ಆರ್ ಸಿಬಿ ನಾಯಕತ್ವದಿಂದ ಕೊಹ್ಲಿಯನ್ನು ಕಿತ್ತೊಗೆಯಲು ಸೂಕ್ತ ಸಮಯ: ಗೌತಮ್ ಗಂಭೀರ್

ಐಪಿಎಲ್ ಟ್ರೋಫಿ ಗೆಲ್ಲುವ ಮತ್ತೊಂದು ಅವಕಾಶವನ್ನು ವಿರಾಟ್ ಕೊಹ್ಲಿ ಕೈ ಚೆಲ್ಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವ ಸ್ಥಾನದಿಂದ ಕೊಹ್ಲಿಯನ್ನು ಕೆಳಗಿಳಿಸಲು ಇದು ಸೂಕ್ತ ಸಮಯ ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿದ್ದಾರೆ.
ವಿರಾಟ್ ಕೊಹ್ಲಿ-ಗೌತಮ್ ಗಂಭೀರ್
ವಿರಾಟ್ ಕೊಹ್ಲಿ-ಗೌತಮ್ ಗಂಭೀರ್

ಬೆಂಗಳೂರು: ಐಪಿಎಲ್ ಟ್ರೋಫಿ ಗೆಲ್ಲುವ ಮತ್ತೊಂದು ಅವಕಾಶವನ್ನು ವಿರಾಟ್ ಕೊಹ್ಲಿ ಕೈ ಚೆಲ್ಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವ ಸ್ಥಾನದಿಂದ ಕೊಹ್ಲಿಯನ್ನು ಕೆಳಗಿಳಿಸಲು ಇದು ಸೂಕ್ತ ಸಮಯ ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿದ್ದಾರೆ.

ನಿನ್ನೆ ನಡೆದ ಎಲಿಮಿನೇಟರ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಅಲ್ಪ ಮೊತ್ತ ಗಳಿಸಿ ಸೋಲು ಕಂಡ ಆರ್ ಸಿಬಿ ಟೂರ್ನಿಯಿಂದಲೇ ಹೊರಬಿದ್ದದೆ. ಹೀಗಾಗಿ ಮತ್ತೆ ಆರ್ ಸಿಬಿ ವೈಫಲ್ಯಕ್ಕೆ ನಾಯಕ ವಿರಾಟ್ ಕೊಹ್ಲಿ ಹೆಸರು ತಳುಕು ಹಾಕಿಕೊಂಡಿದ್ದು, ಕೊಹ್ಲಿಯನ್ನು ನಾಯಕತ್ವ ಸ್ಥಾನದಿಂದ ಕೆಳಗಿಳಿಸಬೇಕು ಎಂಬ ವಾದ ಕೇಳಿಬಂದಿದೆ. 

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಇಂತಹುದೊಂದು ವಾದ ಮುಂದಿಟ್ಟಿದ್ದು, ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ಜೊತೆ ಮಾತನಾಡಿದ ಗಂಭೀರ್, '8 ವರ್ಷಗಳು ಬೇಕಾದಷ್ಟು ಸಾಕಾಯ್ತು. ಆರ್ ಅಶ್ವಿನ್ ರನ್ನು ನೋಡಿ. ಕಿಂಗ್ಸ್ 11 ಪಂಜಾಬ್‌ಗೆ 2 ವರ್ಷ ಕ್ಯಾಪ್ಟನ್ ಆಗಿದ್ದರು. ಅಶ್ವಿನ್ ತಂಡಕ್ಕೆ ಚಾಂಪಿಯನ್ ಪಟ್ಟ ತರಲಿಲ್ಲ. ಅವರನ್ನು ಕಿತ್ತು ಹಾಕಲಾಯ್ತು ಎಂದು ಗಂಭೀರ್ ಹೇಳಿದ್ದಾರೆ. 

