ಆಸ್ಟ್ರೇಲಿಯಾ ವಿರುದ್ಧದ ಕ್ರಿಕೆಟ್ ಸರಣಿಗಾಗಿ ದುಬೈನಿಂದ ಪ್ರಯಾಣ ಬೆಳೆಸಿದ ಟೀಂ ಇಂಡಿಯಾ

ಮೂರು ಏಕದಿನ, ಮೂರು ಟಿ-20 ಹಾಗೂ ನಾಲ್ಕು ಟೆಸ್ಟ್  ಕ್ರಿಕೆಟ್ ಸರಣಿಗಾಗಿ ಟೀಂ ಇಂಡಿಯಾ ಎರಡು ತಿಂಗಳ ಕಾಲ ಆಸ್ಟ್ರೇಲಿಯಾ ಪ್ರಯಾಣ ಬೆಳೆಸಿದೆ.    
ಟೀಂ ಇಂಡಿಯಾ ಆಟಗಾರರು
ಟೀಂ ಇಂಡಿಯಾ ಆಟಗಾರರು

ದುಬೈ: ಆಸೀಸ್ ವಿರುದ್ಧದ ಮೂರು ಏಕದಿನ, ಮೂರು ಟಿ-20 ಹಾಗೂ ನಾಲ್ಕು ಟೆಸ್ಟ್  ಕ್ರಿಕೆಟ್ ಸರಣಿಗಾಗಿ ಟೀಂ ಇಂಡಿಯಾ ಎರಡು ತಿಂಗಳ ಕಾಲ ಆಸ್ಟ್ರೇಲಿಯಾ ಪ್ರಯಾಣ ಬೆಳೆಸಿದೆ.    

ಕೋವಿಡ್-19 ಸಾಂಕ್ರಾಮಿಕದ ನಡುವೆ  ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಿದ ಟೀಂ ಇಂಡಿಯಾ ಆಟಗಾರರ ಫೋಟೋಗಳನ್ನು ಬಿಸಿಸಿಐ ಟ್ವೀಟ್ ಮಾಡಿದೆ.

ಐಪಿಎಲ್ ನಲ್ಲಿ ಪಾಲ್ಗೊಂಡಿದ್ದ ಬಹುತೇಕ ಆಟಗಾರರೇ  ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ್ದು, ಟೆಸ್ಟ್ ಪರಿಣಿತ ಚೇತೇಶ್ವರ್ ಪೂಜಾರಾ ಮತ್ತು ಬೆಂಬಲಿಗ ಸಿಬ್ಬಂದಿ ಕಳೆದ ತಿಂಗಳು ಇಲ್ಲಿಗೆ ಆಗಮಿಸಿದ್ದರು.

ಗುರುವಾರ ರಾತ್ರಿ ಐದನೇ ಬಾರಿಗೆ ಐಪಿಎಲ್ ಪ್ರಶಸ್ತಿ ಮುಡಿಗೇರಿಸಿಕೊಂಡ ಮುಂಬೈ ಇಂಡಿಯಾ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಗಾಯದಿಂದ ಚೇತರಿಸಿಕೊಂಡಿರುವ ಇಶಾಂತ್ ಶರ್ಮಾ ತದನಂತರ ಟೀಂ ಇಂಡಿಯಾವನ್ನು ಸೇರಿಕೊಳ್ಳಲಿದ್ದಾರೆ.

 ಗಾಯದ ಸಮಸ್ಯೆಯಿಂದ ರೋಹಿತ್ ಶರ್ಮಾ ಅವರನ್ನು ಆಸ್ಟ್ರೇಲಿಯಾ ಪ್ರವಾಸದಿಂದ ಕೈ ಬಿಡಲಾಗಿತ್ತು. ಈ ಬಗ್ಗೆ ಸಾಕಷ್ಟು ಚರ್ಚೆ ನಡೆದ ಬಳಿಕ ಆಯ್ಕೆದಾರರು ರೋಹಿತ್ ಶರ್ಮಾ ಅವರನ್ನು ಟೆಸ್ಟ್ ತಂಡದ ಆಟಗಾರನಾಗಿ ಆಯ್ಕೆ ಮಾಡಿದೆ. ಟೆಸ್ಟ್ ವಿಕೆಟ್ ಕೀಪರ್ ವೃದ್ಧಿಮನ್ ಸಹಾ ಕೂಡಾ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಸಿಡ್ನಿಯಲ್ಲಿ ಬಂದಿಳಿಯಲಿರುವ ಟೀಂ ಇಂಡಿಯಾ 14 ದಿನಗಳ ಕ್ವಾರಂಟೈನ್ ನಲ್ಲಿದ್ದು, ನವೆಂಬರ್ 27 ರಿಂದ ಮೂರು ಏಕದಿನ, ಮೂರು ಟಿ-20 ಹಾಗೂ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ನವೆಂಬರ್ 27 ರಿಂದ ಡಿಸೆಂಬರ್ 8ವರೆಗೂ ಸಿಡ್ನಿ ಮತ್ತು ಕ್ಯಾನ್ ಬೆರಾದಲ್ಲಿ ಏಕದಿನ ಹಾಗೂ ಟಿ-20 ಸರಣಿ ನಡೆಯಲಿದೆ. ಡಿಸೆಂಬರ್ 17 ರಿಂದ ಬಹು ನಿರೀಕ್ಷಿತ ಅಡಿಲೆಡ್ ಹಗಲು ರಾತ್ರಿ ಟೆಸ್ಟ್ ಸರಣಿ ಆರಂಭವಾಗಲಿದೆ. 

ಅನುಷ್ಕಾ ಶರ್ಮಾ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದರಿಂದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಮೊದಲ ಟೆಸ್ಟ್ ನಂತರ ಪಿತೃತ್ವ ರಜೆ ನೀಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com