ಲಾಕ್ ಡೌನ್ ಎಫೆಕ್ಟ್: ಕೊಹ್ಲಿಗೆ ಹೇರ್‌ ಕಟ್ಟಿಂಗ್ ಮಾಡಿದ ಪತ್ನಿ ಅನುಷ್ಕಾ, ವಿಡಿಯೋ ವೈರಲ್!

ಮಹಾಮಾರಿ ಕೊರೋನಾ ವೈರಸ್ ನಿಯಂತ್ರಿಸುವುದಕ್ಕಾಗಿ ದೇಶಾದ್ಯಂದ ಲಾಕ್‌ ಡೌನ್‌ ಜಾರಿ ಮಾಡಲಾಗಿದ್ದು, ಇದರ ಪರಿಣಾಮ ಮನೆಯಲ್ಲಿಯೇ ಇರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರಿಗೆ ಅವರ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ಹೇರ್ ಕಟ್ಟಿಂಗ್ ಮಾಡಿದ್ದಾರೆ.

Published: 28th March 2020 05:13 PM  |   Last Updated: 28th March 2020 05:13 PM   |  A+A-


anushka1

ಹೇರ್ ಕಟ್ಟಿಂಗ್ ಮಾಡುತ್ತಿರುವ ಅನುಷ್ಕಾ ಶರ್ಮಾ

Posted By : lingaraj
Source : Online Desk

ನವದೆಹಲಿ: ಮಹಾಮಾರಿ ಕೊರೋನಾ ವೈರಸ್ ನಿಯಂತ್ರಿಸುವುದಕ್ಕಾಗಿ ದೇಶಾದ್ಯಂದ ಲಾಕ್‌ ಡೌನ್‌ ಜಾರಿ ಮಾಡಲಾಗಿದ್ದು, ಇದರ ಪರಿಣಾಮ ಮನೆಯಲ್ಲಿಯೇ ಇರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರಿಗೆ ಅವರ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ಹೇರ್ ಕಟ್ಟಿಂಗ್ ಮಾಡಿದ್ದಾರೆ. ಅನುಷ್ಕಾ ಕತ್ತರಿ ಹಿಡಿದು ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಅನುಷ್ಕಾ ಶರ್ಮಾ ಅವರು ಪತಿಗೆ ಹೇರ್ ಕಟ್ಟಿಂಗ್ ಮಾಡುತ್ತಿರುವ ವಿಡಿಯೋವನ್ನು ಟ್ವೀಟ್ ಮಾಡಿದ್ದು, ಅಡುಗೆ ಮನೆ ಕತ್ತರಿ ಹಿಡಿದು ಕೊಹ್ಲಿ ಹೇರ್ ಕಟ್ ಮಾಡಿದ್ದಾರೆ. ಇನ್ನು ಕೊಹ್ಲಿ ನನ್ನ ಪತ್ನಿಯಿಂದ ಉತ್ತಮ ಹೇರ್ ಸ್ಟೈಲ್ ಎಂದಿದ್ದಾರೆ. ಅನುಷ್ಕಾ ಶರ್ಮಾ, ಕೊಹ್ಲಿ ಹೇರ್ ಕಟ್ಟಿಂಗ್ ಮಾಡುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಕೆಲ ಕ್ಷಣಗಳಲ್ಲೇ ಲಕ್ಷಕ್ಕೂ ಹೆಚ್ಚು ಜನರು ಲೈಕ್ ಹಾಗೂ ಕಮೆಂಟ್ ಮಾಡಿದ್ದಾರೆ.

ಇದಕ್ಕು ಮುನ್ನ ಕೊಹ್ಲಿ ಭಾರತೀಯ ಜನತೆಯಲ್ಲಿ ಮನೆಯಲ್ಲೇ ಇರಲು ಮನವಿ ಮಾಡಿದ್ದರು. ನಾನು ಕ್ರಿಕೆಟಿಗನಾಗಿ ಈ ಮಾತನ್ನು ಹೇಳುತ್ತಿಲ್ಲ, ಈ ದೇಶದ ಪ್ರಜೆಯಾಗಿ ಹೇಳುತ್ತಿದ್ದೇನೆ. ಲಾಕ್‌ಡೌನ್ ಆದೇಶವಿದ್ದರೂ, ಕರ್ಫ್ಯೂ ಇದ್ದರೂ ಹೆಚ್ಚಿನವರು ಪಾಲಿಸುತ್ತಿಲ್ಲ. ಗುಂಪುಗುಂಪಾಗಿ ಓಡಾಡುತ್ತಿದ್ದಾರೆ. ನಾವು ವೈರಸ್ ಹರಡುವಿಕೆ ತಡೆಯುವ ಕುರಿತು ಗಂಭೀರವಾಗಿ ಆಲೋಚಿಸಿ. ಕೊರೋನಾ ವೈರಸ್ ಸುಲಭವಾಗಿ ತೊಲಗುವುದಿಲ್ಲ. ಎಲ್ಲರೂ ಮನೆಯಲ್ಲೇ ಇರಿ ಎಂದು ವಿಡಿಯೋದಲ್ಲಿ ಮನವಿ ಮಾಡಿದ್ದರು.

 
 
 
 
 
 
 
 
 
 
 
 
 

Meanwhile, in quarantine..

Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp