ರೋಹಿತ್ ಶರ್ಮಾ ನಾಯಕತ್ವ ಕೊಹ್ಲಿಯಂತಲ್ಲ, ಎಂಎಸ್ ಧೋನಿಗೆ ಹೋಲಿಸಬಹುದು: ಸುರೇಶ್ ರೈನಾ

ಟೀಂ ಇಂಡಿಯಾ ಸೀಮಿತ ಓವರ್‌ಗಳ ಉಪ ನಾಯಕ ರೋಹಿತ್ ಶರ್ಮಾ ಅವರ ನಾಯಕತ್ವದ ಶೈಲಿಯು ನಾಯಕ ವಿರಾಟ್ ಕೊಹ್ಲಿ ಅವರ ಶೈಲಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ ಎಂದು ಸುರೇಶ್ ರೈನಾ ಹೇಳಿದ್ದಾರೆ.
ಕೊಹ್ಲಿ-ರೈನಾ
ಕೊಹ್ಲಿ-ರೈನಾ

ನವದೆಹಲಿ: ಟೀಂ ಇಂಡಿಯಾ ಸೀಮಿತ ಓವರ್‌ಗಳ ಉಪ ನಾಯಕ ರೋಹಿತ್ ಶರ್ಮಾ ಅವರ ನಾಯಕತ್ವದ ಶೈಲಿಯು ನಾಯಕ ವಿರಾಟ್ ಕೊಹ್ಲಿ ಅವರ ಶೈಲಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ ಎಂದು ಸುರೇಶ್ ರೈನಾ ಹೇಳಿದ್ದಾರೆ.

ರೋಹಿತ್ ಶರ್ಮಾರ ನಾಯಕತ್ವ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಶೈಲಿಯೊಂದಿಗೆ ಹೋಲಿಸಬಹುದು. ರೋಹಿತ್ ಅವರ ಶಾಂತತೆ ಮತ್ತು ಆಟಗಾರರನ್ನು ಪ್ರೇರೇಪಿಸುವ ಸಾಮರ್ಥ್ಯವು ಅವರನ್ನು ಧೋನಿಗೆ ಹೋಲಿಸಬಹುದಾಗಿದೆ ಎಂದು ಸುರೇಶ್ ರೈನಾ ಹೇಳಿದ್ದಾರೆ. 

ರೋಹಿತ್ ಶಾಂತವಾಗಿ ಕೆಲಸ ಮಾಡುವ ರೀತಿ, ಜನರನ್ನು ಪ್ರೇರೇಪಿಸುವ ರೀತಿ. ಅವರು ಬಿಂದಾಸ್, ಅವರು ಬ್ಯಾಟಿಂಗ್ ಮಾಡಲು ಹೋದಾಗಲೆಲ್ಲಾ ಭರ್ಜರಿ ರನ್ ಗಳಿಸುತ್ತಾರೆ. ವಿಶ್ವಾಸದಿಂದ ಬ್ಯಾಟಿಂಗ್ ಮಾಡುತ್ತಾರೆ ಹೀಗಾಗಿ ಉಳಿದ ಆಟಗಾರರು ಸಹ ಅವರಿಂದ ಪ್ರೇರಣೆ ತೆಗೆದುಕೊಳ್ಳುತ್ತಾರೆ. ಇದೇ ಕಾರಣಕ್ಕೆ ರೋಹಿತ್ ಬಗ್ಗೆ ಗೌರವವಿದೆ ಎಂದು ಹೇಳಿದ್ದಾರೆ. 

ನಾನು ಪುಣೆ ವಿರುದ್ಧದ ಫೈನಲ್‌ನಲ್ಲಿ ಪಂದ್ಯದ ವೇಳೆ ನೋಡಿದ್ದೇನೆ, ರೋಹಿತ್ ಮುಂಬೈನ ನಾಯಕನಾಗಿ ಸುಮಾರು 2-3 ಉತ್ತಮ ನಿರ್ಧಾರಗಳನ್ನು ತೆಗೆದುಕೊಂಡಿದ್ದರು. ಕಠಿಣ ಪರಿಸ್ಥಿತಿಯಲ್ಲಿ ವಿಕೆಟ್ ಗಳೇ ಬೀಳದಂತಾ ಪರಿಸ್ಥಿತಿಯಲ್ಲಿ ಅಚ್ಚರಿಯ ಬದಲಾವಣೆಗಳನ್ನು ಮಾಡಿದ ರೀತಿ, ಎದುರಾಳಿ ಬ್ಯಾಟ್ಸ್ ಮನ್ ಗಳ ಮೇಲೆ ಒತ್ತಡ ಹೇರಿದ್ದು, ಈ ಎಲ್ಲಾ ನಿರ್ಧಾರಗಳನ್ನು ರೋಹತ್ ತಾನೇ ತೆಗೆದುಕೊಳ್ಳುತ್ತಿದ್ದಾನೆ. ಹೌದು, ಹೊರಗಿನಿಂದ ಕೆಲವು ಸಲಹೆಗಳು ಬರಬೇಕು ಆದರೆ ಯಾವಾಗ ಏನು ಮಾಡಬೇಕೆಂದು ಅವನ ಮನಸ್ಸಿನಲ್ಲಿ ತಿಳಿದಿದೆ. ನಾಯಕನಾಗಿ ಇಷ್ಟು ಟ್ರೋಫಿಗಳನ್ನು ಗೆದ್ದಿದ್ದರಲ್ಲಿ ಆಶ್ಚರ್ಯವಿಲ್ಲ ಎಂದು ರೈನಾ ಸ್ಪೋರ್ಟ್ಸ್‌ಸ್ಕ್ರೀನ್‌ನ ಯೂಟ್ಯೂಬ್ ನಲ್ಲಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com