ಟೀಂ ಇಂಡಿಯಾದ ಬೌಲಿಂಗ್ ಕೋಚ್ ಆಗುವ ಕನಸು ಕಾಣುತ್ತಿರುವ ಪಾಕ್ ಮಾಜಿ ವೇಗಿ ಶೋಯೆಬ್ ಅಖ್ತರ್!

ಪಾಕಿಸ್ತಾನದ ಮಾಜಿ ವೇಗದ ಬೌಲರ್‌ ಶೊಯೇಬ್‌ ಅಖ್ತರ್‌ ಟೀಮ್‌ ಇಂಡಿಯಾಗೆ ಬೌಲಿಂಗ್‌ ಕೋಚ್‌ ಆಗಿ ಸೇವೆ ಸಲ್ಲಿಸಲು ರೆಡಿ ಎಂದು ಹೇಳಿಕೊಂಡಿದ್ದಾರೆ.
ಶೋಯೆಬ್ ಅಖ್ತರ್
ಶೋಯೆಬ್ ಅಖ್ತರ್

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಅವರು ಟೀಂ ಇಂಡಿಯಾದ ಬೌಲಿಂಗ್ ಕೋಚ್ ಆಗವ ಕನಸು ಕಾಣುತ್ತಿದ್ದಾರೆ.

ಪಾಕಿಸ್ತಾನದ ಮಾಜಿ ವೇಗದ ಬೌಲರ್‌ ಶೊಯೇಬ್‌ ಅಖ್ತರ್‌ ಟೀಮ್‌ ಇಂಡಿಯಾಗೆ ಬೌಲಿಂಗ್‌ ಕೋಚ್‌ ಆಗಿ ಸೇವೆ ಸಲ್ಲಿಸಲು ರೆಡಿ ಎಂದು ಹೇಳಿಕೊಂಡಿದ್ದಾರೆ. ವೇಗದ ಬೌಲಿಂಗ್‌ ಬಗ್ಗೆ ತಮ್ಮಲ್ಲಿ ಇರುವ ತಮ್ಮ ಜ್ಞಾನವನ್ನು ಹಂಚಿಕೊಂಡರೆ ಕ್ರೀಡೆಯ ಅಭಿವೃದ್ಧಿಗೆ ನೆರವಾಗಲಿದೆ ಎಂದು ಜನಪ್ರಿಯ ಸೋಷಿಯಲ್‌ ಮೀಡಿಯಾ ವೇದಿಕೆ ಹೆಲೋ ಅಪ್ಲಿಕೇಷನ್‌ನ ಲೈವ್‌ ವಿಡಿಯೋದಲ್ಲಿ ಹೇಳಿದ್ದಾರೆ.

ವೇಗದ ಬೌಲಿಂಗ್‌ ಕುರಿತಾಗಿ ತಮ್ಮೊಳಗಿನ ಜ್ಞಾನವನ್ನು ಹಂಚಿಕೊಳ್ಳಲು ತಾವು ಸದಾ ಮುಕ್ತವಾಗಿದ್ದು, ಭಾರತೀಯ ಬೌಲರ್‌ಗಳಿಗೆ ಕೋಚಿಂಗ್‌ ಮಾಡಿದರೆ ಸಂತಸವಾಗಲಿದೆ ಎಂದು ತಮ್ಮೊಳಗಿನ ಇಂಗಿತ ಹೊರಹಾಕಿದ್ದಾರೆ.

"ಖಂಡಿತಾ, ನನ್ನ ಕೆಲಸವೇ ಜ್ಞಾನವನ್ನು ಬೇರೆಯವರೊಂದಿಗ ಹಂಚಿಕೊಳ್ಳುವುದು. ಈ ಜ್ಞಾನವನ್ನು ನಾನು ಸಂಪಾದಿಸಿದ್ದೇನೆ ಎಂದ ಮೇಲೆ ಅದನ್ನು ಹಂಚಿಕೊಳ್ಳುವುದು ಕೂಡ ನನ್ನ ಜವಾಬ್ದಾರಿ. ನನ್ನಿಂದ ಈಗಿರುವ ಬೌಲರ್‌ಗಳಿಗಿಂತಲೂ ಹೆಚ್ಚು ವೇಗವಾಗಿ ಬೌಲಿಂಗ್‌ ಮಾಡುವ ಮತ್ತು ಆಕ್ರಮಣಕಾರಿ ಸ್ವಭಾವದ ವೇಗಿಗಳನ್ನು ತರುವುದು ಸಾಧ್ಯ. ಬ್ಯಾಟ್ಸ್‌ಮನ್‌ಗಳ ಎದುರು ಈ ವೇಗಿಗಳ ಅಬ್ಬರ ಕಂಡು ಎಲ್ಲರು ಆನಂದಿಸಬಲ್ಲರು ಎಂದಿದ್ದಾರೆ.

ಅಂದಹಾಗೆ ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಶಮಿ, ಇಶಾಂತ್‌ ಶರ್ಮಾ, ಭುವನೇಶ್ವರ್‌ ಕುಮಾರ್‌ ಮತ್ತು ಉಮೇಶ್‌ ಯಾದವ್‌ ಅವರನ್ನು ಒಳಗೊಂಡ ಟೀಮ್‌ ಇಂಡಿಯಾ ಸದ್ಯ ವಿಶ್ವ ಕ್ರಿಕೆಟ್‌ನಲ್ಲಿ ಬಲಿಷ್ಠ ಬೌಲಿಂಗ್‌ ವಿಭಾಗವನ್ನು ಹೊಂದಿರುವ ತಂಡವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com