ಮಹಿಳಾ ಟಿ20 ಚಾಲೆಂಜ್ ಗಾಗಿ ಹೊಸ ಇಮೋಜಿ ಬಳಸಿದ ಟ್ವೀಟರ್ ಇಂಡಿಯಾ!

ಜಿಯೋ ಮಹಿಳಾ ಟಿ20 ಚಾಲೆಂಜ್ ಗಾಗಿ ಟ್ವಿಟರ್ ಇಂಡಿಯಾ ಮತ್ತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಏಳು ಹೊಸ ಎಮೋಜಿಗಳನ್ನು ಬಳಸಿದೆ.
ಟೀಂ ಇಂಡಿಯಾ-ಟ್ವೀಟರ್
ಟೀಂ ಇಂಡಿಯಾ-ಟ್ವೀಟರ್

ನವದೆಹಲಿ: ಜಿಯೋ ಮಹಿಳಾ ಟಿ20 ಚಾಲೆಂಜ್ ಗಾಗಿ ಟ್ವಿಟರ್ ಇಂಡಿಯಾ ಮತ್ತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಏಳು ಹೊಸ ಎಮೋಜಿಗಳನ್ನು ಬಳಸಿದೆ.

ನವೆಂಬರ್ 4ರಿಂದ ನವೆಂಬರ್9 ರವರೆಗೆ ಮೂರು ತಂಡಗಳ ನಡುವೆ ಪಂದ್ಯಾವಳಿ ನಡೆಯಲಿದ್ದು, ಯುಎಇಯಲ್ಲಿ ಎಲ್ಲಾ ನಾಲ್ಕು ಪಂದ್ಯಗಳು ನಡೆಯಲಿವೆ.

ಸೂಪರ್‌ನೋವಾಸ್, ಟ್ರೈಲ್‌ಬ್ಲೇಜರ್ಸ್ ಮತ್ತು ವೆಲಾಸಿಟಿ ತಂಡಗಳ ನಡುವೆ ಪಂದ್ಯಗಳು ನಡೆಯಲಿದ್ದು, ಕ್ರಮವಾಗಿ ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ ಮತ್ತು ಮಿಥಾಲಿ ರಾಜ್ ನೇತೃತ್ವ ವಹಿಸಲಿದ್ದಾರೆ.

"ಈ ಋತುವಿನಲ್ಲಿ ಬಳಕೆದಾರರ ಅನುಭವವನ್ನು ಹೆಚ್ಚಿಸಲು, ನಾವು ಲೀಗ್‌ ಗಾಗಿ ಏಳು ಹೊಸ ಕಸ್ಟಮ್ ಎಮೋಜಿಗಳನ್ನು ಪ್ರಾರಂಭಿಸಿದ್ದೇವೆ. ಹಾಗೆಯೇ ಅದರ ತಂಡಗಳು ಮತ್ತು ಆಯಾ ನಾಯಕರಿಗೆ ಈ ಇಮೋಜಿಗಳನ್ನು ನೀಡಲಾಗಿದೆ ಎಂದು ತಿಳಿಸಿದೆ.

ಈ ಕೆಳಗಿನ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳು ಈ ಎಮೋಜಿಗಳನ್ನು ಸಕ್ರಿಯಗೊಳಿಸಲು ಸಾಧ್ಯವಾಗುತ್ತದೆ: #ಮಿಥಾಲಿರಾಜ್ ಅಥವಾ #ಮಿಥಾಲಿ, #ಹರ್ಮನ್‌ಪ್ರೀತ್ ಅಥವಾ #ಹರ್ಮನ್, #ಸ್ಮೃತಿ ಅಥವಾ #ಎಸ್‌ಎಂ18, #ಮಹಿಳಾಟಿ20ಚಾಲೆಂಜ್, #ವೆಲಾಸಿಟಿ, #ಸೂಪರ್ನೋವಾಸ್ ಮತ್ತು #ಟ್ರೈಲ್‌ಬ್ಲೇಜರ್‌ಗಳು.

ಭಾರತೀಯ ಮಹಿಳಾ ಕ್ರೀಡಾ ಲೀಗ್‌ಗೆ ತನ್ನದೇ ಆದ ಟ್ವಿಟರ್ ಎಮೋಜಿ ದೊರೆತಿರುವುದು ಇದೇ ಮೊದಲು ಎಂದು ವೇದಿಕೆ ತಿಳಿಸಿದೆ.

2017ರಲ್ಲಿ ಮಹಿಳಾ ಕ್ರಿಕೆಟ್ ವಿಶ್ವಕಪ್‌ನಲ್ಲಿ ಎಮೋಜಿ ಪಡೆದ ಭಾರತದ ಮೊದಲ ಮಹಿಳಾ ಕ್ರಿಕೆಟ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಮಿಥಾಲಿ ರಾಜ್ ಪಾತ್ರರಾಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com