11 ವರ್ಷದ ನಂಟು: ಪ್ರೀತಿಯ ಬ್ರುನೊ ಅಗಲಿಕೆಗೆ ಕಂಬನಿ ಮಿಡಿದ ವಿರುಷ್ಕಾ ದಂಪತಿ

ಕಳೆದ ಹನ್ನೊಂದು ವರ್ಷಗಳಿಂದ ತಮ್ಮ ಪ್ರೀತಿಗೆ ಪಾತ್ರವಾಗಿದ್ದ ಶ್ವಾನ ಬ್ರುನೊ ಅಗಲಿಕೆಯಿಂಡ ವಿರುಷ್ಕಾ ದಂಪತಿ ದುಃಖಿತರಾಗಿದ್ದಾರೆ.  
ಬ್ರುನೊ ಜತೆಗೆ ಕೊಹ್ಲಿ ದಂಪತಿ
ಬ್ರುನೊ ಜತೆಗೆ ಕೊಹ್ಲಿ ದಂಪತಿ

ಕಳೆದ ಹನ್ನೊಂದು ವರ್ಷಗಳಿಂದ ತಮ್ಮ ಪ್ರೀತಿಗೆ ಪಾತ್ರವಾಗಿದ್ದ ಶ್ವಾನ ಬ್ರುನೊ ಅಗಲಿಕೆಯಿಂಡ ವಿರುಷ್ಕಾ ದಂಪತಿ ದುಃಖಿತರಾಗಿದ್ದಾರೆ. 

ಟೀಂ ಇಂಡಿಯಾ  ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಮುದ್ದಾಗಿ ಸಾಕಿದ್ದ ಶ್ವಾನ ಬ್ರುನೊ ಸಾವನ್ನಪ್ಪಿದ್ದು ದಂಪತಿಗಳು ಕಂಬನಿ ಮಿಡಿದಿದ್ದಾರೆ. 

ಸಾಮಾಜಿಕ ತಾಣ ಇನ್‍ಸ್ಟಾಗ್ರಾಮ್‍ನಲ್ಲಿ ದಂಪತಿಗಳು ಈ ಬಗ್ಗೆ ಸಂತಾಪ ಸೂಚಿಸಿದ್ದು ರೆಸ್ಟ್ ಇನ್ ಪೀಸ್ ಮೈ ಬ್ರುನೊ. 11 ವರ್ಷ ನಮ್ಮ ಜೀವನದೊಂದಿಗಿದ್ದು ಜೀವನ ಪೂರ್ತಿ ಸಂಪರ್ಕದಲ್ಲಿರುವಂತೆ ಂಆಡಿದ್ದ ನೀನಿಂದು ಒಳ್ಲೆಯ ಜಾಗಕ್ಕೆ ಹೋಗಿರುವೆ, ದೇವರು  ನಿನ್ನ ಆತ್ಮಕ್ಕೆ ಶಾಂತಿ ನೀಡಲಿ  ಎಂದು ಕೊಹ್ಲಿ ಬರೆದಿದ್ದಾರೆ.

ಇನ್ನು ಅನಿಷ್ಕಾ ಶರ್ಮಾ  ಬ್ರುನೊ ಜೊತೆಗೆ ತಾವಿಬ್ಬರೂ ಇರುವ ಫೋಟೋ ಹಾಕಿ "ಬ್ರುನೊ ಆರ್‍ಐಪಿ " ಎಂದು ಹೇಳಿದ್ದಾರೆ.

ಇಷ್ಟು ಮಾತ್ರವಲ್ಲದೆ ಕೊಹ್ಲಿ ಬ್ರುನೋ ಭಾವಚಿತ್ರ ಹಂಚಿಕೊಂಡ ನಂತರ 15 ಬೀದಿ ನಾಯಿಗಳನ್ನು ದತ್ತು ಪಡೆದುಕೊಳ್ಳುವ ಮೂಲಕ ತಮ್ಮ ಪ್ರಾಣಿ ಪ್ರೀತಿಯನ್ನು ಸಾಬೀತು ಮಾಡಿದ್ದಾರೆ

 
 
 
 
 
 
 
 
 
 
 
 
 

♥️ Bruno ♥️ RIP ♥️

A post shared by AnushkaSharma1588 (@anushkasharma) on

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com