ಸ್ಥಳೀಯ ಪ್ರಸರಣದಲ್ಲಿ ಯಾವುದೇ ಅಪಾಯವಿಲ್ಲದಿದ್ದರೆ ಮಾತ್ರ ಕ್ರಿಕೆಟ್ ಪುನರ್ ಆರಂಭಿಸಿ-ಐಸಿಸಿ 

ವಿಶ್ವದಲ್ಲಿ ಕೊರೋನಾ ಅಟ್ಟಹಾಸ ಮೆರೆಯುತ್ತಿದ್ದರಿಂದ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಕ್ರಿಕೆಟ್ ಪಂದ್ಯಗಳನ್ನು ಅಮಾನತು ಗೊಳಿಸಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಆದೇಶ ಹೊರಡಿಸಿತ್ತು. ಈಗ ಕ್ರಿಕೆಟ್ ಮತ್ತೆ ಆರಂಭಿಸಲು ಐಸಿಸಿ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದೆ
ಐಸಿಸಿ
ಐಸಿಸಿ

ನವದೆಹಲಿ: ವಿಶ್ವದಲ್ಲಿ ಕೊರೋನಾ ಅಟ್ಟಹಾಸ ಮೆರೆಯುತ್ತಿದ್ದರಿಂದ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಕ್ರಿಕೆಟ್ ಪಂದ್ಯಗಳನ್ನು ಅಮಾನತು ಗೊಳಿಸಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಆದೇಶ ಹೊರಡಿಸಿತ್ತು. ಈಗ ಕ್ರಿಕೆಟ್ ಮತ್ತೆ ಆರಂಭಿಸಲು ಐಸಿಸಿ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದೆ.

* ಸಮುದಾಯ, ದೇಶೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ಅನ್ನು ಆರಂಭಿಸುವ ಗುರಿಯನ್ನು ಐಸಿಸಿ ಮಾರ್ಗಸೂಚಿಗಳು ಹೊಂದಿವೆ. ಸದಸ್ಯ ವೈದ್ಯಕೀಯ ಪ್ರತಿನಿಧಿಗಳೊಂದಿಗೆ ಸಂವಾದದ ನಂತರ ಐಸಿಸಿ ವೈದ್ಯಕೀಯ ಸಲಹಾ ಸಮಿತಿಯು ಈ ಮಾರ್ಗಸೂಚಿಗಳನ್ನು ಸಿದ್ಧಪಡಿಸಿದೆ, ಶಿಫಾರಸುಗಳು ಈ ಕೆಳಗಿನಂತಿವೆ:

* ಸುರಕ್ಷತೆ ಮೊದಲು, ಐಸಿಸಿಯ ಮಾರ್ಗಸೂಚಿಯ ಪ್ರಾಥಮಿಕ ಪರಿಗಣನೆಯಲ್ಲಿ ಒಂದಾಗಿದೆ. ಎಲ್ಲಾ ಹಂತಗಳಲ್ಲಿ ಸರ್ಕಾರದ ನೀತಿ ನಿಯಮ ಪಾಲಿಸುವುದು ಕಡ್ಡಾಯವಾಗಿದೆ. 

* ಸ್ಥಳೀಯ ಪ್ರಸರಣದಲ್ಲಿ ಹೆಚ್ಚಿನ ಸೋಂಕು  ಅಥವಾ ಯಾವುದೇ ಅಪಾಯವಿಲ್ಲದಿದ್ದರೆ ಮಾತ್ರ ಕ್ರಿಕೆಟ್ ಆರಂಭಿಸಬಹುದು ಎಂದು ಐಸಿಸಿ ಮಾರ್ಗಸೂಚಿಯಲ್ಲಿ ತಿಳಿಸಿದೆ.

ಈ ಮಧ್ಯೆ ಹೆಚ್ಚಿನದಾಗಿ ಕ್ರಿಕೆಟ್ ಆಡುವ ಇಂಗ್ಲೆಂಡ್ ರಾಷ್ಟ್ರ ಹೆಚ್ಚು ಕೋವಿಡ್-19 ಭಾದಿತ ರಾಷ್ಟ್ರವಾಗಿದ್ದರೆ ಭಾರತ ಹಾಗೂ ಪಾಕಿಸ್ತಾನದಲ್ಲಿ ಇತ್ತೀಚಿನ ವಾರಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ವರದಿಯಾಗುತ್ತಿವೆ.

* ಕ್ರಿಕೆಟ್ ಪರಿಸರಕ್ಕೆ ಸಂಬಂಧಿಸಿದಂತೆ ಆಟದ ಮೈದಾನ, ತರಬೇತಿ ಸ್ಥಳ, ಬಟ್ಟೆ ಬದಲಾಯಿಸುವ ಕೊಠಡಿಗಳು, ಉಪಕರಣಗಳು, ಪಂದ್ಯದ ಮೊದಲು ಅಥವಾ ನಂತರ ಚೆಂಡಿನ ನಿರ್ವಹಣೆ ಮತ್ತಿತರ ಅಂಶಗಳನ್ನು ಖಾತ್ರಿಪಡಿಸಿಕೊಳ್ಳಬೇಕೆಂದು ಐಸಿಸಿ ತಿಳಿಸಿದೆ. 

