ಹ್ಯಾಕರ್ ಗಳ ಕಾಟಕ್ಕೆ ಬೇಸತ್ತು ಟ್ವಿಟರ್ ಗೆ ಗುಡ್ ಬೈ ಹೇಳಿದ ಪಾಕ್ ಕ್ರಿಕೆಟ್ ತಂಡದ ಮಾಜಿ ನಾಯಕ ವಾಕರ್ ಯೂನಿಸ್

ಹ್ಯಾಕರ್ ಗಳ ಕಾಟಕ್ಕೆ ಬೇಸತ್ತು ಸಾಮಾಜಿಕ ಜಾಲತಾಣಕ್ಕೆ ಪಾಕ್ ಕ್ರಿಕೆಟ್ ತಂಡದ ಮಾಜಿ ನಾಯಕ ವಾಕರ್ ಯೂನಿಸ್ ವಿದಾಯ ಘೋಷಿಸಿದ್ದಾರೆ. 

Published: 29th May 2020 05:12 PM  |   Last Updated: 29th May 2020 05:12 PM   |  A+A-


Pakistan cricket legend Waqar Younis (File Photo)

ಪಾಕ್ ಕ್ರಿಕೆಟ್ ತಂಡದ ಮಾಜಿ ನಾಯಕ ವಾಕರ್ ಯೂನಿಸ್

Posted By : Srinivas Rao BV
Source : Online Desk

ನವದೆಹಲಿ: ಹ್ಯಾಕರ್ ಗಳ ಕಾಟಕ್ಕೆ ಬೇಸತ್ತು ಸಾಮಾಜಿಕ ಜಾಲತಾಣಕ್ಕೆ ಪಾಕ್ ಕ್ರಿಕೆಟ್ ತಂಡದ ಮಾಜಿ ನಾಯಕ ವಾಕರ್ ಯೂನಿಸ್ ವಿದಾಯ ಘೋಷಿಸಿದ್ದಾರೆ. 

ಮೇ.29 ರಂದು ಈ ಬಗ್ಗೆ ಟ್ವಿಟರ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಯೂನಿಸ್, ತಮ್ಮ ಟ್ವಿಟರ್ ಖಾತೆಯನ್ನು ಹ್ಯಾಕರ್ ಗಳು ಹ್ಯಾಕ್ ಮಾಡಿದ್ದು ಆಕ್ಷೇಪಾರ್ಹ, ಅಶ್ಲೀಲ ವಿಡಿಯೋ ಕ್ಲಿಪ್ ನ್ನು ತಮ್ಮ ಖಾತೆಯ ಮೂಲಕ ಲೈಕ್ ಮಾಡಿದ್ದಾರೆ ಈ ಕಾರಣದಿಂದಾಗಿ ತಾವು ಸಾಮಾಜಿಕ ಜಾಲತಾಣ ಖಾತೆಗಳನ್ನು ಡಿಲೀಟ್ ಮಾಡುತ್ತಿರುವುದಾಗಿ ಹೇಳ್ದಿದಾರೆ. 

"ಜನರೊಂದಿಗೆ ಸಂಪರ್ಕ ಸಾಧಿಸುವುದಕ್ಕೆ ಸಾಮಾಜಿಕ ಜಾಲತಾಣ ಸಹಕಾರಿ ಎಂದು ನಂಬಿದ್ದೆ. ಆದರೆ ನನ್ನ ಸಾಮಾಜಿಕ ಜಾಲತಾಣದ ಖಾತೆ 3-4 ಬಾರಿ ಹ್ಯಾಕ್ ಆಗಿದ್ದು, ಸಾಮಾಜಿಕ ಜಾಲತಾಣದಿಂದ ದೂರ ಉಳಿಯುತ್ತಿದ್ದೇನೆ"ಹೇಳಿದ್ದಾರೆ. 

"ನನ್ನ ಖಾತೆಯ ಮೂಲಕ ಅಶ್ಲೀಲ ವಿಡಿಯೋವನ್ನು ಲೈಕ್ ಮಾಡಿರುವುದು ನನಗೆ ಹಾಗೂ ನನ್ನ ಕುಟುಂಬಕ್ಕೆ ಅವಮಾನ, ಮುಜುಗರದ ಸಂಗತಿ, ಈ ದಿನದ ಬಳಿಕ ನಾನು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯನಾಗಿರುವುದಿಲ್ಲ ನಾನು ನನ್ನ ಕುಟುಂಬವನ್ನು ಹೆಚ್ಚು ಪ್ರೀತಿಸುತ್ತೇನೆ, ಸಾಮಾಜಿಕ ಜಾಲತಾಣದಿಂದ ದೂರ ಉಳಿಯಲಿದ್ದೇನೆ ಇದರಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ" ಎಂದು ಯೂನಿಸ್ ತಿಳಿಸಿದ್ದಾರೆ.

Stay up to date on all the latest ಕ್ರಿಕೆಟ್ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp