ನಾ ಸತ್ತರೂ ಭಾರತ ವಿಶ್ವಕಪ್ ಗೆಲ್ಲಲಿ; ಮೈದಾನದಲ್ಲೇ ರಕ್ತವಾಂತಿ ಮಾಡಿದ್ದ ಯುವರಾಜ್ ಸಿಂಗ್ ವಿನ್ನಿಂಗ್ ಆಟಕ್ಕೆ 9 ವರ್ಷ!

2011 ಮಾರ್ಚ್ 20 ಈ ದಿನ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಮರೆಯಲಾಗದ ದಿನ. 
ಮೈದಾನದಲ್ಲಿ ರಕ್ತವಾಂತಿ ಮಾಡಿದ್ದ ಯುವಿ
ಮೈದಾನದಲ್ಲಿ ರಕ್ತವಾಂತಿ ಮಾಡಿದ್ದ ಯುವಿ

ನವದೆಹಲಿ: 2011 ಮಾರ್ಚ್ 20 ಈ ದಿನ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಮರೆಯಲಾಗದ ದಿನ. 

2011ರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಲೀಗ್‌ ಹಂತದಲ್ಲಿ ಆಡಿದ್ದ ಆರು ಪಂದ್ಯಗಳಿಂದ ಐದರಲ್ಲಿ ಗೆಲುವು ಕಂಡಿದ್ದ ದಕ್ಷಿಣ ಆಫ್ರಿಕಾ ಬಿ ಗುಂಪಿನಲ್ಲಿ ಮೊದಲ ಸ್ಥಾನದಲ್ಲಿತ್ತು. ಹೀಗಾಗಿ ಕ್ವಾರ್ಟರ್ ಫೈನಲ್‌ ಹಾದಿ ಖಚಿತಪಡಿಸಿಕೊಂಡಿತ್ತು. ಆದರೆ, ತಲಾ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಇಂಗ್ಲೆಂಡ್‌, ಬಾಂಗ್ಲಾದೇಶ, ವಿಂಡೀಸ್‌ ಹಾಗೂ ಭಾರತ ತಂಡಗಳ ನಡುವೆ ಕ್ವಾರ್ಟರ್ ಫೈನಲ್‌ ಪ್ರವೇಶಕ್ಕಾಗಿ ಪೈಪೋಟಿ ಆರಂಭವಾಗಿತ್ತು. ಹೀಗಾಗಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಶತಾಯಗತಾಯ ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿತ್ತು. ಇದೇ ಪಂದ್ಯದಲ್ಲಿ ಭಾರತದ ಸ್ಫೋಟಕ ಬ್ಯಾಟ್ಸ್ ಮನ್ ಯುವಿ ಅನಾರೋಗ್ಯದ ನಡುವೆಯೂ ಸ್ಫೋಟಕ ಪ್ರದರ್ಶನ ನೀಡಿ ತಂಡಕ್ಕೆ ಗೆಲುವು ತಂದುಕೊಂಟಿದ್ದರು. ಆ ರೋಚಕ ಕ್ಷಣಗಳಿಗೆ ಇಂದಿಗೆ 9 ವರ್ಷ.

ಹೌದು. ಈ ದಿನ ಭಾರತ ಕ್ರಿಕೆಟ್ ತಂಡದ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ಅನಾರೋಗ್ಯದ ನಡುವೆಯೂ 2011ರ ವಿಶ್ವಕಪ್ ಟೂರ್ನಿಯ ಗುಂಪು ಹಂತದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮ್ಯಾಚ್ ವಿನ್ನಿಂಗ್ ಆಟ ತೋರಿದ್ದರು. ವಿಶ್ವಕಪ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ, ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ 51 ರನ್ ಗಳಿಸುವಷ್ಟರಲ್ಲಿಯೇ ಟೀಮ್ ಇಂಡಿಯಾ 51 ರನ್ ಗಳಿಸವರಷ್ಟರಲ್ಲೇ 2 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಯುವರಾಜ್ ಸಿಂಗ್ ಮತ್ತು ವಿರಾಟ್ ಕೊಹ್ಲಿ ಜತೆಗೂಡಿ ತಂಡಕ್ಕೆ ಆಧಾರವಾಗಿ ನಿಂತಿದ್ದರು.