* ಕೊರೋನಾವೈರಸ್ ಹಿನ್ನೆಲೆಯಲ್ಲಿ  ಐಪಿಎಲ್ ಹಾಗೂ ದ್ವಿಪಕ್ಷೀಯ ಸರಣಿಯನ್ನು ಮುಂದೂಡಲಾಗಿದೆ. ಕ್ರಿಕೆಟ್ ಸಂಪರ್ಕ ವಲ್ಲದ ಕ್ರೀಡೆಯಾಗಿದ್ದರೂ ಆರೋಗ್ಯಕ್ಕೆ ಸಂಬಂಧಿಸಿದ ಬಿಕ್ಕಟ್ಟು ಎದುರಾಗದಂತೆ ಎಚ್ಚರಿಕೆ ವಹಿಸುವಂತೆ ಐಸಿಸಿ ಸೂಚನೆ ನೀಡಿದೆ. 

* ಕ್ರಿಕೆಟ್ ನ್ನು ಯಾವಾಗ ಆರಂಭಿಸಬೇಕು ಎಂಬುದರ ಬಗ್ಗೆ ಐಸಿಸಿ ಸದಸ್ಯರುಗಳು ಸರ್ಕಾರದಿಂದ ಸಲಹೆ ಪಡೆಯಬೇಕು, ಸರ್ಕಾರದಿಂದ ಅನುಮೋದನೆ ಪಡೆಯುವವರೆಗೆ ಯಾವುದೇ ಕ್ರಿಕೆಟ್ ಚಟುವಟಿಕೆಯನ್ನು ಪ್ರಾರಂಭಿಸಬಾರದು, ದೇಶಿಯ ಮತ್ತು ಅಂತಾರಾಷ್ಟ್ರೀಯ ವಿಮಾಯಾನದ ನಿರ್ಬಂಧಗಳು, ಕ್ವಾರಂಟೈನ್ ಅಗತ್ಯತೆ ಬಗ್ಗೆ ಸರ್ಕಾರದಿಂದ ಸಲಹೆ ಪಡೆಯಬೇಕು, ವಿವಿಧ ರಾಷ್ಟ್ರಗಳಲ್ಲಿರುವ ಸುರಕ್ಷತೆಯ ಶಿಷ್ಟಾಚಾರದ ಬಗ್ಗೆ ಆಟಗಾರರು ಮತ್ತಿತರ ಸಂಬಂಧಿಸಿದವರಿಗೆ ಅಗತ್ಯ ತಿಳುವಳಿಕೆ ಮೂಡಿಸಬೇಕು ಎಂದು ಐಸಿಸಿ ತಿಳಿಸಿದೆ. 

* ಆಗಾಗ್ಗೆ ಕೈಗಳನ್ನು ಸೋಪ್ ಅಥವಾ ಅಲ್ಕೋಹಾಲ್ ಆಧಾರಿತ ದ್ರಾವಣದಿಂದ ಸ್ವಚ್ಚಗೊಳಿಸುವುದು, ಕಣ್ಣು, ಮೂಗು ಮತ್ತು ತುಟಿಗಳನ್ನು ಮುಟ್ಟಿಕೊಳ್ಳುವುದು ತಡೆಯುವುದು, ಸೀನುವಾಗ ಅಥವಾ ಕೆಮ್ಮುವಾಗ ಬಾಯಿ ಮಧ್ಯ ಕರ ವಸ್ತ್ರ ಹಿಡಿಯುವುದು ಮತ್ತಿತರ ಮುಂಜಾಗತ್ರಾ ಕ್ರಮಗಳ ಬಗ್ಗೆ ತಿಳಿಯಬೇಕೆಂದು ಐಸಿಸಿ ಸೂಚನೆ ನೀಡಿದೆ. 

* ಸರಿಯಾಗಿ ಸ್ವಚ್ಛಗೊಳಿಸದ ಹೊರತಾಗಿ ಕ್ರಿಕೆಟ್ ಸಲಕರಣಗಳನ್ನು ಬೇರೆ ಯಾರೊಂದಿಗೂ ಹಂಚಿಕೊಳ್ಳಬಾರದು, ಬಟ್ಟೆ ಬದಲಾಯಿಸುವ ಕೊಠಡಿಗಳು, ಶವರ್ ಸೌಕರ್ಯ ಮತ್ತಿತರ ಸೋಂಕು ಹರಡುವ ಪ್ರದೇಶಗಳನ್ನು ಕಡಿಮೆಯಾಗಿ ಬಳಸುವಂತೆ ಆಟಗಾರರಿಗೆ ಸಲಹೆ ನೀಡಬೇಕು ಎಂದು ಸೂಚನೆ ನೀಡಲಾಗಿದೆ.

* ಜೀವನದಲ್ಲಿ ವ್ಯಕ್ತಿಗಳು ಸಾಮಾನ್ಯ  ಪ್ರಜ್ಞೆಯನ್ನು ಪಡೆಯಲು  ಕ್ರಿಕೆಟ್ ಒಂದು ಪಾತ್ರವನ್ನು ವಹಿಸಬೇಕು ಮತ್ತು ಅದರೊಂದಿಗೆ ಪ್ರಮುಖ ದೈಹಿಕ ಮತ್ತು ಮಾನಸಿಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂದು ಐಸಿಸಿ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com