ಸ್ವಿಂಗ್‌ ಬೌಲಿಂಗ್‌ಗೆ ಹೊಸ ತಂತ್ರ ಸೂಚಿಸಿದ ಸ್ಪಿನ್ ಮಾಂತ್ರಿಕ ಶೇನ್‌ ವಾರ್ನ್

ಕೋವಿಡ್-19 ಹತೋಟಿಗೆ ಬಂದ ಬಳಿಕ ಪುನರಾರಂಭವಾಗುವ ಕ್ರಿಕೆಟ್ ಟೂರ್ನಿಗಳಲ್ಲಿ ಚೆಂಡಿಗೆ ಹೊಳಪು ನೀಡಲು ಎಂಜಲು ಸವರುವುದು ಅಥವಾ ಚೆಂಡು ವಿರೂಪಗೊಳಿಸುವುದಕ್ಕೆ ಪರ್ಯಾಯವಾಗಿ ಇನ್ನೇನು ಮಾಡಬಹುದು.
ಶೇನ್ ವಾರ್ನ್
ಶೇನ್ ವಾರ್ನ್

ಮೆಲ್ಬೋರ್ನ್‌: ಕೋವಿಡ್-19 ಹತೋಟಿಗೆ ಬಂದ ಬಳಿಕ ಪುನರಾರಂಭವಾಗುವ ಕ್ರಿಕೆಟ್ ಟೂರ್ನಿಗಳಲ್ಲಿ ಚೆಂಡಿಗೆ ಹೊಳಪು ನೀಡಲು ಎಂಜಲು ಸವರುವುದು ಅಥವಾ ಚೆಂಡು ವಿರೂಪಗೊಳಿಸುವುದಕ್ಕೆ ಪರ್ಯಾಯವಾಗಿ ಇನ್ನೇನು ಮಾಡಬಹುದು ಎಂಬ ಪ್ರಶ್ನೆಗೆ ಆಸ್ಟ್ರೇಲಿಯಾದ ಸ್ಪಿನ್‌ ದಿಗ್ಗಜ ಶೇನ್‌ ವಾರ್ನ್‌ ಅದ್ವಿತೀಯ ಉತ್ತರದೊಂದಿಗೆ ಮುಂದೆ ಬಂದಿದ್ದಾರೆ.

ಅವರ ಪ್ರಕಾರ, ಬೌಲಿಂಗ್‌ ವೇಳೆ ಚೆಂಡನ್ನು ಸ್ವಿಂಗ್‌ ಮಾಡುವುದಕ್ಕಾಗಿ ಅದಕ್ಕೆ ಎಂಜಲು ಸವರುವ ಅಥವಾ ಅದನ್ನು ವಿರೂಪಗೊಳಿಸುವ ಬದಲು ಅದನ್ನು ತಯಾರು ಮಾಡುವಾಗಲೇ ಅದರ ಒಂದು ಬದಿ ಭಾರವಾಗಿರುವಂತೆ ನೋಡಿಕೊಳ್ಳಬೇಕಿದೆ. 

ಒಂದು ಬದಿ ಭಾರವಾಗಿದ್ದರೆ, ಚೆಂಡು ತನ್ನಿಂತಾನಾಗಿಯೇ ಸ್ವಿಂಗ್‌ ಆಗುತ್ತದೆ. ಈ ರೀತಿಯ ಚೆಂಡುಗಳನ್ನು ಬಳಸುವುದರಿಂದ ವೇಗದ ಬೌಲರ್‌ಗಳು ಸಪಾಟೆ ಪಿಚ್‌ಗಳಲ್ಲೂ ಸ್ವಿಂಗ್‌ ಮಾಡಬಹುದು. ಹೊಸ ಪದ್ಧತಿಯಿಂದ ಚೆಂಡು ವಿರೂಪಗೊಳಿಸುವ ಪದ್ಧತಿಯನ್ನು ಶಾಶ್ವತವಾಗಿ ನಿರ್ಮೂಲ ಮಾಡಬಹುದು ಎಂಬುದು ಲೆಗ್‌ಸ್ಪಿನ್ ಮಾಂತ್ರಿಕನ ಅಭಿಪ್ರಾಯವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com