ಐಪಿಎಲ್‌ನ ಸಾರ್ವಕಾಲಿಕ ಅತ್ಯುತ್ತಮ ತಂಡ ಪ್ರಕಟಿಸಿದ ಡೇವಿಡ್ ವಾರ್ನರ್: ಯುವಿ, ಎಬಿಡಿಗಿಲ್ಲ ಸ್ಥಾನ!

ಸನ್‌ರೈಸರ್ಸ್‌ ಹೈದರಾಬಾದ್ ತಂಡದ ನಾಯಕ ಡೇವಿಡ್‌ ವಾರ್ನರ್‌ ಸಾರ್ವಕಾಲಿಕ ಶ್ರೇಷ್ಠ ಇಂಡಿಯನ್ ಪ್ರೀಮಿಯರ್‌ ಲೀಗ್‌ ತಂಡವನ್ನು ಪ್ರಕಟಿಸಿದ್ದಾರೆ.

Published: 07th May 2020 06:37 PM  |   Last Updated: 07th May 2020 07:12 PM   |  A+A-


Dhoni-Kohli-Rohit

ಧೋನಿ-ಕೊಹ್ಲಿ-ರೋಹಿತ್

Posted By : Vishwanath S
Source : UNI

ನವದೆಹಲಿ: ಸನ್‌ರೈಸರ್ಸ್‌ ಹೈದರಾಬಾದ್ ತಂಡದ ನಾಯಕ ಡೇವಿಡ್‌ ವಾರ್ನರ್‌ ಸಾರ್ವಕಾಲಿಕ ಶ್ರೇಷ್ಠ ಇಂಡಿಯನ್ ಪ್ರೀಮಿಯರ್‌ ಲೀಗ್‌ ತಂಡವನ್ನು ಪ್ರಕಟಿಸಿದ್ದು, ಐಪಿಎಲ್‌ನಲ್ಲಿ ಧೂಳೆಬ್ಬಿಸಿದ್ದ ದಿಗ್ಗಜರಾದ ಯುವರಾಜ್ ಸಿಂಗ್, ಶೇನ್‌ ವಾಟ್ಸನ್, ಕೀರಣ್ ಪೊಲಾರ್ಡ್‌ ಮತ್ತು ಲಸಿತ್‌ ಮಾಲಿಂಗ ಅವರನ್ನು ಹೊರಗಿಟ್ಟಿದ್ದಾರೆ.

ಕ್ರಿಕ್‌ಬಜ್‌ ವೆಬ್‌ಸೈಟ್‌ ಸಲುವಾಗಿ ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ ನಡೆಸಿಕೊಟ್ಟ ಆನ್‌ಲೈನ್‌ ಸಂದರ್ಶನದಲ್ಲಿ ಮಾತನಾಡಿದ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌, ತಮ್ಮ ಬೆಸ್ಟ್‌ ಐಪಿಎಲ್‌ ಇಲೆವೆನ್ ತಂಡದಲ್ಲಿ ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ ಮತ್ತು ಮಿಚೆಲ್‌ ಸ್ಟಾರ್ಕ್‌ ಅವರಂತಹ ತಾರೆಗಳಿಗೆ ಸ್ಥಾನ ನೀಡಿದ್ದಾರೆ.

ಡೇವಿಡ್‌ ವಾರ್ನರ್‌ ಪ್ರಕಟಿಸಿದ ಸಾರ್ವಕಾಲಿಕ ಐಪಿಎಲ್ ಇಲೆವೆನ್:
1. ರೋಹಿತ್‌ ಶರ್ಮಾ (ಓಪನರ್), 2. ಡೇವಿಡ್‌ ವಾರ್ನರ್‌ (ಓಪನರ್), 3. ವಿರಾಟ್‌ ಕೊಹ್ಲಿ (ಬ್ಯಾಟ್ಸ್‌ಮನ್), 4. ಸುರೇಶ್‌ ರೈನಾ (ಬ್ಯಾಟ್ಸ್‌ಮನ್), 5. ಹಾರ್ದಿಕ್‌ ಪಾಂಡ್ಯ (ಆಲ್‌ರೌಂಡರ್), 6. ಗ್ಲೆನ್‌ ಮ್ಯಾಕ್ಸ್‌ವೆಲ್‌ (ಆಲ್‌ರೌಂಡರ್‌), 7. ಎಂಎಸ್‌ ಧೋನಿ (ವಿಕೆಟ್‌ ಕೀಪರ್‌), 8. ಮಿಚೆಲ್‌ ಸ್ಟಾರ್ಕ್ (ಎಡಗೈ ವೇಗಿ), 9. ಜಸ್‌ಪ್ರೀತ್‌ ಬುಮ್ರಾ (ಬಲಗೈ ವೇಗಿ), 10. ಆಶಿಶ್ ನೆಹ್ರಾ (ಎಡಗೈ ವೇಗಿ), 11. ಯುಜ್ವೇಂದ್ರ ಚಹಲ್‌ ಅಥವಾ ಕುಲ್ದೀಪ್‌ ಯಾದವ್ (ಸ್ಪಿನ್ನರ್‌).

Stay up to date on all the latest ಕ್ರಿಕೆಟ್ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp