ಚೆಂಡಿಗೆ ಎಂಜಲು ಸವರುವುದನ್ನು ನಿಲ್ಲಿಸಲು ಬೌಲರ್ ಗಳು ಮಾಸ್ಕ್ ಧರಿಸುವಂತಾಗಲಿ: ಮಿಸ್ಬಾ ಉಲ್-ಹಕ್

ಚೆಂಡಿನ ಹೊಳಪಿಗಾಗಿ ಎಂಜಲು ಬಳಕೆ ನಿಲ್ಲಿಸಲು ಶಿಫಾರಸು ಬಂದಿದ್ದು, ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಪಾಕಿಸ್ತಾನದ ಮುಖ್ಯ ತರಬೇತುದಾರ ಮಿಸ್ಬಾ ಉಲ್-ಹಕ್ ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಕೋವಿಡ್-19 ಪರಿಸ್ಥಿತಿಯ ನಂತರ ಬೌಲರ್ ಗಳಿಗೆ ಎಂಜಲು ಬಳಕೆ ನಿಲ್ಲಿಸುವುದು ಕಷ್ಟ ಸಾಧ್ಯ ಎಂದು ಹೇಳಿದ್ದಾರೆ. 
ಮಿಸ್ಬಾ ಉಲ್-ಹಕ್

ಎಂಜಲು ಬಳಕೆಯನ್ನು ಅಭ್ಯಾಸ ಮಾಡಿಕೊಂಡಿರುವ ಬೌಲರ್ ಗಳಿಗೆ ಇದನ್ನು ಬಿಡುವುದು ಕಷ್ಟವಾಗಬಹುದು. ಈ ಹಿನ್ನೆಲೆಯಲ್ಲಿ ಬೌಲರ್ ಗಳಿಗೆ ಎಂಜಲು ಬಳಕೆಯನ್ನು ತಡೆಯಲು ಮಾಸ್ಕ್ ಧರಿಸುವಂತೆ ಮಾಡಬೇಕೆಂದು ಹೇಳಿದ್ದಾರೆ. 

ಚೆಂಡು ಹೊಳೆಯುವಂತೆ ಮಾಡಲು ಬೌಲರ್ ಗಳು ಎಂಜಲು ಬಳಕೆ ಮಾಡುವುದನ್ನು ಕ್ರಿಕೆಟ್ ನ ಪ್ರಾರಂಭದಿಂದಲೂ ಅಭ್ಯಾಸ ಮಾಡಿಕೊಂಡಿದ್ದಾರೆ. ಒಂದು ವೇಳೆ ಹೊಸ ನಿಯಮಗಳು ಜಾರಿಯಾದರೂ ಸಹ ಬೌಲರ್ ಗಳು ಅದನ್ನು ನೆನಪಿಟ್ಟುಕೊಂಡು ಅಭ್ಯಾಸ ಮಾಡುವುದು ಕಷ್ಟ ಸಾಧ್ಯ ಎಂದು ಮಿಸ್ಬಾ ಉಲ್ ಹಕ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com