'ನನಗೆ ನಿಜವಾಗಿಯೂ ಇದು ದೊಡ್ಡ ಸಾಧನೆ': ಪಡಿಕ್ಕಲ್

ಕಳೆದ ನಾಲ್ಕೈದು ವರ್ಷದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಸ್ಥಳೀಯ ಆಟಗಾರರಿಗೆ ಸೂಕ್ತವಾದ ಸ್ಥಾನಮಾನ ಮತ್ತು ಬೆಂಬಲ ಸಿಕ್ಕಿರಲಿಲ್ಲ. 2020ರಲ್ಲಿ ಅಚ್ಚಿರಿಯೆಂಬಂತೆ ದೇವದತ್ ಪಡಿಕ್ಕಲ್‌ಗೆ ಅವಕಾಶ ದೊರೆಯಿತು. ಸಿಕ್ಕ ಅವಕಾಶವನ್ನು ಎರಡು ಕೈಗಳಿಂದ ಬಾಚಿಕೊಂಡು ಪಡಿಕ್ಕಲ್ ಈ ಆವೃತ್ತಿಯಲ್ಲಿ ಅದ್ಭುತ ಆಟ ಪ್ರದರ್ಶಿಸಿದರು. 
ದೇವದತ್ ಪಡಿಕ್ಕಲ್‌
ದೇವದತ್ ಪಡಿಕ್ಕಲ್‌

ನವದೆಹಲಿ:  ಕಳೆದ ನಾಲ್ಕೈದು ವರ್ಷದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಸ್ಥಳೀಯ ಆಟಗಾರರಿಗೆ ಸೂಕ್ತವಾದ ಸ್ಥಾನಮಾನ ಮತ್ತು ಬೆಂಬಲ ಸಿಕ್ಕಿರಲಿಲ್ಲ. 2020ರಲ್ಲಿ ಅಚ್ಚಿರಿಯೆಂಬಂತೆ ದೇವದತ್ ಪಡಿಕ್ಕಲ್‌ಗೆ ಅವಕಾಶ ದೊರೆಯಿತು. ಸಿಕ್ಕ ಅವಕಾಶವನ್ನು ಎರಡು ಕೈಗಳಿಂದ ಬಾಚಿಕೊಂಡು ಪಡಿಕ್ಕಲ್ ಈ ಆವೃತ್ತಿಯಲ್ಲಿ ಅದ್ಭುತ ಆಟ ಪ್ರದರ್ಶಿಸಿದರು. ಆರ್‌ಸಿಬಿ ಪರ ಅತಿ ಹೆಚ್ಚು ರನ್ ಕಲೆ ಹಾಕಿರುವ ಆಟಗಾರ ಸಹ ಎನಿಸಿಕೊಂಡರು.ದೇವದತ್ ಪಡಿಕ್ಕಲ್ ಅಮೋಘ ಆಟಕ್ಕೆ 2020ರ 'ಎಮರ್ಜಿಂಗ್ ಪ್ಲೇಯರ್' ಪ್ರಶಸ್ತಿ ಸಹ ಲಭಿಸಿದೆ. 'ಈ ಪ್ರಶಸ್ತಿ ನನಗೆ ನಿಜವಾಗಿಯೂ ದೊಡ್ಡ ಸಾಧನೆ. ಮುಂದಿನ ಹಾದಿಯ ಬಗ್ಗೆ ನನಗೆ ಆತ್ಮವಿಶ್ವಾಸ ಹೆಚ್ಚಿಸಿದೆ' ಎಂದು ಆರ್‌ಸಿಬಿ ಪರ ಚೊಚ್ಚಲ ಐಪಿಎಲ್ ಟೂರ್ನಿ ಆಡಿದ ಪಡಿಕ್ಕಲ್ ಸಂತಸ ವ್ಯಕ್ತಪಡಿಸಿದ್ದಾರೆ.

20 ವರ್ಷ ದೇವದತ್ ಪಡಿಕ್ಕಲ್ ಈ ಆವೃತ್ತಿಯಲ್ಲಿ 15 ಪಂದ್ಯಗಳಲ್ಲಿ 473 ರನ್ ಬಾರಿಸಿದ್ದಾರೆ. ಇದರಲ್ಲಿ ಐದು ಅಮೋಘ ಅರ್ಧ ಶತಕ ಸೇರಿದೆ.ಸನ್‌ರೈಸ್‌ ಹೈದರಾಬಾದ್‌ ವಿರುದ್ಧ ಚೊಚ್ಚಲ ಪಂದ್ಯ ಆಡಿದ ಪಡಿಕ್ಕಲ್ ಅರ್ಧಶತಕ ಬಾರಿಸಿ ದಾಖಲೆಯ ಪ್ರವೇಶ ಮಾಡಿದರು. ಅಲ್ಲಿಂದ ಸ್ಥಿರವಾಗಿ ಪ್ಲೇ ಆಫ್ ಹಂತದವರೆಗೂ ಆರ್‌ಸಿಬಿಗೆ ಬಲವಾಗಿ ನಿಂತರು. ಮೊದಲ ಐದು ಪಂದ್ಯಗಳಲ್ಲಿ ನಾಲ್ಕು ಅರ್ಧ ಶತಕ ಬಾರಿಸಿ ಕ್ರಿಕೆಟ್ ಪ್ರೇಮಿಗಳ ಹೃದಯ ಕದ್ದರು. ಐಪಿಎಲ್ ಚೊಚ್ಚಲ ಆವೃತ್ತಿಯಲ್ಲಿ 400ಕ್ಕೂ ಹೆಚ್ಚು ರನ್ ಬಾರಿಸಿದ ಅನ್‌ಕ್ಯಾಪ್ ಆಟಗಾರರ ಪೈಕಿ ದೇವದತ್ ಪಡಿಕ್ಕಲ್ ಎರಡನೇಯವರು. 31.53ರ ಸರಾಸರಿಯಂತೆ 124ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿರುವ ಪಡಿಕ್ಕಲ್ 473 ರನ್ ಹೊಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com