ಎಂಎಸ್ ಧೋನಿ ಕಮ್ ಬ್ಯಾಕ್ ಮಾಡುವುದು ಬಹಳ ಕಷ್ಟ: ವೆಂಕಟೇಶ್ ಪ್ರಸಾದ್

ಇನ್ನೆರಡು ತಿಂಗಳು ಕಳೆದರೆ ಕ್ರಿಕೆಟ್‌ ಅಂಗಣದಿಂದ ಧೋನಿ ಕಣ್ಮರೆಯಾಗಿ ಒಂದು ವರ್ಷವಗುತ್ತದೆ.  ಕಳೆದ ವರ್ಷ ಜುಲೈನಲ್ಲಿ ನಡೆದ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್‌ ಟೂರ್ನಿಯಲ್ಲಿ ನ್ಯೂಜಿಲೆಂಡ್‌ ಎದುರಿನ ಸೆಮಿಫೈನಲ್‌ನಲ್ಲಿ ಧೋನಿ ಕೊನೆಯ ಬಾರಿ ಕ್ರಿಕೆಟ್‌ ಅಂಗಣದಲ್ಲಿ ಕಾಣಿಸಿಕೊಂಡಿದ್ದರು. 
ಎಂಎಸ್ ಧೋನಿ-ವೆಂಕಟೇಶ್ ಪ್ರಸಾದ್
ಎಂಎಸ್ ಧೋನಿ-ವೆಂಕಟೇಶ್ ಪ್ರಸಾದ್

ನವದೆಹಲಿ: ಇನ್ನೆರಡು ತಿಂಗಳು ಕಳೆದರೆ ಕ್ರಿಕೆಟ್‌ ಅಂಗಣದಿಂದ ಧೋನಿ ಕಣ್ಮರೆಯಾಗಿ ಒಂದು ವರ್ಷವಗುತ್ತದೆ.  ಕಳೆದ ವರ್ಷ ಜುಲೈನಲ್ಲಿ ನಡೆದ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್‌ ಟೂರ್ನಿಯಲ್ಲಿ ನ್ಯೂಜಿಲೆಂಡ್‌ ಎದುರಿನ ಸೆಮಿಫೈನಲ್‌ನಲ್ಲಿ ಧೋನಿ ಕೊನೆಯ ಬಾರಿ ಕ್ರಿಕೆಟ್‌ ಅಂಗಣದಲ್ಲಿ ಕಾಣಿಸಿಕೊಂಡಿದ್ದರು. 

"ಧೋನಿಗೆ ತಂಡಕ್ಕೆ ಮರಳುವುದು ನಿಜಕ್ಕೂ ಕಷ್ಟದ ಕೆಲಸ. ಏಕೆಂದರೆ ಕಳೆದ ಒಂದು ವರ್ಷದಿಂದ ಅವರು ಕ್ರಿಕೆಟ್‌ ಆಡಿಲ್ಲ. ಹೀಗಾಗಿ ತಂಡಕ್ಕೆ ಮರಳುವ ಹಾದಿ ಅಷ್ಟು ಸುಲಭವಲ್ಲ ಎಂದು ವಿಶೇಷ ಸಂದರ್ಶನದಲ್ಲಿ ವೆಂಕಟೇಶ್ ಪ್ರಸಾದ್‌ ಹೇಳಿದ್ದಾರೆ.

ಧೋನಿ ಅವರು ತುಂಬಾ ಫಿಟ್ ಆಗಿದ್ದಾರೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ವಯಸ್ಸಾದಂತೆ ಕ್ರಿಯಾಶೀಲತೆ ಕಡಿಮೆಯಾಗುತ್ತದೆ. ಧೋನಿ 40ರ ಸಮೀಪದಲ್ಲಿದ್ದಾರೆ. ಆದ್ದರಿಂದ, ಅದು ಅವರಿಗೆ ಸುಲಭವಾಗುವುದಿಲ್ಲ. ಇನ್ನು ಧೋನಿಯನ್ನು ಆಯ್ಕೆ ಮಾಡುವುದನ್ನು ತಂಡದ ನಿರ್ವಹಣೆಗೆ ಬಿಡುತ್ತೇನೆ ಎಂದು ಹೇಳಿದ್ದಾರೆ.

2019ರ ವಿಶ್ವಕಪ್ ಬಳಿಕ 38 ವರ್ಷದ ಧೋನಿ ಕ್ರಿಕೆಟ್ ನಿವೃತ್ತಿ ಘೋಷಿಸಲಿದ್ದಾರೆ ಎಂದು ಹೇಳಲಾಗಿತ್ತು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com