ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್: ಗಳಿಸಿದ ಅಂಕಗಳ ಆಧಾರದ ಮೇಲೆ ಫೈನಲ್ ತಂಡಗಳ ನಿರ್ಧಾರ: ಐಸಿಸಿ

ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಐಸಿಸಿ ಆರಂಭಿಸಿದ್ದ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಅಂತಿಮ ಹಂತಕ್ಕೆ ಬಂದು ನಿಂತಿದ್ದು, ತಂಡಗಳು ಗಳಿಸಿರುವ ಅಂಕಗಳ ಆಧಾರದ ಮೇಲೆ ಫೈನಲ್ ತಂಡಗಳ ನಿರ್ಧಾರ ಮಾಡಲು ಐಸಿಸಿ ಗಂಭೀರ ಚಿಂತನೆಯಲ್ಲಿ ತೊಡಗಿದೆ.
ಅಗ್ರ ಸ್ಥಾನಿ ಭಾರತ ತಂಡ
ಅಗ್ರ ಸ್ಥಾನಿ ಭಾರತ ತಂಡ

ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಐಸಿಸಿ ಆರಂಭಿಸಿದ್ದ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಅಂತಿಮ ಹಂತಕ್ಕೆ ಬಂದು ನಿಂತಿದ್ದು, ತಂಡಗಳು ಗಳಿಸಿರುವ ಅಂಕಗಳ ಆಧಾರದ ಮೇಲೆ ಫೈನಲ್ ತಂಡಗಳ ನಿರ್ಧಾರ ಮಾಡಲು ಐಸಿಸಿ ಗಂಭೀರ ಚಿಂತನೆಯಲ್ಲಿ ತೊಡಗಿದೆ.

ಕೋವಿಡ್ –19 ಸೃಷ್ಟಿಸಿರುವ ಬಿಕ್ಕಟ್ಟಿನಿಂದಾಗಿ ಸಂಪೂರ್ಣ ಚಾಂಪಿಯನ್ ಷಿಪ್ ನಡೆಯಲಿಲ್ಲ. ಆದರೂ ಈ ಅವಧಿಯಲ್ಲಿ ನಡೆಯಬೇಕಿದ್ದ ಉಳಿದಿರುವ ಪಂದ್ಯಗಳನ್ನು ಡ್ರಾ ಎಂದು ಘೋಷಣೆ ಮಾಡಿ ಅಲ್ಲಿಂದ ಮೊದಲ ಎರಡು ಸ್ಥಾನಗಳಲ್ಲಿರುವ ತಂಡಗಳನ್ನು ಫೈನಲ್ ಹಂತಕ್ಕೆ ಆಯ್ಕೆ ಮಾಡುವ ಕುರಿತು ಐಸಿಸಿ  ಪ್ರಸ್ತಾಪವೊಂದನ್ನು ಸಲ್ಲಿಸಿದೆ.

ಈ ಬಗ್ಗೆ ಇಎಸ್‌ಪಿಎನ್ ಕ್ರಿಕ್ ಇನ್ಫೋ ವರದಿ ಮಾಡಿದ್ದು, 'ತಂಡಗಳು ಈಗಾಗಲೇ ಆಡಿರುವ ಪಂದ್ಯಗಳಲ್ಲಿ ಗಳಿಸಿರುವ ಪಾಯಿಂಟ್ಸ್‌ಗಳ ಶೇಕಡಾವಾರು ಆಧಾರದಲ್ಲಿ ಫೈನಲ್‌ ತಂಡಗಳನ್ನು ನಿರ್ಧರಿಸಲಾಗುವ ಕುರಿತು ಸೋಮವಾರ ನಡೆಯಲಿರುವ ಐಸಿಸಿಯ ತ್ರೈಮಾಸಿಕ ಸಭೆಯಲ್ಲಿ ಚರ್ಚಿಸುವ ಸಾಧ್ಯತೆ ಇದೆ. 

ಕೋವಿಡ್‌ನಿಂದಾಗಿ ನಡೆಯದಿರುವ ಪಂದ್ಯಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದು ಇದರ ಹಿಂದಿನ ಉದ್ದೇಶವಾಗಿದೆ. ಈ ಪಂದ್ಯಗಳ ಅಂಕಗಳನ್ನು ಡ್ರಾ ಮಾದರಿಯಲ್ಲಿ ಹಂಚುವ ಕುರಿತು ಯೋಚಿಸಲಾಗುತ್ತಿದೆ. ಟೂರ್ನಿಯ ವೇಳಾಪಟ್ಟಿಯಲ್ಲಿ ಈ ಮೊದಲು ನಿಗದಿಯಾಗಿರುವಂತೆ ಅಗ್ರಶ್ರೇಯಾಂಕದ ಒಂಬತ್ತು ತಂಡಗಳು  ಎರಡು ವರ್ಷಗಳ ಅವಧಿಯಲ್ಲಿ ಆರು ಸರಣಿಗಳಲ್ಲಿ ಆಡಬೇಕಿತ್ತು.  ಅಗ್ರ ಎರಡು ತಂಡಗಳು ಮುಂದಿನ ವರ್ಷದ ಜೂನ್‌ನಲ್ಲಿ ಲಾರ್ಡ್ಸ್‌ನಲ್ಲಿ ಫೈನಲ್‌ ನಲ್ಲಿ  ಆಡಲಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸದ್ಯ ಪಾಯಿಂಟ್ಸ್‌ ಪಟ್ಟಿಯಲ್ಲಿ ಭಾರತ ತಂಡವು (360 ಅಂಕ) ಮೊದಲ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ (296) ಮತ್ತು ಇಂಗ್ಲೆಂಡ್ (292) ಮತ್ತು ನ್ಯೂಜಿಲೆಂಡ್ (180) ನಂತರದ ಮೂರು ಸ್ಥಾನಗಳಲ್ಲಿವೆ. 166 ಅಂಕಗಳನ್ನು ಗಳಿಸಿರುವ ಪಾಕಿಸ್ತಾನ ಐದನೇ ಸ್ಥಾನದಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com