ಕೊಹ್ಲಿ ಮತ್ತು ಪೀಟರ್ಸೆನ್
ಕೊಹ್ಲಿ ಮತ್ತು ಪೀಟರ್ಸೆನ್

ವಿರಾಟ್ ಕೊಹ್ಲಿ ವಿಶ್ವದ ಶ್ರೇಷ್ಠ ಬ್ಯಾಟ್ಸ್ ಮನ್, ಸ್ಟೀವ್ ಸ್ಮಿತ್ ಕೊಹ್ಲಿ ದಾಖಲೆಯ ಸಮೀಪ ಕೂಡ ಬರಲು ಸಾಧ್ಯವಿಲ್ಲ: ಕೆವಿನ್ ಪೀಟರ್ಸೆನ್

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ವಿಶ್ವದ ಶ್ರೇಷ್ಠ ಬ್ಯಾಟ್ಸ್ ಮನ್ ಆಗಿದ್ದು, ಆಸಿಸ್ ದೈತ್ಯ ಸ್ಟೀವ್ ಸ್ಮಿತ್ ಕೊಹ್ಲಿ ದಾಖಲೆಗಳ ಸಮೀಪ ಕೂಡ ಬರಲು ಸಾಧ್ಯವಿಲ್ಲ ಎಂದು ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಕೆವಿನ್ ಪೀಟರ್ಸೆನ್ ಹೇಳಿದ್ದಾರೆ.

ನವದೆಹಲಿ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ವಿಶ್ವದ ಶ್ರೇಷ್ಠ ಬ್ಯಾಟ್ಸ್ ಮನ್ ಆಗಿದ್ದು, ಆಸಿಸ್ ದೈತ್ಯ ಸ್ಟೀವ್ ಸ್ಮಿತ್ ಕೊಹ್ಲಿ ದಾಖಲೆಗಳ ಸಮೀಪ ಕೂಡ ಬರಲು ಸಾಧ್ಯವಿಲ್ಲ ಎಂದು ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಕೆವಿನ್ ಪೀಟರ್ಸೆನ್ ಹೇಳಿದ್ದಾರೆ.

ಖಾಸಗಿ ಕ್ರೀಡಾ ವೆಬ್ ಸೈಟ್ ವೊಂದಕ್ಕಾಗಿ ಜಿಂಬಾಂಬ್ವಾ ಮಾಜಿ ಆಟಗಾರ ಪಮ್ಮಿ ಎಂ ಬಂಗ್ವಾ ನಡೆಸಿದ್ದ ಇನ್‌ಸ್ಟಾಗ್ರಾಮ್‌ ಲೈವ್‌ ಚಾಟ್‌ನಲ್ಲಿ ಮಾತನಾಡುತ್ತಿದ್ದ ಕೆಪಿ, ಕೊಹ್ಲಿಯನ್ನು ವಿಶ್ವದ ಶ್ರೇಷ್ಠ ಬ್ಯಾಟ್ಸ್ ಮನ್ ಎಂದು ಹಾಡಿ ಹೊಗಳಿದ್ದಾರೆ. ವಿರಾಟ್‌ ಕೊಹ್ಲಿ ಹಾಗೂ ಸ್ಟೀವನ್‌ ಸ್ಮಿತ್‌  ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಿ ಎಂಬ ಪ್ರಶ್ನೆಗೆ ಉತ್ತರಿಸಿದ ಪೀಟರ್ಸೆನ್, ವಿರಾಟ್‌ ಕೊಹ್ಲಿ ಫ್ರೀಕ್‌ಶೋ, ಅವರು ಚೇಸಿಂಗ್‌ ವಿಷಯಕ್ಕೆ ಬಂದಾಗ ಭಾರತದ ಪರ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದಾರೆ. ಟೀಮ್‌ ಇಂಡಿಯಾ ಪರ ಅದ್ಭುತ ಬ್ಯಾಟ್ಸ್‌ಮನ್‌ ಅವರು. ಸ್ಟೀವ್ ಸ್ಮಿತ್  ಕೊಹ್ಲಿ ದಾಖಲೆಗಳ ಸಮೀಪ ಕೂಡ ಬರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಅಂತೆಯೇ ಸಚಿನ್ ಮತ್ತು ವಿರಾಟ್ ಕೊಹ್ಲಿ ಎಂದಾಗಲೂ ಕೆಪಿ, ಕೊಹ್ಲಿಯನ್ನು ಬಿಟ್ಟುಕೊಡಲಿಲ್ಲ. ಸಚಿನ್‌ಗಿಂತ ಟೀಮ್‌ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯೇ ಗ್ರೇಟ್‌ ಎಂದು ಇಂಗ್ಲೆಂಡ್‌ ಮಾಜಿ ಆಟಗಾರ ಹೇಳಿದ್ದಾರೆ. ಕ್ರಿಕೆಟ್ ದಂತಕತೆ ಸಚಿನ್‌ ತೆಂಡೂಲ್ಕರ್‌ ಹಾಗೂ ಆಸಿಸ್‌ ಮಾಜಿ  ನಾಯಕ ಸ್ಟೀವನ್‌ ಸ್ಮಿತ್‌ ಅವರಿಗಿಂತ ಅತ್ಯುತ್ತಮ ಚೇಸಿಂಗ್‌ ದಾಖಲೆ ಹೊಂದಿರುವ ಕಾರಣ ವಿರಾಟ್‌ ಕೊಹ್ಲಿಯೇ ಗ್ರೇಟ್‌ ಎಂದು ಕೆವಿನ್‌ ಪೀಟರ್ಸನ್‌ ಹೇಳಿದ್ದಾರೆ.

