ಖಾಲಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ವಧು ಇಲ್ಲದ ವಿವಾಹದಂತೆ: ಶೋಯೆಬ್ ಅಖ್ತರ್

ಖಾಲಿಯಾದ ಕ್ರೀಡಾಂಗಣದಲ್ಲಿ  ಕ್ರಿಕೆಟ್ ಆಡುವುದು ವಧುವಿಲ್ಲದೆಯೇ ವಿವಾಹವಾದಂತೆ ಇರಲಿದೆ ಎಂದು ಪಾಕಿಸ್ತಾನದ ಮಾಜಿ ವೇಗದ ಬೌಲರ್  ಶೋಯೆಬ್ ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ. ಖಾಲಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿಯಿಂದಾಗಿ ಕ್ರೀಡಾಳುಗಳಿಗೆ ಉತ್ಸಾಹ ಇರುವುದಿಲ್ಲ ಅಲ್ಲದೆ ಜಾಹೀರಾತು ಮಾರುಕಟ್ತೆ ಸೇರಿ ಇತರೆ ವ್ಯವಹಾರಕ್ಕೆ ಸಹ ಕಷ್ತಕರವಾಗಲಿದೆ ಎಂದು ಅವರು ಹೇಳಿದ್
ಶೋಯೆಬ್ ಅಖ್ತರ್
ಶೋಯೆಬ್ ಅಖ್ತರ್

ಲಾಹೋರ್: ಖಾಲಿಯಾದ ಕ್ರೀಡಾಂಗಣದಲ್ಲಿ  ಕ್ರಿಕೆಟ್ ಆಡುವುದು ವಧುವಿಲ್ಲದೆಯೇ ವಿವಾಹವಾದಂತೆ ಇರಲಿದೆ ಎಂದು ಪಾಕಿಸ್ತಾನದ ಮಾಜಿ ವೇಗದ ಬೌಲರ್  ಶೋಯೆಬ್ ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ. ಖಾಲಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿಯಿಂದಾಗಿ ಕ್ರೀಡಾಳುಗಳಿಗೆ ಉತ್ಸಾಹ ಇರುವುದಿಲ್ಲ ಅಲ್ಲದೆ ಜಾಹೀರಾತು ಮಾರುಕಟ್ತೆ ಸೇರಿ ಇತರೆ ವ್ಯವಹಾರಕ್ಕೆ ಸಹ ಕಷ್ತಕರವಾಗಲಿದೆ ಎಂದು ಅವರು ಹೇಳಿದ್ದಾರೆ.

ಸಧ್ಯ ನಡೆಯುತ್ತಿರುವ ಕೊರೋನಾ ಸೋಂಕಿನ ಲಾಕ್ ಡೌನ್ ನಡುವೆ ಅನೇಕ ಕ್ರೀಡಾಕೂಟಗಳು ಮುಂದೂಡಿಕೆಯಾಗಿದೆ ಇಲ್ಲವೆ ರದ್ದಾಗಿದೆ. ಇನ್ನು ಕೆಲವು ಕ್ರೀಡಾಪಂದ್ಯಗಳು ಮುಚ್ಚಿದ ಬಾಗಿಲ ಒಳಗೆ ಆಯೋಜನೆಯಾಗಿದೆ. ಕೊರೋನಾ ಸಂಕಷ್ಟದ ಈ ದಿನಗಳಲ್ಲಿ ಕ್ರಿಕೆಟ್ ಪಂದ್ಯ ಸಹ ಇದೇ ರೀತಿ ಮುಚ್ಚಿದ ಬಾಗಿಲಿನೊಳಗೆ ಕ್ರೀಡಾಪ್ರೇಮಿಗಳಿಲ್ಲದೆ ಆಡಬೇಕಿದೆ. "ಖಾಲಿ ಕ್ರೀಡಾಂಗಣಗಳಲ್ಲಿ ಕ್ರಿಕೆಟ್ ಆಡುವುದು ಕ್ರಿಕೆಟ್ ಬೋರ್ಡ್‌ಗಳಿಗೆ ಕಾರ್ಯಸಾಧ್ಯ ಮತ್ತು ಸುಲಭ ಎನಿಸಬಹುದು. ಆದರೆ ನಾವು ಇದನ್ನು ಹೆಚ್ಚು ಪ್ರಚಾರ ನಡೆಸಬಹುದೆಂದು ನಾನು ಭಾವಿಸುವುದಿಲ್ಲ. ಖಾಲಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡುವುದು ವಧುವೇ ಇಲ್ಲದೆ ವಿವಾಹವಾದಂತೆ ಇರಲಿದೆ. ಆಟಗಾರರಿಗೆ ಜನಸಂದಣಿ ಇದ್ದಾಗಉತ್ಸಾಹ ಬರುತ್ತದೆ.ಇನ್ನು ಒಂದು ವರ್ಷದಲ್ಲಿ ಈ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳುತ್ತದೆ ಎಂದು ನಾನು ಭಾವಿಸುತ್ತೇನೆ."

ಈ ಹಿಂದೆ, ಭಾರತದ ನಾಯಕ ವಿರಾಟ್ ಕೊಹ್ಲಿ ಕೂಡ  ಮುಚ್ಚಿದ ಬಾಗಿಲುಗಳ ಹಿಂದೆ ಆಡುವಾಗ ಜನಗಳಿಂಡ ತುಂಬಿದ ಕ್ರೀಡಾಂಗಣದಲ್ಲಿ ಆಡೌವಾಗಿನ ಉತ್ಸಾಹವಿರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇನ್ನು ಅಖ್ತರ್ತಾವು 2003 ರ ಭಾರತ ವಿರುದ್ಧದ ಪ್ರಸಿದ್ಧ ವಿಶ್ವಕಪ್ ಹಣಾಹಣಿಯ ಸಚಿನ್ ತೆಂಡುಲ್ಕರ್ ಶತಕಗಳಿಸಬೇಕೆಂದು ಬಯಸಿದ್ದೆ ಎಂದು ಹೇಳಿದ್ದಾರೆ. "ನಾನು ತುಂಬಾ ದುಃಖಿತನಾಗಿದ್ದೆ ಏಕೆಂದರೆ ಸಚಿನ್ 98 ರನ್ ಗಳಿಸಿ ಹೊರನಡೆದಿದ್ದರು. ಇದು ವಿಶೇಷ ಇನ್ನಿಂಗ್ಸ್, ಅವರು ಸೆಂಚುರಿ  ಬಾರಿಸಬೇಕಿತ್ತು" ಅಖ್ತರ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com