ಕೋವಿಡ್: ಕ್ರಿಕೆಟ್ ಆರಂಭವಾದ ಬಳಿಕವೇ ಐಪಿಎಲ್ ಬಗ್ಗೆ ನಿರ್ಧಾರ - ಬಿಸಿಸಿಐ

ಕೊರೊನಾ ವೈರಸ್ ಜಾಗತಿಕ ಸಾಂಕ್ರಾಮಿಕ ರೋಗವಾಗಿ ಮಾರ್ಪಟ್ಟಿದ್ದು, ಐಪಿಎಲ್ ಅನ್ನು ಅನಿರ್ದಿಷ್ಟವಾಗಿ ಮುಂದೂಡಲಾಗಿದೆ. ಕ್ರಿಕೆಟ್ ಪುನರಾರಂಭಗೊಂಡ ನಂತರವೇ ಐಪಿಎಲ್ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಭಿಪ್ರಾಯಪಟ್ಟಿದೆ.
ಐಪಿಎಲ್
ಐಪಿಎಲ್

ನವದೆಹಲಿ: ಕೊರೊನಾ ವೈರಸ್ ಜಾಗತಿಕ ಸಾಂಕ್ರಾಮಿಕ ರೋಗವಾಗಿ ಮಾರ್ಪಟ್ಟಿದ್ದು, ಐಪಿಎಲ್ ಅನ್ನು ಅನಿರ್ದಿಷ್ಟವಾಗಿ ಮುಂದೂಡಲಾಗಿದೆ. ಕ್ರಿಕೆಟ್ ಪುನರಾರಂಭಗೊಂಡ ನಂತರವೇ ಐಪಿಎಲ್ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಭಿಪ್ರಾಯಪಟ್ಟಿದೆ.

ಐಪಿಎಲ್ ನ 13ನೇ ಆವೃತ್ತಿ ಮುಂದೂಡುವ ಬಗ್ಗೆ ಮಂಡಳಿ ಯೋಚಿಸುತ್ತಿಲ್ಲ ಮತ್ತು ಕ್ರಿಕೆಟ್ ಪ್ರಾರಂಭವಾದ ನಂತರವೇ ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಶುಕ್ರವಾರ ಹೇಳಿದ್ದಾರೆ.

ಮಾರಕ ಕೊರೋನಾ ವೈರಸ್ ದೇಶಾದ್ಯಂತ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನಲೆಯಲ್ಲಿ ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ 2020 ಕ್ರಿಕೆಟ್ ಟೂರ್ನಿಯನ್ನು ಅನಿರ್ದಿಷ್ಠಾವಧಿಗೆ ಬಿಸಿಸಿಐ ಮುಂದೂಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com