ನಾವು ಎಂಎಸ್ ಧೋನಿ ಬಗ್ಗೆ ಮಾತನಾಡುತ್ತೇವೆ, ರೋಹಿತ್ ಶರ್ಮಾ ಬಗ್ಗೆ ಮಾತನಾಡುತ್ತೇವೆ. ವಿರಾಟ್ ಕೊಹ್ಲಿ ಬಗ್ಗೆ ಮಾತನಾಡುತ್ತೇವೆ. ಆದರೆ ಧೋನಿ, ರೋಹಿತ್‌ ಬಗ್ಗೆ ಯಶಸ್ವಿಗಾಗಿ ಮಾತನಾಡಿದರೆ ಕೊಹ್ಲಿಯನ್ನು ನಾವು ಸೋಲಿಗಾಗಿ ನೆನಪಿಸಿಕೊಳ್ಳುತ್ತೇವೆ. ರೋಹಿತ್ 8 ವರ್ಷಗಳಲ್ಲಿ ಟ್ರೋಫಿ ಗೆಲ್ಲದಿದ್ದರೆ ಅವರನ್ನೂ ನಾಯಕತ್ವದಿಂದ ಕೆಳಗಿಸಲು ಹೇಳಬೇಕಾಗುತ್ತದೆ. ನೀವು ಓರ್ವ ನಾಯಕರಾಗಿ ತಂಡದ ಗೆಲುವಿನ ಶ್ರೇಯವನ್ನು ಹೇಗೆ ಪಡೆಯುತ್ತೀರೋ ಹಾಗೆಯೇ ಸೋಲಿನ ಹೊಣೆಗಾರಿಕೆ ಕೂಡ ನಿಮ್ಮದೇ ಆಗಿರುತ್ತದೆ. ನೀವು ಯಾವಾಗಲೂ ಹೇಳಿತ್ತೀರಲ್ಲ... ಆರ್ ಸಿಬಿ ಪ್ಲೇಆಫ್ ಗೇರಲು ಅರ್ಹ ತಂಡ ಎಂದು ಅದು ಸತ್ಯವಲ್ಲ. ಪ್ಲೇಆಫ್ ಗೇರಲು ಆರ್ ಸಿಬಿ ಅರ್ಹ ತಂಡವಾಗಿರಲಿಲ್ಲ. ಆರ್ ಸಿಬಿ ಕೇವಲ ಇಬ್ಬರು ಆಟಗಾರರ ಮೇಲೆ ಕೇಂದ್ರಿತವಾಗಿದೆ. ಅದು ಕೊಹ್ಲಿ ಮತ್ತು ಎಬಿಡಿ.. ಕೇವಲ ಇಬ್ಬರು ಆಟಗಾರರನ್ನು ಮಾತ್ರ ತಂಡ ಎಂದು ಕರೆಯಲು ಸಾಧ್ಯವಿಲ್ಲ. ಒಂದು ಈ ಸೀಸನ್ ನಲ್ಲಿ ಎಬಿಡಿ ಉತ್ತಮ ಪ್ರದರ್ಶನ ನೀಡದೇ ಹೋಗಿದ್ದರೆ ಆರ್ ಸಿಬಿ ಪರಿಸ್ಥಿತಿ ಏನು.. ಎಬಿಡಿ ರನ್ ಗಳನ್ನು ಹೊರತು ಪಡಿಸಿದರೆ ಆರ್ ಸಿಬಿ ಗಳಿಸಿದ ರನ್ ಗಳೆಷ್ಟು ಎಂಬುದನ್ನು ಪರಿಶೀಲಿಸಿದರೂ ಆರ್ ಸಿಬಿ ಪ್ಲೇಆಫ್ ಗೇರಲು ಅರ್ಹ ತಂಡವಾಗಿತ್ತೇ ಎಂಬುದು ತಿಳಿಯುತ್ತದೆ ಎಂದು ಗಂಭೀರ್ ಹೇಳಿದ್ದಾರೆ. 

7 ಪಂದ್ಯಗಳ ಪೈಕಿ ಕೇವಲ 3 ಪಂದ್ಯಗಳಿಂದ ನೀವು ಪ್ಲೇ ಆಫ್ ಹಂತಕ್ಕೇರಿದ್ದೀರಿ. ಕಳೆದ ವರ್ಷ ಏನಾಗಿತ್ತೇ ಅದೇ ಈ ವರ್ಷವೂ ಪುನರಾವರ್ತನೆಯಾಗಿದೆ ಎಂದು ಗಂಭೀರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com