ಇನಿಂಗ್ಸ್‌ ಆರಂಭಿಸಿದ್ದ ವೀರೇಂದ್ರ ಸೆಹ್ವಾಗ್‌ (22 ರನ್) ಮತ್ತು ಸಚಿನ್‌ ತೆಂಡೂಲ್ಕರ್‌ (2 ರನ್) ಇಬ್ಬರೂ ತಂಡದ ಮೊತ್ತ 51 ರನ್‌ ಆಗುವಷ್ಟರಲ್ಲಿ ವಿಕೆಟ್‌ ಒಪ್ಪಿಸಿದ್ದರು. ಬಳಿಕ ಈಗಿನ ನಾಯಕ ವಿರಾಟ್‌ ಕೊಹ್ಲಿ (59 ರನ್) ಜೊತೆಗೂಡಿದ ಯುವರಾಜ್‌ ಸಿಂಗ್ ತಂಡವನ್ನು ಆಧರಿಸಿದ್ದರು. ಈ ಜೋಡಿ ಮೂರನೇ ವಿಕೆಟ್‌ಗೆ 122 ರನ್‌ ಜೊತೆಯಾಟವಾಡಿತ್ತು. 123 ಎಸೆತಗಳನ್ನು ಎದುರಿಸಿದ್ದ ಯುವರಾಜ್ ಸಿಂಗ್ 113 ರನ್ ಗಳಸಿದ್ದರು. ಯುವಿ ಆಟದ ನೆರವಿನಿಂದಾಗಿಯೇ ಎಂಎಸ್‌ ಧೋನಿ ಪಡೆ 49.1 ಓವರ್‌ಗಳಲ್ಲಿ 268ರನ್ ಗಳಿಸಿತ್ತು. 

ಈ ಮೊತ್ತವನ್ನು ಬೆನ್ನು ಹತ್ತಿದ್ದ ವೆಸ್ಟ್ ಇಂಡೀಸ್ ಪಡೆಗೆ ಮತ್ತೆ ಯುವಿ ಕಂಟಕವಾಗಿ ಪರಿಣಮಿಸಿದ್ದರು. ಬ್ಯಾಟಿಂಗ್ ಬಳಿಕ ಬೌಲಿಂಗ್‌ನಲ್ಲಿಯೂ ಮಿಂಚಿದ್ದ ಯುವರಾಜ್‌, ಕೇವಲ 18 ರನ್ ನೀಡಿ 2 ವಿಕೆಟ್‌ ಉರುಳಿಸಿದ್ದರು. ಜಹೀರ್‌ ಖಾನ್‌ ಹಾಗೂ ಆರ್‌.ಅಶ್ವಿನ್‌ ಅವರು ಕ್ರಮವಾಗಿ 3 ಮತ್ತು 2 ವಿಕೆಟ್‌ ಪಡೆದಿದ್ದರು. ಹರ್ಭಜನ್ ಸಿಂಗ್ ಮತ್ತು ಸುರೇಶ್ ರೈನಾ ತಲಾ ಒಂದೊಂದು ವಿಕೆಟ್ ಹಂಚಿಕೊಂಡಿದ್ದರು. ಹೀಗಾಗಿ ವಿಂಡೀಸ್‌ ಕೇವಲ 188 ರನ್ ಗಳಿಗೆ ಆಲೌಟ್‌ ಆಗಿತ್ತು. ಆ ಮೂಲಕ ಭಾರತಕ್ಕೆ 80 ರನ್‌ಗಳ ಗೆಲುವು ಲಭಿಸಿತ್ತು.

