ಟೀಂ ಇಂಡಿಯಾ ವೇಗಿ ಶಮಿ ಬೌಲಿಂಗ್ ನಿಂದ ನನ್ನ ತೊಡೆ ಊದಿಕೊಂಡಿತ್ತು: ಸ್ಮೃತಿ  ಮಂಧನಾ 

ಕೊರೋನಾವೈರಸ್  ಕಾರಣ ರಾಷ್ಟ್ರವ್ಯಾಪಿ ಲಾಕ್‌ಡೌನ್ ಪ್ರಾರಂಭವಾದಾಗಿನಿಂದ ಭಾರತ ಮಹಿಳಾ ತಂಡದ ಓಪನರ್ ಸ್ಮೃತಿ ಮಂಧನಾ ಸಾಮಾಜಿಕ ತಾಣಗಳಲ್ಲಿ ಹೆಚ್ಚು ಸಕ್ರಿಯವಾಗಿದ್ದಾರೆ. ಇತ್ತೀಚೆಗೆ, ಟೀಂ ಇಂಡಿಯಾ ವೈಸ್ ಕ್ಯಾಪ್ಟನ್  ರೋಹಿತ್ ಶರ್ಮಾ ಮತ್ತು ಸಹ ಆಟಗಾರ ಜೆಮಿಮಾ ರೊಡ್ರಿಗಸ್  ಸಹ ಸಾಮಾಜಿಕ ತಾಣಗಳಲ್ಲಿ ಹೆಚ್ಚು ಹೆಚ್ಚಾಗಿ ಕಾಣಿಸಿಕೊಳ್ಲುತ್ತಿದ್ದಾರೆ.  ಈ ಮೂವರು ತಮ್ಮ ಲೈವ
ಶಮಿ  ಹಾಗೂ ಸ್ಮೃತಿ ಮಂದಾನ
ಶಮಿ ಹಾಗೂ ಸ್ಮೃತಿ ಮಂದಾನ

ಕೊರೋನಾವೈರಸ್  ಕಾರಣ ರಾಷ್ಟ್ರವ್ಯಾಪಿ ಲಾಕ್‌ಡೌನ್ ಪ್ರಾರಂಭವಾದಾಗಿನಿಂದ ಭಾರತ ಮಹಿಳಾ ತಂಡದ ಓಪನರ್ ಸ್ಮೃತಿ ಮಂಧನಾ ಸಾಮಾಜಿಕ ತಾಣಗಳಲ್ಲಿ ಹೆಚ್ಚು ಸಕ್ರಿಯವಾಗಿದ್ದಾರೆ. ಇತ್ತೀಚೆಗೆ, ಟೀಂ ಇಂಡಿಯಾ ವೈಸ್ ಕ್ಯಾಪ್ಟನ್  ರೋಹಿತ್ ಶರ್ಮಾ ಮತ್ತು ಸಹ ಆಟಗಾರ ಜೆಮಿಮಾ ರೊಡ್ರಿಗಸ್  ಸಹ ಸಾಮಾಜಿಕ ತಾಣಗಳಲ್ಲಿ ಹೆಚ್ಚು ಹೆಚ್ಚಾಗಿ ಕಾಣಿಸಿಕೊಳ್ಲುತ್ತಿದ್ದಾರೆ.  ಈ ಮೂವರು ತಮ್ಮ ಲೈವ್ ಚಾಟ್ ಶೋ ಮೂಲಕ ಸುದ್ದಿಯಾಗುತ್ತಿದ್ದು ಇದೇ ವೇಳೆ ಮಂಧನಾ ಮೊಹಮ್ಮದ್ ಶಮಿ ಬೌಲಿಂಗ್ ನಲ್ಲಿ ತಾವು ಪೆಟ್ಟು ತಿಂದ ಕ್ಷಣವನ್ನು ನೆನೆದಿದ್ದಾರೆ.

