ ಹಾಗೂ ಆಸ್ಟ್ರೇಲಿಯಾ ಆಲ್‌ರೌಂಡರ್ ಆಂಡ್ರ್ಯೂ ಸೈಮಂಡ್ಸ್ ನಡುವೆ ಮಂಕಿಗೇಟ್ ವಿವಾದ ಹುಟ್ಟಿಕೊಂಡಿತ್ತು. ಅಂದು ಭಾರತೀಯ ನಾಯಕ ಅನಿಲ್ ಕುಂಬ್ಳೆ, ಮಾಜಿ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹಾಗೂ ಆಸೀಸ್ ನಾಯಕ ರಿಕಿ ಪಾಂಟಿಂಗ್ ಸೇರಿದಂತೆ ಇತ್ತಂಡಗಳ ಬಹುತೇಕ ಎಲ್ಲ ಆಟಗಾರರು ಆರೋಪ - ಪ್ರತ್ಯಾರೋಪಗಳಲ್ಲಿ ಭಾಗಿಯಾಗಿದ್ದು ಪ್ರಕರಣ ಇನ್ನಷ್ಟು ತೀವ್ರತೆ ಪಡೆಯಿತು.

ಇದೀಗ ಮಂಕಿಗೇಟ್ ವಿವಾದವನ್ನು ನೆನಪಿಸಿರುವ ರಿಕಿ ಪಾಂಟಿಂಗ್, ತಮ್ಮ ನಾಯಕತ್ವದ ಅಡಿಯಲ್ಲಾದ ಅನಿರೀಕ್ಷಿತ ಘಟನೆ ಬಗ್ಗೆ ಕೊರಗಿದ್ದಾರೆ. ಬಹುಶಃ ತಮ್ಮ ನಾಯಕತ್ವದ ಅತ್ಯಂತ ಕೆಟ್ಟ ಕಾಲಘಟ್ಟ ಇದಾಗಿದೆ ಎಂದು ಹೇಳಿದ್ದಾರೆ.
"2005ರ ಆ್ಯಶಸ್ ಸರಣಿ ಕಳೆದುಕೊಳ್ಳುವುದು ಕಠಿಣವೆನಿಸಿತ್ತು. ಆದರೂ ಸಂಪೂರ್ಣ ಪಂದ್ಯವು ನನ್ನ ನಿಯಂತ್ರಣದಲ್ಲಿತ್ತು. ಆದರೆ ಮಂಕಿಗೇಟ್ ವಿವಾದದ ಸಮಯದಲ್ಲಿ ಏನಾಯಿತು ಎಂಬುದು ನನ್ನ ನಿಯಂತ್ರಣ ಪರಿಧಿಯಲ್ಲಿರಲಿಲ್ಲ" ಎಂದು ಹೇಳಿದ್ದಾರೆ. "ತುಂಬಾ ದಿನಗಳು ವಿವಾದ ಆವರಿಸಿದ್ದರಿಂದ ನನ್ನ ಕೆರಿಯರ್‌ನ ಅತ್ಯಂತ ಕೆಟ್ಟ ಸಮಯವು ಇದಾಗಿತ್ತು.

ಆಡಿಲೇಡ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದ ಸಮಯದಲ್ಲೂ ಮೈದಾನದಿಂದ ಹೊರಬಂದ ಬಳಿಕ ಕ್ರಿಕೆಟ್ ಆಸ್ಟ್ರೇಲಿಯಾ ಅಧಿಕಾರಿಗಳೊಂದಿಗೆ ಪ್ರಕರಣದ ಬಗ್ಗೆ ಮಾತನಾಡಿದ್ದನ್ನು ನೆನಪಿಸಿಕೊಳ್ಳುತ್ತೇನೆ. ಯಾಕೆಂದರೆ ಆಡಿಲೇಡ್ ಟೆಸ್ಟ್ ಪಂದ್ಯದ ವೇಳೆ ವಿಚಾರಣೆ ಕೊನೆಯ ಹಂತದಲ್ಲಿತ್ತು" ಎಂದು ಪಾಂಟಿಂಗ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com