ಐಪಿಎಲ್ ಇತಿಹಾಸದಲ್ಲೇ ಈ ದಾಖಲೆ ನಿರ್ಮಿಸಿದ ಏಕೈಕ ತಂಡ ದೆಹಲಿ!

ನಿನ್ನೆ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಪ್ಲೇಆಫ್ ಗೇರಿದ ದೆಹಲಿ ತಂಡ ಅಪರೂಪದ ದಾಖಲೆಯೊಂದನ್ನು ನಿರ್ಮಿಸಿದ್ದು, ಈ ದಾಖಲೆ ಬರೆದ ಏಕೈಕ ತಂಡ ಎಂಬ ಕೀರ್ತಿಗೆ ಭಾಜನವಾಗಿದೆ.
ದೆಹಲಿ ತಂಡ
ದೆಹಲಿ ತಂಡ

ದುಬೈ: ನಿನ್ನೆ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಪ್ಲೇಆಫ್ ಗೇರಿದ ದೆಹಲಿ ತಂಡ ಅಪರೂಪದ ದಾಖಲೆಯೊಂದನ್ನು ನಿರ್ಮಿಸಿದ್ದು, ಈ ದಾಖಲೆ ಬರೆದ ಏಕೈಕ ತಂಡ ಎಂಬ ಕೀರ್ತಿಗೆ ಭಾಜನವಾಗಿದೆ.

ಹೌದು..ನಿನ್ನೆ ಆರ್ ಸಿಬಿ ವಿರುದ್ಧ ಗೆಲುವಿನ ಮೂಲಕ ಹಾಲಿ ಟೂರ್ನಿಯಲ್ಲಿ ದೆಹಲಿ ತಂಡ 2ನೇ ಸ್ಥಾನಕ್ಕೇರಿತು. ಆ ಮೂಲಕ ಐಪಿಎಲ್ ನಲ್ಲಿ ಎಲ್ಲ ಶ್ರೇಯಾಂಕಗಳನ್ನೂ ಪಡೆದ ಏಕೈಕ ತಂಡ ಎಂಬ ಕೀರ್ತಿಗೆ ದೆಹಲಿ ಪಾತ್ರವಾಗಿದೆ. 2009ರಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದ ದೆಹಲಿ, 2010ರಲ್ಲಿ 5ನೇ ಸ್ಥಾನ ಪಡೆದಿತ್ತು. 2011ರಲ್ಲಿ 10, 2012ರಲ್ಲಿ ಅಗ್ರ ಸ್ಥಾನ, 2013ರಲ್ಲಿ 9ನೇ ಸ್ಥಾನ, 2014ರಲ್ಲಿ 8ನೇ ಸ್ಥಾನ, 2015ರಲ್ಲಿ 7ನೇ ಸ್ಥಾನ, 2016 ಮತ್ತು 2017ರಲ್ಲಿ 6ನೇ ಸ್ಥಾನ, 2018ರಲ್ಲಿ 4, 2019ರಲ್ಲಿ 3, 2020ರಲ್ಲಿ 2ನೇ ಸ್ಥಾನ ಗಳಿಸಿದೆ.

ಆ ಮೂಲಕ ಐಪಿಎಲ್ ನಲ್ಲಿ ಎಲ್ಲ ಶ್ರೇಯಾಂಕದಲ್ಲೂ ಇದ್ದ ಏಕೈಕ ತಂಡ ಎಂಬ ಕೀರ್ತಿಗೆ ದೆಹಲಿ ತಂಡ ಭಾಜನವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com