ಕೊರೋನಾ ಲಾಕ್ ಡೌನ್: ಮನೆಯ ಕೊಠಡಿಯನ್ನೇ ಕ್ರಿಕೆಟ್ ಸ್ಟೇಡಿಯಂ ಆಗಿ ಪರಿವರ್ತಿಸಿದ ಪಾಂಡ್ಯ ಸಹೋದರರು! 

ಕೊರೋನಾ ವೈರಸ್ ನಿಂದಾಗಿ ಜಾಗತಿಕ ಮಟ್ಟದ ಬಹುತೇಕ ಎಲ್ಲಾ ಕ್ರೀಡಾ ಕಾರ್ಯಕ್ರಮಗಳು ಬಹುತೇಕ ರದ್ದಿಗೊಂಡಿದೆ, ಅಥವಾ ಮುಂದೂಡಲ್ಪಟ್ಟಿವೆ. ಇತ್ತ ಭಾರತೀಯ ಕ್ರಿಕೆಟಿಗರೂ ತಮ್ಮ ಕುಟುಂಬದವರ ಜೊತೆಗೆ ಸಮಯ ಕಳೆಯುತ್ತಿದ್ದಾರೆ. 

Published: 30th March 2020 10:36 PM  |   Last Updated: 30th March 2020 10:36 PM   |  A+A-


Pandya brothers turn home into cricket stadium amid coronavirus lockdown

ಕೊರೋನಾ ಲಾಕ್ ಡೌನ್: ಮನೆಯ ಕೊಠಡಿಯನ್ನೇ ಕ್ರಿಕೆಟ್ ಸ್ಟೇಡಿಯಂ ಆಗಿ ಪರಿವರ್ತಿಸಿದ ಪಾಂಡ್ಯ ಸಹೋದರರು!

Posted By : Srinivas Rao BV
Source : The New Indian Express

ಮುಂಬೈ: ಕೊರೋನಾ ವೈರಸ್ ನಿಂದಾಗಿ ಜಾಗತಿಕ ಮಟ್ಟದ ಬಹುತೇಕ ಎಲ್ಲಾ ಕ್ರೀಡಾ ಕಾರ್ಯಕ್ರಮಗಳು ಬಹುತೇಕ ರದ್ದಿಗೊಂಡಿದೆ, ಅಥವಾ ಮುಂದೂಡಲ್ಪಟ್ಟಿವೆ. ಇತ್ತ ಭಾರತೀಯ ಕ್ರಿಕೆಟಿಗರೂ ತಮ್ಮ ಕುಟುಂಬದವರ ಜೊತೆಗೆ ಸಮಯ ಕಳೆಯುತ್ತಿದ್ದಾರೆ. 

ಆದರೆ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ ಇಂಡೋರ್ ಕ್ರಿಕೆಟ್ ಆಡಲು ತಮ್ಮ ಮನೆಯ ಕೊಠಡಿಯನ್ನೇ ಸ್ಟೇಡಿಯಂ ಆಗಿ ಪರಿವರ್ತಿಸಿದ್ದಾರೆ.

ಟ್ವಿಟರ್ ನಲ್ಲಿ ಇದರ ವಿಡಿಯೋ ಪೋಸ್ಟ್ ಮಾಡಿರುವ  ಹಾರ್ದಿಕ್ ಪಾಂಡ್ಯ, ಎಲ್ಲರೂ ಸುರಕ್ಷಿತರಾಗಿರಿ, ಹೊರಗೆ ಹೋಗುವುದನ್ನು ತಪ್ಪಿಸಿ, ನಾನು ಮತ್ತು ನನ್ನ ಕುಟುಂಬ ಮನೆಯಲ್ಲೇ ಸಂತೋಷದಿಂದ ಇರುವಂತೆ ಇರಿ, ಮನೆಯಲ್ಲೇ ಇದ್ದು ಕೊರೋನಾ ವೈರಸ್ ಹರಡದಂತೆ ಎಚ್ಚರ ವಹಿಸಿ ಎಂದು ಹೇಳಿದ್ದಾರೆ. 

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp