ಐಪಿಎಲ್ 2021: ಭಾರತದ ಚುಟುಕು ಕ್ರಿಕೆಟ್ ಟೂರ್ನಿಗೆ ಹೊಸ ತಂಡ ಸೇರ್ಪಡೆ

ಇತ್ತೀಚೆಗಷ್ಟೇ ಮುಕ್ತಾಯವಾದ ಭಾರತದ ಚುಟುಕು ಕ್ರಿಕೆಟ್ ಟೂರ್ನಿ ಐಪಿಎಲ್ ನ ಮುಂದಿನ ವರ್ಷದ ಆವೃತ್ತಿಗೆ ಈಗಿನಿಂದಲೇ ಸಿದ್ದತೆಗಳು ಆರಂಭವಾಗಿದ್ದು, ಮುಂದಿನ ವರ್ಷ ಹೊಸ ತಂಡವೊಂದು ಸೇರ್ಪಡೆಯಾಗಲಿದೆ.
ಐಪಿಎಲ್
ಐಪಿಎಲ್

ಚೆನ್ನೈ: ಇತ್ತೀಚೆಗಷ್ಟೇ ಮುಕ್ತಾಯವಾದ ಭಾರತದ ಚುಟುಕು ಕ್ರಿಕೆಟ್ ಟೂರ್ನಿ ಐಪಿಎಲ್ ನ ಮುಂದಿನ ವರ್ಷದ ಆವೃತ್ತಿಗೆ ಈಗಿನಿಂದಲೇ ಸಿದ್ದತೆಗಳು ಆರಂಭವಾಗಿದ್ದು, ಮುಂದಿನ ವರ್ಷ ಹೊಸ ತಂಡವೊಂದು ಸೇರ್ಪಡೆಯಾಗಲಿದೆ.

ಹೌದು.. ಈ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐ ಮಾಹಿತಿ ನೀಡಿದ್ದು, ಮುಂದಿನ ವರ್ಷದ ಐಪಿಎಲ್ ಟೂರ್ನಿಗೆ ಮುಂದಿನ ವರ್ಷ ಹೊಸ ತಂಡವೊಂದರ ಸೇರ್ಪಡೆಯಾಗಲಿದೆ ಎಂದು ಮಾಹಿತಿ ನೀಡಿದೆ. ಪ್ರಸ್ತುತ ಐಪಿಎಲ್ ನಲ್ಲಿ 8 ತಂಡಗಳಿದ್ದು, ಮುಂದಿನ ವರ್ಷ ಅಹ್ಮದಾಬಾದ್ ತಂಡ 9ನೇ  ತಂಡವಾಗಿ ಕಣಕ್ಕಿಳಿಯಲಿದೆ. ಈ ಬಗ್ಗೆ ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಅಧಿಕೃತವಾಗಿ ಫ್ರಾಂಚೈಸಿಗಳೊಂದಿಗೆ ಮಾತನಾಡಿದ್ದು, ಮುಂದಿನ ಐಪಿಎಲ್ ಸಭೆಯಲ್ಲಿ ಈ ಬಗ್ಗೆ ವಿಸ್ಮೃತ ಚರ್ಚೆಗಳಾಗಲಿವೆ ಎಂದು ತಿಳಿದುಬಂದಿದೆ.

ಈ ಚರ್ಚೆಗಳ ಬಳಿಕ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಆದರೆ ಮುಂದಿನ ಐಪಿಎಲ್ ಆವೃತ್ತಿಗೆ ಕೇವಲ 6 ತಿಂಗಳ ಅಂತರವಿದ್ದು, ಆರು ತಿಂಗಳ ಈ ಚಿಕ್ಕ ಅವಧಿಯಲ್ಲಿ ಸಿದ್ಧತೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಫ್ರಾಂಚೈಸಿಗಳು ಮುಂದಿನ ಸರಣಿಗೆ ಕನಿಷ್ಠ ಒಂದು ವರ್ಷವಾದರೂ  ಅಂತರವಿರಬೇಕು ಎಂದು ಕೇಳಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ಮುಂದಿನ ಆವೃತ್ತಿಯ ಐಪಿಎಲ್ ಸರಣಿಯನ್ನು ಮಾರ್ಚ್ ನಲ್ಲಿ ಆಯೋಜಿಸುವ ಕುರಿತು ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗಿದೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಫ್ರಾಂಚಿಸಿಯೊಬ್ಬರು, 'ಒಂದೆರಡು ತಿಂಗಳಲ್ಲಿ ಹರಾಜಿಗೆ ಸಿದ್ಧರಾಗುವಂತೆ ಬಿಸಿಸಿಐ ಹೇಳಿದೆ. ಇದು ಅಧಿಕೃತವಲ್ಲದಿದ್ದರೂ, ಅವರು ನಮ್ಮನ್ನು ಸಿದ್ಧರಾಗಿರಲು ಕೇಳಿಕೊಂಡಿದ್ದಾರೆ ಎಂದರೆ ಅವರು ಯೋಜಿಸಿದಂತೆ ಮುಂದುವರಿಯುತ್ತಾರೆ. ಇದಲ್ಲದೆ, ಹೊಸ ತಂಡವು  ಬರುತ್ತಿರುವುದರಿಂದ, ಅದನ್ನು ಒಂದು ವರ್ಷ ಮುಂದೂಡುವ ಬದಲು ಈಗ ಹರಾಜು ನಡೆಸುವುದು ಅರ್ಥಪೂರ್ಣವಾಗಿದೆ ಎಂದು ಹೇಳಿದ್ದಾರೆ.

ಹರಾಜು ಪ್ರಕ್ರಿಯೆ ಹೆಚ್ಚು ಕಡಿಮೆ ಅಂತಿಮವಾಗಿದ್ದರೂ, ಆಟಗಾರರನ್ನು ಉಳಿಸಿಕೊಳ್ಳುವ ಬಗ್ಗೆ ಸ್ಪಷ್ಟತೆ ಇಲ್ಲ. ಮೂರು ವರ್ಷಗಳಿಗೊಮ್ಮೆ ನಡೆಯುವ ದೊಡ್ಡ ಹರಾಜಿನಲ್ಲಿ, ತಂಡಗಳಿಗೆ ನಾಲ್ಕು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ. ರೈಟ್-ಟು-ಮ್ಯಾಚ್ ಕಾರ್ಡ್ ಸಹ ಲಭ್ಯವಿದೆ. ಹೊಸ ತಂಡವು  ಬಂದರೂ ಹಾಲಿ ನಿಯಮ ಮುಂದುವರಿಯಬೇಕು ಏಕೆಂದರೆ ಈ ಹಂತದಲ್ಲಿ, ಎಲ್ಲಾ ಆಟಗಾರರನ್ನು ಹರಾಜು ಪೂಲ್‌ನಲ್ಲಿ ಇಡುವುದು ಜಾಣತನವಲ್ಲ. ತಂಡಗಳು ತಮ್ಮ ಸ್ಟಾರ್ ಆಟಗಾರರ ಮೇಲೆ ನಿರ್ಮಿಸಲಾದ ಬ್ರಾಂಡ್ ಮೌಲ್ಯದ ಬಗ್ಗೆ ರಾಜಿ ಮಾಡಿಕೊಳ್ಳಬೇಕಾಗುತ್ತದೆ ಎಂದು ಮತ್ತೊಬ್ಬ ಫ್ರ್ಯಾಂಚೈಸ್ ಅಧಿಕಾರಿ  ಹೇಳಿದರು.

ಬಿಸಿಸಿಐ ಮೂಲಗಳ ಪ್ರಕಾರ ಅಹ್ಮದಾಬಾದ್ ನೂತನ ಐಪಿಎಲ್ ತಂಡವಾಗಿದ್ದು, ಈ ತಂಡ ಇತ್ತೀಚೆಗೆ ಹೊಸದಾಗಿ ನಿರ್ಮಾಣವಾಗಿರುವ ಸರ್ದಾರ್ ವಲ್ಲಭಬಾಯ್ ಕ್ರಿಕೆಟ್ ಮೈದಾನವನ್ನು ತವರು ಅಂಗಳವಾಗಿ ಆಯ್ಕೆ ಮಾಡಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com