ಮಾದಕ ವಸ್ತು ಜಾಲ ಪ್ರಕರಣ: ಶ್ರೀಲಂಕಾದ ಕ್ರಿಕೆಟ್ ಆಟಗಾರ ಶೆಹನ್ ಮಧುಶಂಕಾ ಬಂಧನ

ಮಾದಕ ವಸ್ತು ಹೆರಾಯಿನ್ ಹೊಂದಿದ್ದ ಆರೋಪದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ ಶೆಹನ್ ಮಧುಶಂಕಾ ಅವರನ್ನು ಶ್ರೀಲಂಕಾ ಪೊಲೀಸರು ಇಂದು ಬಂಧಿಸಿದ್ದಾರೆ.
ಶೆಹನ್ ಮಧುಶಂಕಾ
ಶೆಹನ್ ಮಧುಶಂಕಾ

ಕೊಲಂಬೊ: ಮಾದಕ ವಸ್ತು ಹೆರಾಯಿನ್ ಹೊಂದಿದ್ದ ಆರೋಪದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ ಶೆಹನ್ ಮಧುಶಂಕಾ ಅವರನ್ನು ಶ್ರೀಲಂಕಾ ಪೊಲೀಸರು ಇಂದು ಬಂಧಿಸಿದ್ದಾರೆ.

2018ರಲ್ಲಿ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯದಲ್ಲೇ ಹ್ಯಾಟ್ರಿಕ್ ವಿಕೆಟ್ ಪಡೆದ ಖ್ಯಾತಿ ಹೊಂದಿರುವ 25 ವರ್ಷದ ಮಧುಶಂಕಾ ಅವರನ್ನು ಮ್ಯಾಜಿಸ್ಟ್ರೇಟ್ ಎರಡು ವಾರಗಳ ಕಾಲ ಬಂಧನದಲ್ಲಿಟ್ಟಿದೆ.

ಪನ್ನಾಲಾ ಪಟ್ಟಣದಲ್ಲಿ ಶನಿವಾರ ಶೆಹನ್ ಬಂಧನಕ್ಕೊಳಗಾದಾಗ ಅವರ ಬಳಿ ಕೇವಲ ಎರಡು ಗ್ರಾಂ ಹೆರಾಯಿನ್ ಇತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೇಶಾದ್ಯಂತ ಕೊರೋನಾವೈರಸ್ ಲಾಕ್ ಡೌನ್ ಸಂದರ್ಭದಲ್ಲಿ  ಮತ್ತೊಬ್ಬ ವ್ಯಕ್ತಿಯೊಂದಿಗೆ ಕಾರು ಚಾಲನೆ ಮಾಡುತ್ತಿದ್ದ ಮಧು ಶಂಕಾ ಅವರನ್ನು ತಡೆಯಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. 

ಮಧು ಶಂಕಾ ಜನವರಿ 2018ರಲ್ಲಿ ಚೊಚ್ಚಲ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಹ್ಯಾಟ್ರಿಕ್  ವಿಕೆಟ್ ಕಿತ್ತಿದ್ದರು.  ಬಾಂಗ್ಲಾದೇಶದಲ್ಲಿ ಎರಡು ಟಿ-20 ಪಂದ್ಯಗಳನ್ನಾಡಿದ್ದರು. ಆದರೆ, ಅಲ್ಲಿಂದ ಗಾಯದ ಸಮಸ್ಯೆಯಿಂದಾಗಿ ಯಾವುದೇ ಪಂದ್ಯಗಳನ್ನು ಆಡಿರಲಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com