ಕೊರೋನಾ ವೈರಸ್ ಎಫೆಕ್ಟ್: ಐಸಿಸಿ ಟಿ20 ವಿಶ್ವಕಪ್ 2022ಕ್ಕೆ ಮುಂದೂಡಿಕೆ, ಐಪಿಎಲ್ ಗೆ ಹಾದಿ ಸುಗಮ?

ಮಹತ್ವದ ಬೆಳವಣಿಗೆಯಲ್ಲಿ ಹಾಲಿ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಐಸಿಸಿ 2022ಕ್ಕೆ ಮುಂದೂಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ದುಬೈ: ಮಹತ್ವದ ಬೆಳವಣಿಗೆಯಲ್ಲಿ ಹಾಲಿ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಐಸಿಸಿ 2022ಕ್ಕೆ ಮುಂದೂಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಹಾಲಿ ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕ ಹಿನ್ನಲೆಯಲ್ಲಿ ಟಿ20 ವಿಶ್ವಕಪ್ ಆಯೋಜನೆ ಕುರಿತು ಐಸಿಸಿ ಇದೇ ಗುರುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ತನ್ನೆಲ್ಲಾ ಕ್ರಿಕೆಟ್ ಸಮಿತಿಗಳ ಸಭೆ ಕರೆದಿದ್ದು, ಸಭೆ ಬಳಿಕ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಮುಂದೂಡುವ ನಿರ್ಣಯ  ಕೈಗೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ ಐಸಿಸಿ ಟೂರ್ನಿಯನ್ನು ಮಂದೂಡುವ ನಿರ್ಣಯ ಕೈಗೊಂಡಿದ್ದೇ ಆದರೆ ಆಗ ಅಕ್ಟೋಬರ್ ನಲ್ಲಿ ಐಪಿಎಲ್ ಟೂರ್ನಿ ಆಯೋಜನೆಗೆ ಹಾದಿ ಸುಗಮವಾಗಲಿದೆ. 

ಈ ಬಗ್ಗೆ ಮಾತನಾಡಿರುವ ಹೆಸರು ಹೇಳಲಿಚ್ಚಿಸದ ಐಸಿಸಿ ಸದಸ್ಯರೊಬ್ಬರು, ಹಾಲಿ ಪರಿಸ್ಥಿತಿಯಲ್ಲಿ ಟಿ20 ವಿಶ್ವಕಪ್ ಟೂರ್ನಿ ಆಯೋಜನೆ ಕಷ್ಟ ಸಾಧ್ಯ. ಸಭೆ ಬಳಿಕ ಐಸಿಸಿ ಅಧಿಕೃತ ಘೋಷಣೆ ಮಾಡಬಹುದು.. ಮಾಡದೆಯೂ ಇರಬಹುದು. ಹಾಲಿ ಪರಿಸ್ಥಿತಿಯಲ್ಲಿ ಟೂರ್ನಿ ಆಯೋಜನೆ  ಸುಲಭದ ಮಾತಲ್ಲ. ಒಂದು ವೇಳೆ ಐಸಿಸಿ ಟೂರ್ನಿ ಮುಂದುವರೆಸಲು ನಿರ್ಧರಿಸಿದರೂ ಟೂರ್ನಿ ಆಯೋಜನೆ ಮಾಡುವುದು ಕೊರೋನಾ ಸಾಂಕ್ರಾಮಿಕದಿಂದ ನಲುಗುತ್ತಿರುವ ಆಸ್ಟ್ರೇಲಿಯಾಗೆ ಸಂಕಷ್ಟ ತಂದೊಡ್ಡಬಹುದು ಎಂದು ಹೇಳಿದ್ದಾರೆ. 

