ಭಾರತವನ್ನು ತವರಿನಲ್ಲೇ ಸೋಲಿಸುವುದು ಅಂತಿಮ ಗುರಿ: ಆಸ್ಟ್ರೇಲಿಯಾ ಮುಖ್ಯ ಕೋಚ್ ಲ್ಯಾಂಗರ್

ಟೆಸ್ಟ್ ಕ್ರಿಕೆಟ್  ಶ್ರೇಯಾಂಕದಲ್ಲಿ ಅಗ್ರ ಸ್ಥಾನ ತಲುಪಿರುವುದಕ್ಕೆ ಆಸ್ಟ್ರೇಲಿಯಾದ ಆಟಗಾರರಲ್ಲಿ ಮಂದಹಾಸ ಮೂಡಿದೆ. ಆದರೆ, ಭಾರತವನ್ನು ಅದರ ತವರಿನಲ್ಲೇ ಸೋಲಿಸುವುದು ಅಂತಿಮ ಪರೀಕ್ಷೆಯಾಗಿ ಉಳಿದಿದೆ ಎಂದು ಆಸ್ಟ್ರೇಲಿಯಾದ ಮುಖ್ಯ ತರಬೇತುದಾರ ಜಸ್ಟೀನ್ ಲ್ಯಾಂಗರ್ ಹೇಳಿದ್ದಾರೆ.
ಆಸ್ಟ್ರೇಲಿಯಾ ಮುಖ್ಯ ಕೋಚ್ ಲ್ಯಾಂಗರ್
ಆಸ್ಟ್ರೇಲಿಯಾ ಮುಖ್ಯ ಕೋಚ್ ಲ್ಯಾಂಗರ್

ಮೆಲ್ಬರ್ನ್: ಟೆಸ್ಟ್ ಕ್ರಿಕೆಟ್  ಶ್ರೇಯಾಂಕದಲ್ಲಿ ಅಗ್ರ ಸ್ಥಾನ ತಲುಪಿರುವುದಕ್ಕೆ ಆಸ್ಟ್ರೇಲಿಯಾದ ಆಟಗಾರರಲ್ಲಿ ಮಂದಹಾಸ ಮೂಡಿದೆ. ಆದರೆ, ಭಾರತವನ್ನು ಅದರ ತವರಿನಲ್ಲೇ ಸೋಲಿಸುವುದು ಅಂತಿಮ ಪರೀಕ್ಷೆಯಾಗಿ ಉಳಿದಿದೆ ಮತ್ತು  ಕೊಹ್ಲಿ ನೇತೃತ್ವದ ತಂಡದ ಜೊತೆಗಿನ ಕಾಳಗದಲ್ಲಿ ಅವರ ನೈಜ ಸಾಮರ್ಥ್ಯವನ್ನು ಪರೀಕ್ಷೆಗೊಳಪಡಿಸಲಾಗುವುದು ಎಂದು ಆಸ್ಟ್ರೇಲಿಯಾದ ಮುಖ್ಯ ತರಬೇತುದಾರ ಜಸ್ಟೀನ್ ಲ್ಯಾಂಗರ್ ಹೇಳಿದ್ದಾರೆ.

ಚೆಂಡು ವಿರೂಪ ಹಗರಣದ ನಂತರ ಶುಕ್ರವಾರ ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ. ಆದರೆ, ಈ ಸ್ಥಾನ ಹೆಚ್ಚು ದಿನಗಳ ಕಾಲ ಉಳಿಯಲ್ಲ ಎಂಬುದು ಲ್ಯಾಂಗರ್ ಗೆ ಗೊತ್ತಿದೆ. 

ಅಗ್ರ ಶ್ರೇಯಾಂಕ ಹೇಗೆ ಬಂತು ಎಂಬುದು ಗೊತ್ತಿದೆ. ಆದರೆ, ಆಸ್ಟ್ರೇಲಿಯಾ ಆಟಗಾರರಲ್ಲಿ ಇದು ಮಂದಹಾಸ ಮೂಡಿಸಿದೆ. ಬಯಸಿದ ತಂಡವನ್ನಾಗಿಸಲು ಇನ್ನೂ ಸಾಕಷ್ಟು ಕೆಲಸ ಮಾಡಬೇಕಿದೆ ಆದರೆ, ಕಳೆದ ಎರಡು ವರ್ಷಗಳಲ್ಲಿ ಮೈದಾನದ ಒಳಗೆ ಹಾಗೂ ಹೊರಗೆಡೆ ಉತ್ತಮ ಪ್ರದರ್ಶನ ತೋರಿರುವುದಾಗಿ ಆಸ್ಟ್ರೇಲಿಯಾ ಕ್ರಿಕೆಟ್ ವೆಬ್ ಸೈಟ್ ಗೆ ಲ್ಯಾಂಗರ್ ಹೇಳಿದ್ದಾರೆ. 

ವಿಶ್ವ ಟೆಸ್ಟ್  ಚಾಂಫಿಯನ್ ಶಿಪ್ ನಮ್ಮ ಗುರಿಯಾಗಿದೆ. ಆದರೆ, ಭಾರತವನ್ನು ಅದರ ತವರಿನಲ್ಲೇ ಸೋಲಿಸುವುದು ಮತ್ತು ಅವರ ಆಸ್ಟ್ರೇಲಿಯಾಕ್ಕೆ ಬಂದಾಗ ಇಲ್ಲಿಯೂ ಅವರನ್ನು ಸೋಲಿಸುವುದು ಪ್ರಮುಖವಾಗಿದೆ ಎಂದು ಲ್ಯಾಂಗರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com