ಸ್ಟೀವ್ ಸ್ಮಿತ್-ವಿರಾಟ್ ಕೊಹ್ಲಿ, ಇಯಾನ್ ಚಾಪೆಲ್ ಆಯ್ಕೆ ಮಾಡಿದ್ದು ಯಾರನ್ನ ಗೊತ್ತ?

ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಇಯಾನ್ ಚಾಪೆಲ್, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಆಸ್ಟ್ರೇಲಿಯಾ ತಂಡದ ಸ್ಟೀವ್ ಸ್ಮಿತ್ ನಡುವೆ ತಮ್ಮ ನೆಚ್ಚಿನ ಆಟಗಾರನನ್ನು ಹೆಸರಿಸಿದ್ದಾರೆ.
ಸ್ಮಿತ್-ಕೊಹ್ಲಿ
ಸ್ಮಿತ್-ಕೊಹ್ಲಿ

ನವದೆಹಲಿ: ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಇಯಾನ್ ಚಾಪೆಲ್, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಆಸ್ಟ್ರೇಲಿಯಾ ತಂಡದ ಸ್ಟೀವ್ ಸ್ಮಿತ್ ನಡುವೆ ತಮ್ಮ ನೆಚ್ಚಿನ ಆಟಗಾರನನ್ನು ಹೆಸರಿಸಿದ್ದಾರೆ.

ಕೊರೊನಾ ಸಾಂಕ್ರಾಮಿಕ ರೋಗ ವ್ಯಾಪಿಸಿರುವ ಈ ಸಮಯದಲ್ಲಿ ಯಾವುದೇ ಕ್ರಿಕೆಟ್ ಚಟುವಟಿಕೆಗಳು ನಡೆಯುತ್ತಿಲ್ಲ. ಹೀಗಾಗಿ ಮಾಜಿ ಹಾಗೂ ಹಾಲಿ ಕ್ರಿಕೆಟ್ ತಾರೆಗಳು ಸಾಮಾಜಿಕ  ತಾಣಗಳಲ್ಲಿ ಸಕ್ರಿಯರಾಗಿದ್ದಾರೆ.

ಸ್ಟೀವನ್ ಸ್ಮಿತ್ ಪ್ರಸ್ತುತ ಟೆಸ್ಟ್ ಬ್ಯಾಟಿಂಗ್ ನಲ್ಲಿ ನಂಬರ್ 1 ಆಗಿದ್ದು, ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ನಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಬಲಗೈ ಬ್ಯಾಟ್ಸ್‌ಮನ್ ಸ್ಮಿತ್ ಅತ್ಯುತ್ತಮ ಟೆಸ್ಟ್ ಬ್ಯಾಟಿಂಗ್ ಸರಾಸರಿ 62.84 ಹೊಂದಿದ್ದರೆ, ಅವರ ಏಕದಿನ ಬ್ಯಾಟಿಂಗ್ ಸರಾಸರಿ 42.46, ಮತ್ತು ಟಿ20 ಬ್ಯಾಟಿಂಗ್ ಸರಾಸರಿ 29.60 ಆಗಿದೆ.

ವಿರಾಟ್ ಕೊಹ್ಲಿ ದೀರ್ಘಕಾಲದವರೆಗೂ ತಮ್ಮ ಬ್ಯಾಟಿಂಗ್ ತಮ್ಮ ಸ್ಥಿರತೆಯನ್ನು ಕಾಪಾಡಿಕೊಂಡಿದ್ದಾರೆ. (ಟೆಸ್ಟ್ ಸರಾಸರಿ - 53.62; ಏಕದಿನ ಸರಾಸರಿ - 59.33 ಮತ್ತು ಟಿ20 ಸರಾಸರಿ 50.80) ಹೊಂದಿದ್ದಾರೆ.

ಇನ್ನು ಇಯಾನ್ ಚಾಪೆಲ್ ಅವರು ಸ್ಮಿತ್ ಬದಲಿಗೆ ವಿರಾಟ್ ಕೊಹ್ಲಿಯನ್ನು ತಮ್ಮ ನೆಚ್ಚಿನ ಆಟಗಾರನಾಗಿ ಹೆಸರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com