ಇನ್ನು ಇದೇ ಗುರುವಾರ ಐಸಿಸಿಯ ಕಾರ್ಯಕ್ರಮಗಳ ಆಯೋಜನೆ ಸಮಿತಿ ಮುಖ್ಯಸ್ಥ ಕ್ರಿಸ್ ಟೆಟ್ಲಿ ಅವರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, 2022ರ ಅಕ್ಟೋಬರ್ ನವೆಂಬರ್ ನಲ್ಲಿ ಟೂರ್ನಿ ಆಯೋಜನೆಯಾಗುವ ಸಾಧ್ಯತೆ ಇದೆ. ಇದಕ್ಕೂ ಮೊದಲು 2021 ಆವೃತ್ತಿಯ ಟಿ20 ವಿಶ್ವಕಪ್  ಆಯೋಜನೆಗೆ ಯಾವುದೇ ಅಡ್ಡಿ ಇಲ್ಲ ಎನ್ನಲಾಗುತ್ತಿದ್ದು, ಭಾರತದಲ್ಲೇ ಈ ಟೂರ್ನಿ ನಡೆಯಲಿದೆ. ಅಂತೆಯೇ ಐಸಿಸಿ ಹಾಲಿ ಕೊರೋನಾ ವೈರಸ್ ನಿಂದಾಗಿ ವಿವಿಧ ದೇಶಗಳ ಕ್ರಿಕೆಟ್ ಬೋರ್ಡ್ ಗಳಿಗೆ ಉಂಟಾಗಿರುವ ನಷ್ಟ ಭರಿಸಲು ಭವಿಷ್ಯದಲ್ಲಿ ಹೆಚ್ಚೆಚ್ಚು ದ್ವಿಪಕ್ಷೀಯ ಸರಣಿಗಳನ್ನು  ಆಯೋಜಿಸುವ ಕುರಿತು ಸಭೆಯಲ್ಲಿ ನಿರ್ಧರಿಸಲಿದೆ. ಪೂರ್ವ ನಿಯೋಜಿತ ವೇಳಾಪಟ್ಟಿಯಂತೆಯೇ ವರ್ಷಾಂತ್ಯದಲ್ಲಿ ಭಾರತ ತಂಡ ಆಸಿಸ್ ಪ್ರವಾಸ ಕೈಗೊಳ್ಳಲ್ಲಿದೆ. 

ಐಪಿಎಲ್ ಭವಿಷ್ಯ ನಿರ್ಧಾರ
ಇನ್ನು ಇದೇ ವೇಳೆ ಐಪಿಎಲ್ ಟೂರ್ನಿ ಕುರಿತೂ ಐಸಿಸಿ ಚರ್ಚೆ ನಡೆಸಲಿದ್ದು, ಟೂರ್ನಿ ಕುರಿತಂತೆ ಪಟ್ಟು ಹಿಡಿದಿರುವ ಬಿಸಿಸಿಐ ನಿಲುವಿನ ಕುರಿತು ಐಸಿಸಿ ಮಹತ್ವದ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ. ಐಪಿಎಲ್ ಗೆ ಸ್ಟಾರ್ ಸ್ಪೋರ್ಟ್ಸ್ ಬ್ರಾಡ್ ಕಾಸ್ಟಿಂಗ್ ಪಾರ್ಟ್ನರ್ ಆಗಿದ್ದು, ಐಪಿಎಲ್  ರದ್ದತಿಯಿಂದಾಗಿ ತನಗಾಗುವ ನಷ್ಟದ ಕುರಿತು ಮನವರಿಕೆ ಮಾಡಿಕೊಡುವ ಸಾಧ್ಯತೆ ಇದೆ. ಮುಂಬರುವ ಮೂರು ತಿಂಗಳಲ್ಲಿ ಮೂರು ದೊಡ್ಡ ಟೂರ್ನಿಗಳ ಆಯೋಜನೆ ಕುರಿತು ಐಸಿಸಿ ನಿರ್ಧರಿಸಬೇಕಿದೆ. 2021ರ ಫೆಬ್ರವರಿ-ಮಾರ್ಚ್ ನಲ್ಲಿ ಟಿ20 ವಿಶ್ವಕಪ್, ಅಕ್ಟೋಬರ್-ನವೆಂಬರ್ ನಲ್ಲಿ  ಐಪಿಎಲ್, ಮತ್ತೊಂದು ಐಪಿಎಲ್ ಆವೃತ್ತಿಗಾಗಿ ಮಾರ್ಚ್ ಮತ್ತು ಮೇ ತಿಂಗಳಲ್ಲಿ ವೇಳಾಪಟ್ಟಿ ರೂಪಿಸಬೇಕಿದೆ. ಈ ಮೂರು ಟೂರ್ನಿಗಳ ನಡುವೆ ದ್ವಿಪಕ್ಷೀಯ ಸರಣಿಗಳ ಆಯೋಜನೆ ಕೂಡ ಆಗಬೇಕಿದೆ, ಐಪಿಎಲ್ ವಿಚಾರವಾಗಿ ಬಿಸಿಸಿಐ ಪಟ್ಟು ಸಡಿಲಿಸಿಲ್ಲ. ಇದು ಐಸಿಸಿಗೆ ಕಬ್ಬಿಣದ  ಕಡಲೆಯಾಗಿ ಮಾರ್ಪಟ್ಟಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com