ಭಾರತದಲ್ಲಿ 2021ರ ಟಿ20 ವಿಶ್ವಕಪ್ ಟೂರ್ನಿ ಆಯೋಜನೆ ಅತ್ಯಂತ ಗೌರವದ ವಿಚಾರ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

ಭಾರತದಲ್ಲಿ 2021ರ ಟಿ20 ವಿಶ್ವಕಪ್ ಟೂರ್ನಿ ಆಯೋಜಿಸಿರುವುದು ಅತ್ಯಂತ ಗೌರವದ ವಿಚಾರ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ಐಸಿಸಿ ಕಾರ್ಯಕ್ರಮದಲ್ಲಿ ಗಂಗೂಲಿ
ಐಸಿಸಿ ಕಾರ್ಯಕ್ರಮದಲ್ಲಿ ಗಂಗೂಲಿ

ದುಬೈ: ಭಾರತದಲ್ಲಿ 2021ರ ಟಿ20 ವಿಶ್ವಕಪ್ ಟೂರ್ನಿ ಆಯೋಜಿಸಿರುವುದು ಅತ್ಯಂತ ಗೌರವದ ವಿಚಾರ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ ಟೂರ್ನಿ 2021ರ ಅಧಿಕೃತ ಲೋಗೋ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸೌರವ್ ಗಂಗೂಲಿ, ಟಿ20 ವಿಶ್ವಕಪ್ ನಂತಹ ಜಾಗತಿಕ ಟೂರ್ನಿ ಆಯೋಜನೆ ಭಾರತಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಭಾರತ ಈಗಾಗಲೇ ಸಾಕಷ್ಟು ಬಾರಿ ಜಾಗತಿಕ  ಟೂರ್ನಿಗಳನ್ನು ಯಶಸ್ವಿಯಾಗಿ ಆಯೋಜನೆ ಮಾಡಿದೆ. 1987ರಲ್ಲಿ ಭಾರತ ಮೊದಲ ವಿಶ್ವಕಪ್ ಟೂರ್ನಿ ಆಯೋಜನೆ ಮಾಡಿತ್ತು. ಆ ಬಳಿಕ ಕ್ರಿಕೆಟ್ ದೇಶದಲ್ಲಿ ಒಂದು ಧರ್ಮವಾಗಿ ಮಾರ್ಪಟ್ಟಿದೆ. ಜಗತ್ತಿನಲ್ಲಿಯೇ ಅತೀ ಹೆಚ್ಚು ಕ್ರಿಕೆಟ್ ಅಭಿಮಾನಿಗಳನ್ನು ಹೊಂದಿದ ರಾಷ್ಟ್ರ ಭಾರತ ಎಂದು  ಹೇಳಿದ್ದಾರೆ.

ಅಂತೆಯೇ ಓರ್ವ ಆಟಗಾರನಾಗಿ ನಾನು ಸಾಕಷ್ಟು ಆಟವನ್ನು ಅನಂದಿಸಿದ್ದೇನೆ. ಹೀಗಾಗಿ ಈ ನೆಲದ ಕ್ರೀಡಾ ಅನುಭವ ನನಗೆ ತಿಳಿದಿದೆ. ಇದೀಗ ಓರ್ವ ಆಡಳಿತ ಅಧಿಕಾರಿಯಾಗಿ ಒಂದು ಜಾಗತಿಕ ಟೂರ್ನಿ ಆಯೋಜನೆಯನ್ನು ಎದುರು ನೋಡುತ್ತಿದ್ದೇನೆ ಎಂದು  ಗಂಗೂಲಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com