ಟಿ-20 ವಿಶ್ವಕಪ್ ಮೇಲೂ ಕೊರೊನಾ ಭೀತಿ

ವಿಶ್ವದ ಜನರನ್ನು ಕಾಡುತ್ತಿರುವ ಕೋವಿಡ್-19 ನಿದ್ದೆ ಗೆಡಿಸಿದ್ದು, ಕ್ರೀಡಾ ಜಗತ್ತಿನ ಮೇಲೆ ಪರಿಣಾಮ ಬೀರಿದೆ. ಅಲ್ಲದೆ ಇದೇ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ಪುರುಷರ ವಿಶ್ವಕಪ್ ಮೇಲೂ ಬೀಳಲಿದೆ. 
ಟಿ-20 ವಿಶ್ವಕಪ್ ಮೇಲೂ ಕೊರೊನಾ ಭೀತಿ
ಟಿ-20 ವಿಶ್ವಕಪ್ ಮೇಲೂ ಕೊರೊನಾ ಭೀತಿ

ನವದೆಹಲಿ: ವಿಶ್ವದ ಜನರನ್ನು ಕಾಡುತ್ತಿರುವ ಕೋವಿಡ್-19 ನಿದ್ದೆ ಗೆಡಿಸಿದ್ದು, ಕ್ರೀಡಾ ಜಗತ್ತಿನ ಮೇಲೆ ಪರಿಣಾಮ ಬೀರಿದೆ. ಅಲ್ಲದೆ ಇದೇ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ಪುರುಷರ ವಿಶ್ವಕಪ್ ಮೇಲೂ ಬೀಳಲಿದೆ. 

ಐಸಿಸಿ ಟಿ-20 ವಿಶ್ವಕಪ್ ಟೂರ್ನಿ ಅಕ್ಟೋಬರ್ 24 ರಿಂದ ನವಂಬರ್ 15ರ ವರೆಗೆ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿತ್ತು. ಆದರೆ ಈ ಟೂರ್ನಿಯ ಮೇಲೂ ಕೊರೊನಾ ಭೀತಿ ಎದುರಾಗುತ್ತಿದೆ. ಈ ವೈರಸ್ ಬೆದರಿಕೆಯಿಂದ ಹಲವು ಕ್ರಿಕೆಟ್ ಟೂರ್ನಿಗಳು ಸ್ಥಗಿತಗೊಂಡಿವೆ. 

ಕೊರೊನಾದ ಬಿಕ್ಕಟ್ಟಿನ ಮಧ್ಯೆ ಟಿ-20 ವಿಶ್ವಕಪ್‌ಗೆ ಸಂಬಂಧಿಸಿದಂತೆ ಇತರ ಆಯ್ಕೆಗಳನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪರಿಗಣಿಸುತ್ತಿದೆ. 

ವಿಶ್ವಕಪ್ ರದ್ದತಿಯನ್ನು ಐಸಿಸಿ ಇನ್ನೂ ಪರಿಗಣಿಸಿಲ್ಲ ಆದರೆ ಈ ವರ್ಷ ಪಂದ್ಯಾವಳಿ ನಡೆಯದಿದ್ದರೆ ಅದನ್ನು 2021 ರಲ್ಲಿ ನಡೆಸಬಹುದು ಮತ್ತು 2021 ರಲ್ಲಿ ಭಾರತದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಅನ್ನು 2022 ರ ಅಕ್ಟೋಬರ್ ವರೆಗೆ ಮುಂದೂಡಬಹದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com