ಐಪಿಎಲ್ 2020: 10 ವಿಕೆಟ್ ಗಳಿಂದ ಗೆಲುವು ಸಾಧಿಸಿ ಪ್ಲೇ ಆಫ್ ಗೆ ಎಂಟ್ರಿಯಾದ ಸನ್ ರೈಸರ್ಸ್ 

ಇಲ್ಲಿನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 56 ನೇ ಐಪಿಎಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್
ಮುಂಬೈ ಇಂಡಿಯನ್ಸ್ ತಂಡವನ್ನು ಭರ್ಜರಿ 10 ವಿಕೆಟ್ ಗಳಿಂದ ಸೋಲಿಸಿದ ಹೈದರಾಬಾದ್ ಸನ್ ರೈಸರ್ಸ್ ಪ್ಲೇ ಆಫ್ ಗೆ ಸಾಗಿದೆ.

Published: 03rd November 2020 11:30 PM  |   Last Updated: 03rd November 2020 11:33 PM   |  A+A-


SRH_Players1

ಡೇವಿಡ್ ವಾರ್ನರ್, ವೃದ್ದಿಮಾನ್ ಸಹಾ

Posted By : Nagaraja AB
Source : Online Desk

ಶಾರ್ಜಾ: ಇಲ್ಲಿನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 56 ನೇ ಐಪಿಎಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್
ಮುಂಬೈ ಇಂಡಿಯನ್ಸ್ ತಂಡವನ್ನು ಭರ್ಜರಿ 10 ವಿಕೆಟ್ ಗಳಿಂದ ಸೋಲಿಸಿದ ಹೈದರಾಬಾದ್ ಸನ್ ರೈಸರ್ಸ್ ಪ್ಲೇ ಆಫ್ ಗೆ ಸಾಗಿದೆ. ಇದರೊಂದಿಗೆ ಪ್ಲೇ ಆಫ್ ಕನಸು ಕಾಣುತ್ತಿದ್ದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಟೂರ್ನಿಯಿಂದ ಹೊರಗೆ ಬಿದ್ದಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್  20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತು. 
ಮುಂಬೈ ಇಂಡಿಯನ್ಸ್ ಪರ ಕೀರನ್ ಪೊಲಾರ್ಡ್ 41, ಸೂರ್ಯಕುಮಾರ್ ಯಾದವ್ 36, ಇಶಾನ್ ಕಿಶಾನ್ 33 ರನ್  ಗಳಿಸಿದರು.  
ಸನ್ ರೈಸರ್ಸ್ ಪರ ಸಂದೀಪ್ ಶರ್ಮಾ 2, ಶಹಬಾಜ್ ನದೀಮ್ 2,  ಜೇಸನ್ ಹೋಲ್ಡರ್ 2 ವಿಕೆಟ್ ಪಡೆದರು.

ಮುಂಬೈ ಇಂಡಿಯನ್ಸ್ ನೀಡಿದ 149 ರನ್ ಗಳ ಗುರಿ ಬೆನ್ನಟ್ಟಿದ್ದ ಹೈದರಾಬಾದ್ ಸನ್ ರೈಸರ್ಸ್  ತಂಡಕ್ಕೆ ಡೇವಿಡ್  ವಾರ್ನರ್ 58 ಎಸೆತಗಳಲ್ಲಿ 85, ವೃದ್ದಿಮಾನ್ ಸಹಾ 45 ಎಸತೆಗಳಲ್ಲಿ 58 ರನ್ ಗಳಿಸುವ ಮೂಲಕ 17.1 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ  151 ರನ್  ಕಲೆಹಾಕಿದರು. ಇದರೊಂದಿಗೆ ಹೈದರಾಬಾದ್ ಸನ್ ರೈಸರ್ಸ್ ತಂಡ ಗೆಲುವಿನ ನಗೆ ಬೀರಿತು.

Stay up to date on all the latest ಕ್ರಿಕೆಟ್ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp