ಸಚಿನ್ ಮತ್ತು ವಿರಾಟ್‌ ನಡುವಣ ವ್ಯತ್ಯಾಸವನ್ನು ವಿವರಿಸಿದ‌ ಸುರೇಶ್‌ ರೈನಾ

ಮಾಸ್ಟರ್ ಬ್ಲಾಸ್ಟರ್ ಸಚಿನ್‌ ತೆಂಡೂಲ್ಕರ್‌ ಅವರ ಬಹುತೇಕ ದಾಖಲೆಗಳನ್ನು ಮುರಿದಿರುವ ಭಾರತ ತಂಡದ ಹಾಲಿ ನಾಯಕ ವಿರಾಟ್‌ ಕೊಹ್ಲಿ, ತೆಂಡೂಲ್ಕರ್ ಹೆಸರಲ್ಲಿರುವ 100 ಅಂತಾರಾಷ್ಟ್ರೀಯ ಶತಕಗಳ ದಾಖಲೆಯನ್ನು ಮುರಿಯಬಲ್ಲ ಸಾಮರ್ಥ್ಯ ಹೊಂದಿದ್ದಾರೆ
ಸಚಿನ್, ವಿರಾಟ್ ಕೊಹ್ಲಿ
ಸಚಿನ್, ವಿರಾಟ್ ಕೊಹ್ಲಿ

ನವದೆಹಲಿ: ಮಾಸ್ಟರ್ ಬ್ಲಾಸ್ಟರ್ ಸಚಿನ್‌ ತೆಂಡೂಲ್ಕರ್‌ ಅವರ ಬಹುತೇಕ ದಾಖಲೆಗಳನ್ನು ಮುರಿದಿರುವ ಭಾರತ ತಂಡದ ಹಾಲಿ ನಾಯಕ ವಿರಾಟ್‌ ಕೊಹ್ಲಿ, ತೆಂಡೂಲ್ಕರ್ ಹೆಸರಲ್ಲಿರುವ 100 ಅಂತಾರಾಷ್ಟ್ರೀಯ ಶತಕಗಳ ದಾಖಲೆಯನ್ನು ಮುರಿಯಬಲ್ಲ ಸಾಮರ್ಥ್ಯ ಹೊಂದಿದ್ದಾರೆ

ಅಂದಹಾಗೆ 2011ರಲ್ಲಿ ಭಾರತ ತಂಡ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಭಾರತ ತಂಡದ ಪರ ಸಚಿನ್‌ ಮತ್ತು ಕೊಹ್ಲಿ ಜೊತೆಯಾಗಿ ಆಡಿದ್ದರು. ಅದೇ ತಂಡದ ಭಾಗವಾಗಿದ್ದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಸುರೇಶ್‌ ರೈನಾ, ಇದೀಗ ಸಚಿನ್‌ ಮತ್ತು ವಿರಾಟ್‌ ನಡುವಣ ವ್ಯತ್ಯಾಸದ ಬಗ್ಗೆ ಮಾತನಾಡಿದ್ದಾರೆ

ಖಲೀಜ್‌ ಟೈಮ್ಸ್‌ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿರುವ ರೈನಾ, ಇಬ್ಬರು ದಿಗ್ಗಜ ಆಟಗಾರರ ಜೊತೆಗೆ ಏಕಕಾಲದಲ್ಲಿ ಆಡಿದ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಒಂದು ಪಂದ್ಯವನ್ನು ಎದುರಾಗುವಾಗ ಕೊಹ್ಲಿ-ಸಚಿನ್ ಹೇಗೆ ವಿಭಿನ್ನ ಆಲೋಚನೆ ಹೊಂದಿರುತ್ತಿದ್ದರು ಎಂಬುದನ್ನು ವಿವರಿಸಿದ್ದಾರೆ

"ಸಚಿನ್‌ ಮತ್ತು ವಿರಾಟ್‌ ಇಬ್ಬರೂ ಹಲವು ಅಂತಾರಾಷ್ಟ್ರೀಯ ಶತಕಗಳನ್ನು ಬಾರಿಸಿದ್ದಾರೆ. ವಿರಾಟ್‌ ಆಡುವ ಪ್ರತಿ ಪಂದ್ಯವನ್ನು ಗೆಲ್ಲಲು ನೋಡುತ್ತಾರೆ. ಆದರೆ, ಸಚಿನ್‌ ಪ್ರತಿ ಪಂದ್ಯದಲ್ಲೂ ತಾಳ್ಮೆಯಿಂದ ಇರಲು ಪ್ರಯತ್ನ ಮಾಡುತ್ತಾರೆ. ಸಚಿನ್‌ ಬಳಿ ಸದಾ ತಾಳ್ಮೆ ಇರುತ್ತದೆ. ಅವರ ತಾಳ್ಮೆಯಿಂದಲೇ ನಾವು 2011ರ ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿದ್ದು. ತಂಡದ ಪ್ರತಿಯೊಬ್ಬ ಆಟಗಾರನ ಮನದಲ್ಲೂ ನಾವು ಈ ವಿಶ್ವಕಪ್‌ ಗೆಲ್ಲಬಹುದು ಎಂಬ ಆತ್ಮವಿಶ್ವಾಸ ಮೂಡಿಸಿದ್ದರು. ತಂಡದಲ್ಲಿ ಅವರು ಎರಡನೇ ಕೋಚ್‌ ರೀತಿಯಲ್ಲಿ ಇದ್ದರು," ಎಂದು ರೈನಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com