ಈ ದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಸಚಿನ್ ತೆಂಡೊಲ್ಕರ್

 ವಿಶ್ವ ಕ್ರಿಕೆಟ್‌ನಲ್ಲಿ ಅಚ್ಚಳಿಯದ ಹಲವು ದಾಖಲೆಗಳ ಛಾಪು ಮೂಡಿಸಿದ ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆಯನ್ನು ಮಾಡಿ ಇಂದಿಗೆ ಸರಿಯಾಗಿ 31 ವರ್ಷಗಳಾಗಿದೆ.
ಸಚಿನ್ ತೆಂಡೊಲ್ಕರ್
ಸಚಿನ್ ತೆಂಡೊಲ್ಕರ್

ನವದೆಹಲಿ: ವಿಶ್ವ ಕ್ರಿಕೆಟ್‌ನಲ್ಲಿ ಅಚ್ಚಳಿಯದ ಹಲವು ದಾಖಲೆಗಳ ಛಾಪು ಮೂಡಿಸಿದ ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆಯನ್ನು ಮಾಡಿ ಇಂದಿಗೆ ಸರಿಯಾಗಿ 31 ವರ್ಷಗಳಾಗಿದೆ. 1989ರ ನವೆಂಬರ್ 15ರಂದು ಸಚಿನ್ ತೆಂಡೂಲ್ಕರ್ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡಿದ್ದರು. 

16ರ ಹರೆಯದ ಸಚಿನ್ ತೆಂಡೂಲ್ಕರ್ ತಮ್ಮ ಪಾದಾರ್ಪಣಾ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಕರಾಚಿಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಅಂದು ಆಡಿದ್ದರು. ಇದೇ ಪಂದ್ಯದಲ್ಲಿ ಪಾಕಿಸ್ತಾನದ ವೇಗಿ ವಾಕರ್ ಯೂನಿಸ್ ಕೂಡ ಪಾಕ್ ತಂಡದ ಪರವಾಗಿ ಮೊದಲ ಬಾರಿಗೆ ಕಣಕ್ಕಿಳಿದಿದ್ದರು.

ವಿಶ್ವಶ್ರೇಷ್ಠ ಕ್ರಿಕೆಟಿಗನ ಈ ಪಾದಾರ್ಪಣಾ ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು. ಈ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಮೊದಲ ಇನ್ನಿಂಗ್ಸ್‌ನಲ್ಲಿ ಮಾತ್ರವೆ ಬ್ಯಾಟಿಂಗ್ ಮಾಡುವ ಅವಕಾಶ ದೊರಕಿತ್ತು. ಆದರೆ ಈ ಅವಕಾಶದಲ್ಲಿ ಸಚಿನ್ ವಿಫಲರಾಗಿದ್ದರು. ಕೇವಲ 15 ರನ್ ಗಳಿಸಿ ಸಚಿನ್ ವಾಕರ್ ಯೂನಿಸ್‌ಗೆ ವಿಕೆಟ್ ಒಪ್ಪಿಸಿದ್ದರು. ಆದರೆ ಬಳಿಕ ಸಚಿನ್ ವಿಶ್ವ ಶ್ರೇಷ್ಠ ಕ್ರಿಕೆಟಿಗನಾಗಿ ಬೆಳೆಯುತ್ತಾ ಸಾಗಿದರು.

 ಕ್ರಿಕೆಟ್‌ನ ಮಹೋನ್ನತ ದಾಖಲೆಗಳನ್ನೆಲ್ಲಾ ತಮ್ಮ ಹೆಸರಿಗೆ ಬರೆದುಕೊಳ್ಳುತ್ತಾ ಮುನ್ನುಗ್ಗಿದ್ದರು. ಕ್ರಿಕೆಟ್‌ನಲ್ಲಿ ಮಾಸ್ಟರ್ ಬ್ಲಾಸ್ಟರ್ ಎಂಬ ಖ್ಯಾತಿಯ ಜೊತೆಗೆ ಅಭಿಮಾನಿಗಳಿಂದ ಕ್ರಿಕೆಟ್ ದೇವರು ಎನಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com