ಆಲ್ರೌಂಡರ್ ಆಟದ ಮೂಲಕ ಗಮನ ಸೆಳೆದಿದ್ದ ಯುವರಾಜ್‌ ಸಿಂಗ್‌ ಪಂದ್ಯ ಶ್ರೇಷ್ಠ ಎನಿಸಿದ್ದರು. ಆ ಪಂದ್ಯದ ವೇಳೆ ಅನಾರೋಗ್ಯದಿಂದ ಬಳಲಿದ್ದ ಯುವಿ ಅಂಗಳದಲ್ಲಿಯೇ ವಾಂತಿ ಮಾಡಿಕೊಂಡಿದ್ದರು. ಆ ಪಂದ್ಯ ಮುಗಿದು ಇಂದಿಗೆ ಒಂಬತ್ತು ವರ್ಷ ಉರುಳಿದ್ದರೂ, ಯುವಿ ಆಟದ ನೆನಪು ಮಾತ್ರ ಹಾಗೆಯೇ ಉಳಿದಿವೆ.

ನಾ ಸತ್ತರೂ ಭಾರತ ವಿಶ್ವಕಪ್ ಗೆಲ್ಲಲಿ
2014ರಲ್ಲಿ ಖಾಸಗಿ ವಾಹಿಯೊಂದಕ್ಕೆ ನೀಡಿದ ಸಂದರ್ಶನದ ವೇಳೆ ಆ ಪಂದ್ಯದ ಕುರಿತು ಮಾತನಾಡಿದ್ದ ಯುವಿ, ‘ಚೆನ್ನೈನಲ್ಲಿ ಉಷ್ಣಾಂಶ ಹೆಚ್ಚಿರುವುದರಿಂದ ಹೀಗಾಗಿರಬಹುದು ಎಂದು ಮೊದಲು ಭಾವಿಸಿದ್ದೆ. ವಿಶ್ವಕಪ್‌ನಲ್ಲಿ ಶತಕ ಬಾರಿಸಬೇಕೆಂದು ನಾನು ಯಾವಾಗಲೂ ಅಂದುಕೊಳ್ಳುತ್ತಿದ್ದೆ. ಆದರೆ, ನಾನು ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರಿಂದ ಅದುವರೆಗೆ ಶತಕ ಸಾಧ್ಯವಾಗಿರಲಿಲ್ಲ. ಏನುಬೇಕಾದರೂ ಆಗಲಿ, ಟೂರ್ನಿ ಬಳಿಕ ನಾನು ಸತ್ತರೂ ಭಾರತ ವಿಶ್ವಕಪ್ ಗೆಲ್ಲಲಿ ಎಂದು ಎಂದು ದೇವರಲ್ಲಿ ಪ್ರಾರ್ಥಿಸಿದ್ದೆ‌’ ಎಂದು ಹೇಳಿಕೊಂಡಿದ್ದರು.

ಇನ್ನು ಯುವಿ ಆಸೆಯಂತೆಯೇ ಅಂದಿನ ಟೂರ್ನಿಯಲ್ಲಿ ಭಾರತ 2ನೇ ಬಾರಿಗೆ ವಿಶ್ವಕಪ್ ಜಯಿಸಿತ್ತು. ಇಡೀ ಟೂರ್ನಿಯಲ್ಲಿ ಯುವರಾಜ್ ಸಿಂಗ್ 600ರನ್ ಮತ್ತು 2 ವಿಕೆಟ್ ಪಡೆದಿದ್ದರು. ಈ ಪೈಕಿ 8 ಅರ್ಧಶತಕ, ಒಂದು ಶತಕ ಕೂಡ ಸೇರಿತ್ತು. ಅಂತೆಯೇ ಯುವಿ ಸರಣಿ ಶ್ರೇಷ್ಠ ಪ್ರಶಸ್ತಿಗೂ ಪಾತ್ರರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com