ಜೂನ್ ನಲ್ಲಿ ಐಪಿಎಲ್ ಭವಿಷ್ಯ ತೀರ್ಮಾನ!

ಈ ವರ್ಷದ ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಭವಿಷ್ಯದ ನಿರ್ಧಾರವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಜೂನ್ 10 ರವರೆಗೆ ಮುಂದೂಡಿದೆ

Published: 29th May 2020 07:28 PM  |   Last Updated: 29th May 2020 07:28 PM   |  A+A-


IPL_Tropy1

ಐಪಿಎಲ್ ಟ್ರೋಫಿ

Posted By : Nagaraja AB
Source : UNI

ಲಂಡನ್: ಈ ವರ್ಷದ ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಭವಿಷ್ಯದ ನಿರ್ಧಾರವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಜೂನ್ 10 ರವರೆಗೆ ಮುಂದೂಡಿದೆ. ಬಳಿಕವೇ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 13 ನೇ ಆವೃತ್ತಿಗೆ ಸಂಬಂಧಿಸಿದ ನಿರ್ಧಾರವು ಜೂನ್‌ನಲ್ಲಿ ನಿರ್ಧಾರವಾಗಲಿದೆ. 

ಕೊರೊನಾ ವೈರಸ್‌ನಿಂದಾಗಿ ಪಂದ್ಯಾವಳಿಯನ್ನು 2022 ರವರೆಗೆ ಮುಂದೂಡಬಹುದೆಂಬ ಊಹೇಗಳಿದ್ದವು. ಮಂಡಳಿಯು ಮುಂದಿನ ಸಭೆ ಸೇರಿದಾಗ ಜೂನ್ 10 ರೊಳಗೆ ವಿಶ್ವಕಪ್ ಭವಿಷ್ಯವನ್ನು ನಿರ್ಧರಿಸಲಾಗುವುದು ಎಂದು ನಿರ್ಧರಿಸಲಾಯಿತು.

ಜಾಗತಿಕ ಸಾಂಕ್ರಾಮಿಕ ರೋಗವಾಗಿ ಮಾರ್ಪಟ್ಟಿರುವ ಕೊರೊನಾ ವೈರಸ್‌ನಿಂದಾಗಿ ಈ ವರ್ಷ ನಡೆಯಲಿರುವ ಟಿ 20 ವಿಶ್ವಕಪ್ ಅನ್ನು 2022 ರವರೆಗೆ ಮುಂದೂಡಬಹುದೆಂದು ಭಾರತೀಯ ಮಾಧ್ಯಮ ವರದಿ ಮಾಡಿದ್ದವು. ಆದರೆ ಈಗ ವಿಶ್ವಕಪ್ ನಡೆಯುತ್ತದೆಯೇ ಅಥವಾ ಮುಂದೂಡಲಾಗುತ್ತದೆಯೇ ಎಂದು ಜೂನ್‌ನಲ್ಲಿ ನಿರ್ಧರಿಸಲಾಗುತ್ತಿದೆ.

ಐಪಿಎಲ್‌ನ ಭವಿಷ್ಯವು ವಿಶ್ವಕಪ್‌ನ ಭವಿಷ್ಯದೊಂದಿಗೆ ಸಂಬಂಧ ಹೊಂದಿದೆ ಮತ್ತು ಜೂನ್‌ನಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ಐಪಿಎಲ್‌ನ ಭವಿಷ್ಯವನ್ನು ನಿರ್ಧರಿಸುತ್ತದೆ.

ವಿಶ್ವಕಪ್ ಅಕ್ಟೋಬರ್ 18 ರಿಂದ ನವೆಂಬರ್ 15 ರವರೆಗೆ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ವಿಶ್ವಕಪ್ ಅನ್ನು ಆಸ್ಟ್ರೇಲಿಯಾದಲ್ಲಿ ಮುಂದೂಡಿದರೆ, ಐಪಿಎಲ್ ನ 13 ನೇ ಆವೃತ್ತಿಯನ್ನು ನಡೆಸುವ ಮಾರ್ಗವು ತೆರೆಯಬಹುದು ಎಂದು ಅಂದಾಜಿಸಲಾಗುತ್ತಿದೆ.

Stay up to date on all the latest ಕ್ರಿಕೆಟ್ news with The Kannadaprabha App. Download now
Poll
Coronavirus Lockdown

ಕರ್ಫ್ಯೂ, ಭಾನುವಾರದ ಲಾಕ್ ಡೌನ್ ನಿಂದ ರಾಜ್ಯದಲ್ಲಿ ಕೊರೋನಾ ಪ್ರಮಾಣ ತಗ್ಗಲಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
facebook twitter whatsapp