ಸ್ಮಿತ್ ವಿರುದ್ಧ ಟ್ವೀಟ್: ಐಸಿಸಿ ಟ್ರೋಲ್‌ನಿಂದ ಮನನೊಂದ ಶೊಯೆಬ್ ಅಖ್ತರ್, ಪಕ್ಷಪಾತಿ ಆರೋಪ!

ಆಧುನಿಕ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಪೈಕಿ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವ್‌ ಸ್ಮಿತ್‌ ಅಗ್ರಗಣ್ಯರು. ಆದರೆ, ಸ್ಮಿತ್‌ ಅವರನ್ನು ಔಟ್‌ ಮಾಡಲು ಕೇವಲ ಮೂರೇ ಮೂರು ಬೌನ್ಸರ್‌ ಸಾಕು ಎಂದು ಪಾಕಿಸ್ತಾನದ ಮಾಜಿ ವೇಗದ ಬೌಲರ್‌ ಶೊಯೇಬ್‌ ಅಖ್ತರ್‌ ಬಡಾಯಿ ಕೊಚ್ಚಿಕೊಂಡಿದ್ದರು.
ಮೈಕಲ್ ಜೋರ್ಡನ್-ಅಖ್ತರ್
ಮೈಕಲ್ ಜೋರ್ಡನ್-ಅಖ್ತರ್

ನವದೆಹಲಿ: ಆಧುನಿಕ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಪೈಕಿ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವ್‌ ಸ್ಮಿತ್‌ ಅಗ್ರಗಣ್ಯರು. ಆದರೆ, ಸ್ಮಿತ್‌ ಅವರನ್ನು ಔಟ್‌ ಮಾಡಲು ಕೇವಲ ಮೂರೇ ಮೂರು ಬೌನ್ಸರ್‌ ಸಾಕು ಎಂದು ಪಾಕಿಸ್ತಾನದ ಮಾಜಿ ವೇಗದ ಬೌಲರ್‌ ಶೊಯೇಬ್‌ ಅಖ್ತರ್‌ ಬಡಾಯಿ ಕೊಚ್ಚಿಕೊಂಡಿದ್ದರು. ಇದಕ್ಕೆ ಐಸಿಸಿ ಬ್ಯಾಸ್ಕೆಟ್‌ಬಾಲ್ ತಾರೆ ಮೈಕೆಲ್ ಜೋರ್ಡಾನ್ ಅವರ ವ್ಯಂಗ್ಯ ನಗುಮುಖದ ಫೋಟೋ ಹಾಕಿ ಟ್ರೋಲ್ ಮಾಡಿತ್ತು.

ಐಸಿಸಿ ಟ್ರೋಲ್ ನಿಂದ ಮನನೊಂದ ಶೊಯೇಬ್ ಅಖ್ತರ್ ಮತ್ತೊಂದು ಟ್ವೀಟ್ ಮಾಡಿ ಐಸಿಸಿ ಈ ರೀತಿ ನನ್ನನ್ನು ವ್ಯಂಗ್ಯವಾಡುತ್ತದೆ ಎಂದು ಭಾವಿಸಿರಲಿಲ್ಲ. ಐಸಿಸಿ ಪಕ್ಷಪಾತಿ ಎಂದು ಆರೋಪಿಸಿದ್ದಾರೆ.

2018ರ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಚೆಂಡು ವಿರೂಪಗೊಳಿಸಿ ಸಿಕ್ಕಿಬಿದ್ದು ಒಂದು ವರ್ಷ ನಿಷೇಧ ಶಿಕ್ಷೆಗೆ ಗುರಿಯಾಗಿದ್ದ ಸ್ಮಿತ್‌, 2019ರಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಕಮ್‌ಬ್ಯಾಕ್‌ ಮಾಡಿದರು. ಎಲ್ಲಕ್ಕಿಂತಲೂ ಮಿಗಿಲಾಗಿ ಆ್ಯಷಸ್‌ ಟೆಸ್ಟ್‌ ಸರಣಿಯಲ್ಲಿ ಆಸ್ಟ್ರೇಲಿಯಾ ಪರ 774 ರನ್‌ಗಳನ್ನು ಬಾರಿಸಿ ಟ್ರೋಫಿ ಕಾಯ್ದುಕೊಳ್ಳುವಂತೆ ಮಾಡಿದರು.

ಇದೀಗ ಇಎಸ್‌ಪಿಎನ್‌ ಕ್ರಿಕ್‌ ಇನ್ಫೋ, ಈಗಿನ ಪೀಳಿಗೆಯ ಸ್ಟಾರ್‌ ಬ್ಯಾಟ್ಸ್‌ಮನ್‌ ಮತ್ತು ಬೌಲರ್‌ಗಳು ಹಿಂದಿನ ತಲೆಮಾರಿನ ದಿಗ್ಗಜರ ಎದುರು ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಸ್ಪರ್ಧೆ ನಡೆದರೆ ಹೇಗಿರುತ್ತದೆ ಎಂದು ಕೆಲ ಆಟಗಾರರ ಫೋಟೊ ಪ್ರಕಟಿಸಿತ್ತು. 

ಶೊಯೇಬ್‌ ಅಖ್ತರ್‌ vs ಸ್ಟೀವ್‌ ಸ್ಮಿತ್‌ ಸೇರಿದಂತೆ ಹಲವು ದಿಗ್ಗಜರ ನಡುವೆ ಪೈಪೋಟಿ ನಡೆದರೆ ಹೇಗಿರುತ್ತದೆ ಎಂದು ಕ್ರಿಕೆಟ್‌ ಅಭಿಮಾನಿಗಳನ್ನು ಕ್ರಿಕ್‌ಇನ್ಫೋ ಪ್ರಶ್ನಿಸಿತ್ತು.

ಇದಕ್ಕೆ ಪ್ರತ್ಯುತ್ತರ ನೀಡಿದ್ದ ರಾವಲಪಿಂಡಿ ಎಕ್ಸ್‌ಪ್ರೆಸ್‌ ಖ್ಯಾತಿಯ ವೇಗಿ ಅಖ್ತರ್‌, "ಈಗಲೂ ಕೂಡ 3 ಬಲಿಷ್ಠ ಬೌನ್ಸರ್‌ ಬಳಿಕ ನಾಲ್ಕನೇ ಎಸೆತದಲ್ಲಿ ಸ್ಟೀವ್‌ ಸ್ಮಿತ್‌ ವಿಕೆಟ್‌ ಪಡೆಯಬಲ್ಲೆ ಎಂದು ಟ್ವೀಟ್‌ ಮಾಡಿದ್ದರು. ಈ ಟ್ವೀಟ್ ಬಾರಿ ವೈರಲ್ ಆಗಿತ್ತು. ಅಖ್ತರ್ ಅವರನ್ನು ಟ್ರೋಲ್ ಆಗುವಂತೆ ಮಾಡಿತ್ತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com