ಕೊಹ್ಲಿಯನ್ನು ರೋಜರ್ ಫೆಡರರ್‌ ಗೆ, ಸ್ಟೀವ್ ಸ್ಮಿತ್ ರನ್ನು ನಡಾಲ್ ಗೆ ಹೋಲಿಸಿದ ಎಬಿ ಡಿವಿಲಿಯರ್ಸ್

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನು ಟೆನಿಸ್ ಲೋಕದ ದಂತಕತೆ ರೋಜರ್ ಫೆಡರರ್‌ ಅವರಿಗೆ ಹೋಲಿಸಿರುವ ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್ ಎಬಿ ಡಿ ವಿಲಿಯರ್ಸ್ ಅವರು, ಕೊಹ್ಲಿಯ ಸಹಜ ಪ್ರತಿಭೆ ಫೆಡರರ್ ಗೆ ಸಮಾನವಾಗಿ ನಿಲ್ಲುವಂತೆ ಮಾಡಿದೆ ಎಂದಿದ್ದಾರೆ.
ವಿರಾಟ್ ಕೊಹ್ಲಿ - ಎಬಿಡಿ
ವಿರಾಟ್ ಕೊಹ್ಲಿ - ಎಬಿಡಿ

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನು ಟೆನಿಸ್ ಲೋಕದ ದಂತಕತೆ ರೋಜರ್ ಫೆಡರರ್‌ ಅವರಿಗೆ ಹೋಲಿಸಿರುವ ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್ ಎಬಿ ಡಿ ವಿಲಿಯರ್ಸ್ ಅವರು, ಕೊಹ್ಲಿಯ ಸಹಜ ಪ್ರತಿಭೆ ಫೆಡರರ್ ಗೆ ಸಮಾನವಾಗಿ ನಿಲ್ಲುವಂತೆ ಮಾಡಿದೆ ಎಂದಿದ್ದಾರೆ.

ಜಿಂಜಾಬ್ವೆ ಮಾಜಿ ಕ್ರಿಕೆಟರ್, ಕಾಮೆಂಟೇಟರ್ ಪೊಮ್ಮಿ ಎಂಬಂಗ್ವಾ ಜೊತೆಗಿನ ಇನ್‌ಸ್ಟಾಗ್ರಾಮ್‌ ಲೈವ್‌ನಲ್ಲಿ ಮಾತನಾಡಿದ ಎಬಿ ಡಿ, ಕೊಹ್ಲಿಯೊಬ್ಬ ನೈಸರ್ಗಿಕವಾಗಿ ಚೆಂಡಿನ ಹೊಡೆತಗಾರ. ಅವರು ರೋಜರ್ ಫೆಡರರ್ ಇದ್ದಂ0ತೆ. ಅದೇ ರೀತಿ ಸ್ಟಿವ್ ಸ್ಮಿತ್ ಅವರು ರಾಫೆಲ್ ನಡಾಲ್ ಇದ್ದಂತೆ. ಅವರ ಮಾನಸಿಕವಾಗಿ ಹೆಚ್ಚು ಬಲಶಾಲಿ,' ಎಂದರು.

ವಿರಾಟ್ ಕೊಹ್ಲಿ ಕ್ರಿಕೆಟ್ ಆಟವನ್ನು ಸಹಜವಾಗಿ, ತುಂಬಾ ಸುಲಭವಾಗಿ ಆಡುವ ಕೌಶಲವನ್ನು ಹೊಂದಿದ್ದಾರೆ ಎಂದು ಶ್ಲಾಘಿಸಿದ್ದಾರೆ.

'ಹೆಚ್ಚು ರನ್ ಮಾಡಲು ಸ್ಮಿತ್ ದಾರಿಯನ್ನು ಕಂಡುಕೊಳ್ಳುತ್ತಾರೆ. ಅವರು ಸ್ವಾಭಾವಿಕವಾಗಿ ಕಾಣದಿದ್ದರೂ ಅವರು ರನ್ ನಿಭಾಯಿಸಬಲ್ಲರು, ದಾಖಲೆಗಳನ್ನು ಮುರಿಯಬಲ್ಲರು. ಆದರೆ ಕೊಹ್ಲಿ ಸ್ವಾಭಾವಿಕ ಆಟದಿಂದ ವಿಶ್ವದಾದ್ಯಂತ ರನ್ ಗಳಿಸಿದ್ದಾರೆ. ಹೀಗಾಗಿ ಅವರೇ ನನ್ನ ನೆಚ್ಚಿನ ಆಯ್ಕೆ,' ಎಂದು ಎಬಿ ಡಿ ವಿವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com