ಸುರಕ್ಷಿತ ಪರಿಸರದಲ್ಲಿ ಕ್ರಿಕೆಟ್ ಅಪ್ರಾಯೋಗಿಕ: ರಾಹುಲ್ ದ್ರಾವಿಡ್

ಸುರಕ್ಷಿತ ವಾತಾವರಣದಲ್ಲಿ ಕ್ರಿಕೆಟ್ ಆಡಲು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ) ಯೋಜಿಸುವುದು ಅಪ್ರಾಯೋಗಿಕವಾಗಿದೆ ಮತ್ತು ಇತರ ಕ್ರಿಕೆಟ್ ಮಂಡಳಿ ಇದನ್ನು ಅನುಸರಿಸುವುದು ಅಸಾಧ್ಯ.
ರಾಹುಲ್ ದ್ರಾವಿಡ್
ರಾಹುಲ್ ದ್ರಾವಿಡ್

ನವದೆಹಲಿ: ಸುರಕ್ಷಿತ ವಾತಾವರಣದಲ್ಲಿ ಕ್ರಿಕೆಟ್ ಆಡಲು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ) ಯೋಜಿಸುವುದು ಅಪ್ರಾಯೋಗಿಕವಾಗಿದೆ ಮತ್ತು ಇತರ ಕ್ರಿಕೆಟ್ ಮಂಡಳಿ ಇದನ್ನು ಅನುಸರಿಸುವುದು ಅಸಾಧ್ಯ ಎಂದು ಭಾರತದ ಮಾಜಿ ನಾಯಕ ಮತ್ತು ಅನುಭವಿ ಬ್ಯಾಟ್ಸ್‌ಮನ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.

ಕೊರೊನಾ ಸಾಂಕ್ರಾಮಿಕದ ಹೊರತಾಗಿಯೂ ಇಸಿಬಿ ಕ್ರಿಕೆಟ್ ಋತುವನ್ನು ಪ್ರಾರಂಭಿಸಲು ಸಜ್ಜಾಗಿದೆ ಮತ್ತು ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧ ಮೂರು ಪಂದ್ಯಗಳ ಸರಣಿಯನ್ನು ಘೋಷಿಸಿದೆ. ಕೆರಿಬಿಯನ್ ಆಟಗಾರರು ಪ್ರವಾಸಕ್ಕೆ ಒಂದು ತಿಂಗಳ ಮೊದಲು ಇಂಗ್ಲೆಂಡ್‌ಗೆ ಪ್ರಯಾಣಿಸಲಿದ್ದು, ಇದರಿಂದಾಗಿ ಅವರು ತಮ್ಮ ಗೃಹ ಬಂಧನವನ್ನು ಪೂರ್ಣಗೊಳಿಸಬಹುದು ಮತ್ತು ಸರಣಿಯ ಮೊದಲು ತಮ್ಮ ಸಿದ್ಧತೆಗಳನ್ನು ಮಾಡಿಕೊಳ್ಳಬಹುದು.

ಬಯೋ ಸೆಕ್ಯೂರ್(ಜೀವ ಸುರಕ್ಷತಾ) ಪರಿಸರದಲ್ಲಿ ಪಂದ್ಯಗಳನ್ನು ನಡೆಸಲು ಇಂಗ್ಲೆಂಡ್ ಸಮರ್ಥರಿರಬಹುದು. ಆದರೆ ಪ್ರವಾಸದ ವೇಳೆ ನೀವು ಮಾಡುವ ಪ್ರಯಾಣ, ಪ್ರವಾಸದಲ್ಲಿ ಪಾಲ್ಗೊಳ್ಳುವ ಮಂದಿಯನ್ನೆಲ್ಲ ಗಣನೆಗೆ ತೆಗೆದುಕೊಂಡರೆ ಎಲ್ಲರಿಗೂ ಇಂಗ್ಲೆಂಡಿಗರಂತೆ ಪಂದ್ಯಗಳನ್ನು ಆಯೋಜಿಸಲು ಖಂಡಿತಾ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 

ಬಯೋ ಸೆಕ್ಯೂರ್ ತಾಣಗಳಲ್ಲಿ ಪಂದ್ಯ ನಡೆಸುವಂತೆ ದಕ್ಷಿಣ ಆಫ್ರಿಕಾ ಸಹ ಭಾರತಕ್ಕೆ ಸಲಹೆ ನೀಡಿತ್ತು. ಆದರೆ ಜೀವ ಸುರಕ್ಷತಾ ತಾಣಗಳಲ್ಲಿ ಪಂದ್ಯ ನಡೆಸುವುದು ಎಲ್ಲಾ ದೇಶಗಳಿಗೂ ಸುಲಭ ಸಾಧ್ಯವಿಲ್ಲ ಎಂದು ದ್ರಾವಿಡ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com