ಟೆಸ್ಟ್‌ ಕ್ರಿಕೆಟ್‌ನಲ್ಲಿ 400 ರನ್‌ ಗಳಿಸುವ ಅವಕಾಶ ಕಳೆದುಕೊಂಡೆ: ಇಂಜಮಾಮ್ ಉಲ್ ಹಕ್

ಪಾಕಿಸ್ತಾನ ಕ್ರಿಕೆಟ್ ತಂಡದ ಪರ ಹಲವು ದಾಖಲೆಗಳನ್ನು ಬರೆದಿರುವ ಮಾಜಿ ನಾಯಕ ಇಂಜಿಮಾಮ್ ಉಲ್ ಹಕ್ ಟೆಸ್ಟ್ ಕ್ರಿಕೆಟ್ ನಲ್ಲಿ ಪಾಕ್ ಪರ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿರುವ ದಾಖಲೆಯನ್ನೂ ಹೊಂದಿದ್ದಾರೆ.
ಇಂಜಿಮಾಮ್ ಉಲ್ ಹಕ್
ಇಂಜಿಮಾಮ್ ಉಲ್ ಹಕ್

ನವದೆಹಲಿ: ಟೆಸ್ಟ್‌ ಕ್ರಿಕೆಟ್‌ನಲ್ಲಿ 400 ರನ್‌ ಗಳಿಸುವ ಅವಕಾಶ ಕಳೆದುಕೊಂಡೆ: ಇಂಜಮಾಮ್ ಉಲ್ ಹಕ್
ನವದೆಹಲಿ: ಪಾಕಿಸ್ತಾನ ಕ್ರಿಕೆಟ್ ತಂಡದ ಪರ ಹಲವು ದಾಖಲೆಗಳನ್ನು ಬರೆದಿರುವ ಮಾಜಿ ನಾಯಕ ಇಂಜಿಮಾಮ್ ಉಲ್ ಹಕ್ ಟೆಸ್ಟ್ ಕ್ರಿಕೆಟ್ ನಲ್ಲಿ ಪಾಕ್ ಪರ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿರುವ ದಾಖಲೆಯನ್ನೂ ಹೊಂದಿದ್ದಾರೆ.

ತಮ್ಮ ಅದ್ಭುತ ಟೈಮಿಂಗ್ ಮೂಲಕವೇ ಬೌಲರ್ ಗಳನ್ನು ಬೆಂಡೆತ್ತುತ್ತಿದ್ದ ದೈತ್ಯ ಬಲಗೈ ಬ್ಯಾಟ್ಸ್ ಮನ್ 2002ರಲ್ಲಿ ಲಾಹೋರ್ ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ತಮ್ಮ ವೃತ್ತಿ ಜೀವನದ ಸರ್ವಶ್ರೇಷ್ಠ ಇನಿಂಗ್ಸ್ ಆಗಿ 329 ರನ್ ಗಳನ್ನು ಬಾರಿಸಿದ್ದರು.

ಈ ಬಗ್ಗೆ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಮಾತನಾಡಿರುವ ಇಂಜಿ, ಆ ಪಂದ್ಯದಲ್ಲಿ ತಮ್ಮ ಕಠಿಣ ಪರಿಶ್ರಮವನ್ನು ನೆನೆದಿದ್ದು, ಮ್ಯಾರಥಾನ್ ಬ್ಯಾಟಿಂಗ್ ಪ್ರದರ್ಶನದಲ್ಲಿ 400 ರನ್ ಗಳಿಸುವ ಉತ್ತಮ ಅವಕಾಶವನ್ನು ಕೈಚೆಲ್ಲಿದರ ಕುರಿತಾಗಿ ಮರುಗಿದ್ದಾರೆ.

329 ರನ್‌ ಬಹಳ ನೆನಪಿನಲ್ಲಿ ಉಳಿದಿರುವ ಇನಿಂಗ್ಸ್‌. ನನ್ನ ಕ್ರಿಕೆಟ್‌ ವೃತ್ತಿ ಜೀವನದ ಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನವದು. ಆ ದಿನದ ವಿಶೇಷತೆ ಏನೆಂದರೆ ಬಿಸಿಲನ ತಾಪ ತಡೆಯಲಾರದಷ್ಟಿತ್ತು. ಇಮ್ರಾನ್‌ ನಾಝಿರ್‌ ಕೂಡ ಶತಕ ಬಾರಿಸಿದ್ದರು. ಬಳಿಕ ಪಂದ್ಯದ ಸಂಪೂರ್ಣ ಹಿಡಿತ ನಮ್ಮ ಕೈಲಿತ್ತು. ನನ್ನ ಇನಿಂಗ್ಸ್‌ ಬೆಳೆಯುತ್ತಿದ್ದಂತೇ ಪಾಪ ಕಿವೀಸ್‌ ಆಟಗಾರರು ದಣಿದಂತೆ ಕಾಣುತ್ತಿದ್ದರು. ನಾನು 300 ರನ್‌ ಗಳಿಸಿದಾಗ ಎದುರಾಳಿ ತಂಡದ ಆಟಗಾರರು ಬಳಲಿ ಬೆಂಡಾಗಿದ್ದರು. ಆಗ ನಾನು ಎಷ್ಟು ಬೇಕೊ ಅಷ್ಟು ರನ್‌ ಗಳಿಸುವ ಅವಕಾಶವಿತ್ತು ಎಂದು ಇಂಝಮಾಮ್‌ ಸ್ಮರಿಸಿದ್ದಾರೆ.

ಪಂದ್ಯದಲ್ಲಿ ಪಾಕಿಸ್ತಾನ ತಂಡದ ಪರ ಔಟಾದ ಕೊನೆಯ ಬ್ಯಾಟ್ಸ್‌ಮನ್‌ ಇಂಝಮಾಮ್. ಆದರೆ, ಆ ಸಂದರ್ಭದಲ್ಲಿ ಮತ್ತೊಂದು ತುದಿಯಲ್ಲಿ ಉತ್ತಮ ಬ್ಯಾಟ್ಸ್‌ಮನ್‌ ಇದಿದ್ದರೆ ತಮಗೆ 400 ರನ್‌ ಗಳಿಸುವ ಅವಕಾಶವಿತ್ತು ಎಂದು 50 ವರ್ಷದ ಮಾಜಿ ನಾಯಕ ಹೇಳಿಕೊಂಡಿದ್ದಾರೆ.

"ನಾವು 5-6 ವಿಕೆಟ್‌ ಕಳೆದುಕೊಂಡಾಗ ಮತ್ತೊಂದು ತುದಿಯಲ್ಲಿ ಒಬ್ಬ ಉತ್ತಮ ಬ್ಯಾಟ್ಸ್‌ಮನ್‌ ಇದ್ದಿದ್ದರೆ, ನನಗೆ ವಿಶ್ವ ದಾಖಲೆ ಬರೆಯುವ ಅವಕಾಶವಿತ್ತು. ಸಮಯದ ಅಭಾವ ಇರಲಿಲ್ಲ. ಜೊತೆಗೆ ರನ್‌ಗಳು ಕೂಡ ವೇಗವಾಗಿ ಹರಿಯುತ್ತಿದ್ದವು. 400ಕ್ಕೂ ಹೆಚ್ಚು ರನ್‌ ಗಳಿಸುವ ಎಲ್ಲಾ ಅವಕಾಶವಿತ್ತು. ಇನ್ನೊಂದು ಗಂಟೆ ಬ್ಯಾಟಿಂಗ್‌ ಮಾಡಿದ್ದರೆ ಸಾಕಿತ್ತು ಎಂದು ಇಂಝಿ ಮರುಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com