ಲಾಕ್ ಡೌನ್ ವೇಳೆಯಲ್ಲೂ ಫಿಟ್ ನೆಸ್ ಗಾಗಿ ನಿಯಮಿತ ವ್ಯಾಯಾಮ ಮಾಡಲು ಟೀಂ ಇಂಡಿಯಾಗೆ ಸಲಹೆ 

ಕೊರೋನಾವೈರಸ್ ಕಾರಣದಿಂದ ವಿಶ್ವದಾದ್ಯಂತ ಅಥ್ಲೆಟಿಕ್ ಗಳು ತಮ್ಮ ಫಿಟ್ ನೆಸ್ ಗಾಗಿ ಪರ್ಯಾಯ ಮಾರ್ಗಗಳನ್ನು ಕಂಡುಕೊಂಡಿರುವಂತೆ ಟೀಂ ಇಂಡಿಯಾವೂ ಇದಕ್ಕೆ ಹೊರತಾಗಿಲ್ಲ.
ಟೀಂ ಇಂಡಿಯಾ
ಟೀಂ ಇಂಡಿಯಾ

ಚೆನ್ನೈ: ಕೊರೋನಾವೈರಸ್ ಕಾರಣದಿಂದ ವಿಶ್ವದಾದ್ಯಂತ ಅಥ್ಲೆಟಿಕ್ ಗಳು ತಮ್ಮ ಫಿಟ್ ನೆಸ್ ಗಾಗಿ ಪರ್ಯಾಯ ಮಾರ್ಗಗಳನ್ನು ಕಂಡುಕೊಂಡಿರುವಂತೆ ಟೀಂ ಇಂಡಿಯಾವೂ ಇದಕ್ಕೆ ಹೊರತಾಗಿಲ್ಲ.

ಪ್ರಸ್ತುತ ಜಾರಿಯಲ್ಲಿರುವ ಲಾಕ್ ಡೌನ್ ಅನೇಕ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಟೀಂ ಇಂಡಿಯಾವನ್ನು ಒಂದು  ವಿಶಿಷ್ಠ ಪರಿಸ್ಥಿತಿಯಲ್ಲಿ ಇರಿಸಿದೆ.  ಐಪಿಎಲ್ ಸ್ಥಗಿತದ ಸುದ್ದಿ ಹೊರಬಂದ ಕೂಡಲೇ ಕೋಚ್ ರವಿಶಾಸ್ತ್ರೀ ನೇತೃತ್ವದ ಟೀಂ ಇಂಡಿಯಾ ಸಹಾಯಕ ಸಿಬ್ಬಂದಿ ಒಂದು ಯೋಜನೆಯೊಂದನ್ನು ರೂಪಿಸಿರುವುದು ತಿಳಿದುಬಂದಿದೆ

ತನ್ನ ಕುಟುಂಬದೊಂದಿಗೆ ಆಕ್ಲೆಂಡ್ ಗೆ ಹೋಗಿದ್ದ  ಟೀಮ್ ಇಂಡಿಯಾದ ಸಾಮರ್ಥ್ಯ ಮತ್ತು ಕಂಡೀಷನಿಂಗ್ ತರಬೇತುದಾರ ನಿಕ್ ವೆಬ್, ಆಟಗಾರರ ಅಗತ್ಯಕ್ಕೆ ತಕ್ಕಂತೆ ಅವರ ದಿನಚರಿ ಇರುವಂತೆ ಸಲಹೆ ನೀಡಿದ್ದಾರೆ. 

ತರಬೇತಿ ನಿಲ್ಲಿಸುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಆಟಗಾರರಿಗೆ ಸಹಾಯಕ ಸಿಬ್ಬಂದಿ ಸಲಹೆ ನೀಡಿದ್ದಾರೆ. ಫಿಟ್ ನೆಸ್ ತರಬೇತಿ ನಿಲ್ಲಿಸಿದಾಗ, ನಿಧಾನವಾಗಿ ಸ್ನಾಯು-ಬಲದ ಲಾಭವನ್ನು ಕಳೆದುಕೊಳ್ಳುತ್ತೀರಿ ಎಂದು ಹೇಳಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಫಿಟ್ ನೆಸ್ ಕಾಯ್ದುಕೊಳ್ಳಲು ನಿಯಮಿತ ವ್ಯಾಯಾಮ ಮಾಡುವಂತೆ ತಿಳಿಸಲಾಗಿದೆ. 

ಸ್ಕಾಟ್ಸ್, ಪುಷ್- ಅಪ್ ನಂತಹ ಬೇಸಿಕ್ ವ್ಯಾಯಾಮಗಳೊಂದಿಗೆ ದೇಹ ಬಲಗೊಳ್ಳುವಂತಹ ತರಬೇತಿಯನ್ನು ಮುಂದುವರೆಸುವಂತೆ ಆಟಗಾರರಿಗೆ ಸಲಹೆ ನೀಡಲಾಗಿದೆ. ಆಹಾರ ಪದ್ಧತಿಯನ್ನು ಮುಂದುವರೆಸುವಂತೆ ತಿಳಿಸಲಾಗಿದೆ. ಮೂಲ ವ್ಯಾಯಾಮಗಳ ಪಟ್ಟಿಯನ್ನು ಸಹ ನೀಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com