'ವಿರಾಟ್ ಕೊಹ್ಲಿ ಅವರ ಚೇಸಿಂಗ್ ದಾಖಲೆಗಳು ಭಯಾನಕವಾಗಿವೆ. ಅವರು ಚೇಸಿಂಗ್‌ಗೆ ಸಂಬಂಧಿಸಿದಂತೆ ಶೇ. 80 ಕ್ಕಿಂತ ಹೆಚ್ಚು ಸರಾಸರಿ ಹೊಂದಿದ್ದಾರೆ. ಅವರು ಭಾರತಕ್ಕಾಗಿ ನಿರಂತರವಾಗಿ ಪಂದ್ಯಗಳನ್ನು ಗೆಲ್ಲುತ್ತಾರೆ. ಅವರು ಬ್ಯಾಟಿಂಗ್ ನಲ್ಲಿ ಅತ್ಯುತ್ತಮ ಸ್ಥಿರತೆ ಹೊಂದಿದ್ದಾರೆ.  ಎಂತಹುದೇ ಕ್ಲಿಷ್ಟಕರ ಪರಿಸ್ಥಿತಿ ಇದ್ದರೂ ತಮ್ಮ ಅಮೋಘ ಬ್ಯಾಟಿಂಗ್ ಕೌಶಲ್ಯದ ಮೂಲಕ ಪರಿಸ್ಥಿತಿಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುತ್ತಾರೆ. ಆ ಮೂಲಕ ತಂಡದ ಗೆಲುವಿಗೆ ಕಾರಣರಾಗುತ್ತಾರೆ ಎಂದು ಪೀಟರ್ಸೆನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನು ಕೊಹ್ಲಿ ಮತ್ತು ಸಚಿನ್ ಬ್ಯಾಟಿಂಗ್ ದತ್ತಾಂಶಗಳನ್ನು ಗಮನಿಸಿದರೆ, ಎರಡನೇ ಬ್ಯಾಟಿಂಗ್ ವೇಳೆ ಸಚಿನ್ ಅವರು 42.33 ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದಾರೆ. ಆದರೆ ಕೊಹ್ಲಿ 68.33 ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದಾರೆ. ಕೊಹ್ಲಿ ಗಳಿಸಿರುವ 11,867 ಏಕದಿನ ರನ್ ಗಳ ಪೈಕಿ ಬರೊಬ್ಬರಿ  7039 ರನ್ ಗಳು ಎರಡನೇ ಬ್ಯಾಟಿಂಗ್ ವೇಳೆ ಬಂದ ರನ್ ಗಳಾಗಿವೆ. ಈ ಅಂಕಿ ಸಂಖ್ಯೆಗಳೇ ಕೊಹ್ಲಿ ಎರಡನೇ ಬ್ಯಾಟಿಂಗ್ ಅಥವಾ ಚೇಸಿಂಗ್ ವೇಳೆ ಶ್ರೇಷ್ಠ ಸರಾಸರಿ ಹೊಂದಿದ್ದಾರೆ ಎಂಬುದನ್ನು ಸಾಬೀತು ಪಡಿಸುತ್ತದೆ.

Related Stories

No stories found.

Advertisement

X
Kannada Prabha
www.kannadaprabha.com