“ಶಮಿ ಭೈಯ್ಯಾ(ಮೊಹಮ್ಮದ್ ಶಮಿ) ಅವರು ಬೌಲಿಂಗ್ ಮಾಡಿದಾಗ ನಡೆದ ಘಟನೆಯನ್ನು ನಾನು ನೆನಪಿಸಿಕೊಳ್ಲುತ್ತೇನೆ. ಎನ್‌ಸಿಎ ರಿಹ್ಯಾಬ್​ನಲ್ಲಿದ್ದಾಗ ನಾನು ಅವರ ಬೌಲಿಂಗ್ ನಲ್ಲಿ ಆಡಿದ್ದೆ. ಮಿ 120 ಕಿ.ಮಿ ಪೇಸ್​ನಲ್ಲಿ ಬೌಲಿಂಗ್ ಮಾಡಿದ್ದರುಇ. ಆಗ ಅವರು ನನ್ನ ಬಾಡಿ ಮೇಲೆ ಬೌಲಿಂಗ್ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದರು. 

“ನಾನು ಪೇಸ್ ನಲ್ಲಿ ಆಡದ ಕಾರಣ ಮೊದಲೆರಡು ಎಸೆತಗಳನ್ನು ಎದುರಿಸಿದೆ. ಆದರೆ ಮೂರನೆಯ  ಎಸೆತದಲ್ಲಿ ಚೆಂಡು ಇನ್​ಸ್ವಿಂಗ್ ಆಗಿ ನೇರವಾಗಿ ನನ್ನ ತೊಡೆಗೆ ತಾಕಿತ್ತು. ಇದಾದ ನಂತರ 10 ದಿನಗಳವರೆಗೆ ತೊಡೆ ಊದಿಕೊಂಡಿತ್ತು. ಬಹಳ ನೋವನ್ನು ಅನುಭವಿಸಿದೆ" ಯೂಟ್ಯೂಬ್‌ನಲ್ಲಿ ಬೇಸ್‌ಲೈನ್ ವೆಂಚರ್ಸ್ ಹಂಚಿಕೊಂಡ ವೀಡಿಯೊದಲ್ಲಿ ಮಂದನಾ ಹೇಳಿದ್ದಾರೆ.

ರೋಹಿತ್ ಶರ್ಮಾಕೂಡ ಶಮಿ ಬಗ್ಗೆ ಮಾತನಾಡಿ ವರು ನೆಟ್ ನಲ್ಲಿ ಎದುರಿಸಬೇಕಾದ ಟ್ರಿಕ್ಕಿ ಬೌಲರ್ ಎಂದು ಕರೆದಿದ್ದಾರೆ.

"ನೆಟ್ ಸೆಷನ್ ಗಳಲ್ಲಿ ನಮ್ಮ ಪಿಚ್ ಯಾವಾಗಲೂ ಹೆಚ್ಚು ಹಸಿರಾಗಿರುತ್ತದೆ. ಶಮಿ ಹಸಿರು ಪಿಚ್ ಕಂಡಾಗಲೆಲ್ಲಾ ಹೆಚ್ಚುವರಿ ಬಿರಿಯಾನಿ ತಿನ್ನುತ್ತಾನೆ! ಬುಮ್ರಾ ಕೂಡ ಕಷ್ಟಕರ, ಆದರೆ ಅದು ಕೇವಲ ಎರಡು-ಮೂರು ವರ್ಷಗಳಿಂದೀಚಿನ ಮಾತು.

"ಶಮಿ, ನಾನು 2013 ರಿಂದ ಆಡುತ್ತಿದ್ದೇನೆ. ಆದರೆಇದೀಗ ಬುಮ್ರಾ ಮತ್ತು ಶಮಿ ನಡುವೆ ಸ್ಪರ್ಧೆ ನಡೆಯಬೇಕು, ಯಾರು ಬ್ಯಾಟ್ಸ್ ಮನ್ ಗಳನ್ನು ಹೆಚ್ಚು ಕಾಡಿಸುತ್ತಾರೆ, ಯಾರು ಹೆಚ್ಚು ಹೆಲ್ಮೆಟ್ ಝಿಟ್ ಕೊಡುತ್ತಾರೆ ನೋಡಬೇಕಿದೆ" ರೋಹಿತ್ ಹೇಳೀದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com