ಕರ್ನಾಟಕ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ ಕ್ರಿಕೆಟಿಗ ಕೆ.ಎಲ್‌ ರಾಹುಲ್‌

ಅಂತಾರಾಷ್ಟ್ರೀಯ ಕ್ರಿಕೆಟಿಗರಾದ ಕೆ.ಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಏಷ್ಯನ್ ಗೇಮ್ಸ್ ಬೆಳ್ಳಿ ಪದಕ ವಿಜೇತ ಫವಾದ್ ಮಿರ್ಜಾ, ಈಜುಪಟುಗಳಾದ ಖುಷಿ ದಿನೇಶ್, ಶ್ರೀಹರಿ ನಟರಾಜ್, ಅಥ್ಲೀಟ್ ಜಿ. ವಿಜಯಕುಮಾರಿ ಸೇರಿದಂತೆ 31 ಮಂದಿ ಕ್ರೀಡಾ ಸಾಧಕರು ಪ್ರತಿಷ್ಠಿತ ಏಕಲವ್ಯ ಕ್ರೀಡಾ ಗೌರವಕ್ಕೆ ಭಾಜನರಾಗಿದ್ದಾರೆ.
ಕೆಎಲ್ ರಾಹುಲ್
ಕೆಎಲ್ ರಾಹುಲ್

ಬೆಂಗಳೂರು: ಅಂತಾರಾಷ್ಟ್ರೀಯ ಕ್ರಿಕೆಟಿಗರಾದ ಕೆ.ಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಏಷ್ಯನ್ ಗೇಮ್ಸ್ ಬೆಳ್ಳಿ ಪದಕ ವಿಜೇತ ಫವಾದ್ ಮಿರ್ಜಾ, ಈಜುಪಟುಗಳಾದ ಖುಷಿ ದಿನೇಶ್, ಶ್ರೀಹರಿ ನಟರಾಜ್, ಅಥ್ಲೀಟ್ ಜಿ. ವಿಜಯಕುಮಾರಿ ಸೇರಿದಂತೆ 31 ಮಂದಿ ಕ್ರೀಡಾ ಸಾಧಕರು ಪ್ರತಿಷ್ಠಿತ ಏಕಲವ್ಯ ಕ್ರೀಡಾ ಗೌರವಕ್ಕೆ ಭಾಜನರಾಗಿದ್ದಾರೆ.

ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಯನ್ನು ಪರಿಗಣಿಸಿ ಏಕಲವ್ಯ ಪ್ರಶಸ್ತಿಗೆ ಆಯ್ಕೆ ಮಾಡಿರುವ ಕರ್ನಾಟಕ ಸರ್ಕಾರಕ್ಕೆ ಟೀಮ್‌ ಇಂಡಿಯಾ ಆರಂಭಿಕ ಹಾಗೂ ಕಿಂಗ್ಸ್ ಇಲೆವೆನ್‌ ನಾಯಕ ಕೆ.ಎಲ್‌ ರಾಹುಲ್‌ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

"ಕರ್ನಾಟಕ ಸರ್ಕಾರದಿಂದ ಏಕಲವ್ಯ ಪ್ರಶಸ್ತಿಯನ್ನು ಸ್ವೀಕರಿಸಲು ತುಂಬಾ ಹೆಮ್ಮೆಯೆನಿಸುತ್ತಿದೆ. ಈ ಗೌರವವನ್ನು ನೀಡಿದ ಕರ್ನಾಟಕ ಸರಕಾರಕ್ಕೆ ನಾನು ಅಭಾರಿಯಾಗಿದ್ದೇನೆ. ಮತ್ತೊಮ್ಮೆ ಧನ್ಯವಾದಗಳು," ಎಂದು ಕನ್ನಡಿಗ ರಾಹುಲ್‌ ಕನ್ನಡದಲ್ಲಿಯೇ  ಟ್ವೀಟ್‌ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com