ಕ್ರಿಕೆಟ್ ಪುನಾರಂಭವಾದಾಗ ಅಪ್ಪುಗೆ ಇಲ್ಲ, ವಿಕೆಟ್ ಬಿದ್ದ ಸಂಭ್ರಾಮಾಚರಣೆಗೆ ಕೇವಲ ನಮಸ್ತೆಯಷ್ಟೇ

ಎಲ್ಲವೂ ಸರಿಯಾಗಿದ್ದಿದ್ದರೆ ಭಾರತ ಐಪಿಎಲ್ ಆಯೋಜನೆಯಲ್ಲಿ ನಿರತವಾಗಬೇಕಿತ್ತು. ಆದರೆ ಕೊರೋನಾ ಕಾರಣದಿಂದಾಗಿ  ಕ್ರಿಕೆಟ್ ನ ಎಲ್ಲಾ ಪಂದ್ಯಗಳೂ ರದ್ದಾಗಿದೆ.  
ಅಜಿಂಕ್ಯ ರಹಾನೆ
ಅಜಿಂಕ್ಯ ರಹಾನೆ

ಎಲ್ಲವೂ ಸರಿಯಾಗಿದ್ದಿದ್ದರೆ ಭಾರತ ಐಪಿಎಲ್ ಆಯೋಜನೆಯಲ್ಲಿ ನಿರತವಾಗಬೇಕಿತ್ತು. ಆದರೆ ಕೊರೋನಾ ಕಾರಣದಿಂದಾಗಿ  ಕ್ರಿಕೆಟ್ ನ ಎಲ್ಲಾ ಪಂದ್ಯಗಳೂ ರದ್ದಾಗಿದೆ.  

ಕೋವಿಡ್-19 ಪರಿಸ್ಥಿತಿ ಸುಧಾರಿಸಿ ಕ್ರಿಕೆಟ್ ಪಂದ್ಯಗಳು ಮರಳಿ ಪ್ರಾರಂಭವಾಗುವುದರ ಬಗ್ಗೆ ಯಾರಿಗೂ ಖಾತರಿ ಇಲ್ಲ. ಈ ನಡುವೆ ಭಾರತದ ಉಪನಾಯಕ ಅಜಿಂಕ್ಯಾ ರೆಹಾನೆ ಕ್ರಿಕೆಟ್ ಮುಂದಿನ ದಿನಗಳಲ್ಲಿ ಹೇಗಿರಲಿದೆ ಏನೆಲ್ಲಾ ಬದಲಾವಣೆಗಳಾಗಲಿವೆ ಎಂಬ ಬಗ್ಗೆ ಮಾತನಾಡಿದ್ದಾರೆ. 

ಕ್ರಿಕೆಟ್ ಪುನಾರಂಭವಾದರೆ ಅಭಿಮಾನಿಗಳ ಸುರಕ್ಷತೆ ಮುಖ್ಯವಾಗಿರಲಿದೆ. ಕೋವಿಡ್-19 ಕ್ಕೆ ಚುಚ್ಚುಮದ್ದು ಕಂಡುಹಿಡಿಯುವವರೆಗೂ ಏನಾಗಲಿದೆ ಎಂದು ಯಾರಿಗೂ ಗೊತ್ತಿಲ್ಲ. ಆನ್ ಫೀಲ್ಡ್ ನಲ್ಲಿ ಕ್ರಿಕೆಟ್ ಹೆಚ್ಚಿನ ಬದಲಾವಣೆ ಕಾಣಲಿದೆ ಎಂದೆನಿಸುವುದಿಲ್ಲ, ಆಫ್ ಫೀಲ್ಡ್ ನಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ವಿಕೆಟ್ ಉರುಳಿದಾಗ ಈ ಹಿಂದೆ ಅಪ್ಪುಗೆಯ ಮೂಲಕ ಸಂಭ್ರಮಾಚರಣೆ ಮಾಡುತ್ತಿದ್ದೆವು. ಆದರೆ ಇನ್ನು ಮುಂದಿನ ದಿನಗಳಲ್ಲಿ ಇದು ಬದಲಾವಣೆಯಾಗಲಿದೆ. ವಿಕೆಟ್ ಬಿದ್ದಾಗ ನಮಸ್ತೆ ಹೇಳುವ ಮೂಲಕವಷ್ಟೇ ಸಂಬ್ರ್ಹಮಾಚರಣೆ ನಡೆಯಲಿದೆ ಎಂದು ಹೇಳಿದ್ದಾರೆ.   

ಇದೇ ವೇಳೆ ಕೋವಿಡ್-19,  ಚೆಂಡಿನ ಹೊಳಪು ಹೆಚ್ಚುಸುವುದಕ್ಕೆ ಬೆವರು ಹಚ್ಚುವುದರ ಬಗ್ಗೆಯೂ ಚರ್ಚೆಗಳನ್ನು ಪ್ರಾರಂಭವಾಗುವಾಗುವಂತೆ ಮಾಡಿರುವ ಬಗ್ಗೆಯೂ ಮಾತನಾಡಿರುವ ಅಜಿಂಕ್ಯ ರೆಹಾನೆ, ಐಸಿಸಿ ಚೆಂಡು ವಿರೂಪಗೊಳಿಸುವುದನ್ನು ಕಾನೂನುಬದ್ಧ ಮಾಡಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com